- ತೆರೆಗೆ ಬರಲು ಸಿದ್ಧವಾಗಿದೆ “ಚಾಮಯ್ಯ ಸನ್ ಆಫ್ ರಾಮಾಚಾರಿ”
- ಸೂಪರ್ ಹಿಟ್ ಆಗಿದ್ದ “ನಾಗರಹಾವು” ಚಿತ್ರದ ಪಾತ್ರ ಚಾಮಯ್ಯ ಮೇಷ್ಟ್ರ ಕಥೆ
- ಕಥೆ ಬರೆದು ಚಿತ್ರ ನಿರ್ಮಾಣ, ನಿರ್ದೇಶನ ಮಾಡಿದ್ದಾರೆ ರಾಧಾಕೃಷ್ಣ ಪಲ್ಲಕ್ಕಿ
70 ರ ದಶಕದಲ್ಲಿ ಫುಲ್ ಫೇಮಸ್ ಆಗಿ ಜನರ ಮನಗೆದ್ದಿದ್ದ ವಿಷ್ಣುವರ್ಧನ್ Vishnuvardhan ನಟನೆಯ “ನಾಗರಹಾವು” Nagarahavu ಚಿತ್ರದ ಒಂದು ಪಾತ್ರ ಚಾಮಯ್ಯ ಮೇಷ್ಟರದು. ಈ ಪಾತ್ರದ ಕಥೆಯನ್ನೇ ಎಳೆಯಾಗಿ ಇಟ್ಟುಕೊಂಡು “ಚಾಮಯ್ಯ ಸನ್ ಆಫ್ ರಾಮಾಚಾರಿ” Chamayya S/O Ramachari ಎಂಬ ಚಿತ್ರ ನಿರ್ದೇಶನ ಮಾಡಿದ್ದಾರೆ ರಾಧಾಕೃಷ್ಣ ಪಲ್ಲಕ್ಕಿ Radhakrishna Pallakki. ನಾಗರಹಾವು ಚಿತ್ರದ ಹಲವು ಪಾತ್ರಗಳು ಈ ಚಿತ್ರದಲ್ಲೂ ಇದೆ.
ಜೋಳಿಗೆ ಸಿನಿಮಾಸ್ Jolige Cinemas ಬ್ಯಾನರ್ ಅಡಿಯಲ್ಲಿ ನಿರ್ದೇಶಕರೇ ಚಿತ್ರ ನಿರ್ಮಾಣ ಮಾಡಿದ್ದು, ಗೌತಮ್ ಪಲ್ಲಕ್ಕಿ ಹಾಗೂ ಗೋವಿಂದರಾಜ್ ಅವರೂ ಕೈಜೋಡಿಸಿದ್ದಾರೆ. ಚಿತ್ರದುರ್ಗ, ಬಾದಾಮಿ,ಬನಶಂಕರಿ, ಐಹೊಳೆ, ಬೆಂಗಳೂರುಗಳಲ್ಲಿ ಚಿತ್ರೀಕರಣ ನಡೆದಿದೆ. ಜಯಶ್ರೀ ರಾಜ್, ಪ್ರದೀಪ್ ಶಾಸ್ತ್ರಿ, ಚೈತ್ರಾ ಮುಂತಾದವರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಯಾಂ ಸಂಗೀತ, ಎಂ.ಆರ್.ಸೀನು ಛಾಯಾಗ್ರಹಣ, ಶಿವಕುಮಾರ್ ಸಂಕಲನ ಚಿತ್ರಕ್ಕಿದೆ.