- “ನಾರಾಯಣ ನಾರಾಯಣ” ಅಂತ ರಿಲೀಸ್ ಆಗಿದೆ ಚಿತ್ರದ ಟ್ರೇಲರ್
- ಮಜಾ ಟಾಕೀಸ್ ಖ್ಯಾತಿಯ ಪವನ್ ಕುಮಾರ್ ಮುಖ್ಯ ಪ್ರಾತ್ರದಲ್ಲಿ ಮಿಂಚಿದ್ದಾರೆ.
- ಹೊಸಬರ ತಂಡಕ್ಕೆ ಶ್ರೀಕಾಂತ್ ಕೆಂಚಪ್ಪ ಆಕ್ಷನ್ ಕಟ್ ಹೇಳಿದ್ದಾರೆ.
ಟೈಟಲ್ ಮೂಲಕವೇ ಜನರ ಗಮನ ಸೆಳೆಯುವ ಮೂವೀ “ನಾರಾಯಣ ನಾರಾಯಣ” Narayana Narayana ಹೊಸ ಪ್ರತಿಭೆಗಳನ್ನು ಸಿನಿಮಾರಂಗಕ್ಕೆ ಪರಿಚಯ ಮಾಡಿಕೊಡ್ತಿದೆ. ಅನೇಕ ಹೊಸ ಕಲಾವಿದರ ಜೊತೆಗೆ ಕಾಮಿಡಿ ನಟ, ಮಜಾ ಟಾಕಿಸ್ Maja Talkies ಖ್ಯಾತಿಯ ಪವನ್ ಕುಮಾರ್ Pavan Kumar ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಶ್ರೀಕಾಂತ್ ಕೆಂಚಪ್ಪ Shreekanth Kenchappa ನಿರ್ದೇಶಿಸಿರುವ ಈ ಚಿತ್ರವನ್ನು ನಿರ್ಮಾಣ ಮಾಡ್ತಿದ್ದಾರೆ ಕೃಷ್ಣಪ್ಪ ಪಿ. ಮತ್ತು ಮಂಜುನಾಥ್ ಕೆ.
ಕುತೂಹಕ್ಕೆ ಕಾರಣವಾಗ್ತಿದೆ ಟ್ರೇಲರ್
ಸಿನಿಮಾದ ಎರಡು ಹಾಡುಗಳು ಮತ್ತು ಟ್ರೈಲರ್ ಅನ್ನು ಎ2 ಮ್ಯೂಸಿಕ್ A2 Music ಚಾನಲ್ ನಲ್ಲಿ ರಿಲೀಸ್ ಮಾಡಲಾಗಿದ್ದು, ಹಾಡುಗಳೂ ಗಮನಸೆಳೆಯುತ್ತಿವೆ ಹಾಗೂ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿವೆ. ಚಿತ್ರತಂಡದ ನಾಲ್ಕು ವರ್ಷಗಳ ಪ್ರಯತ್ನ, ಪರಿಶ್ರಮದ ಫಲವಾಗಿ ಚಿತ್ರ ತಯಾರಾಗಿದ್ದು, ಬಿಡುಗಡೆಗೆ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗುತ್ತಿದೆ.
ಚಿತ್ರದಲ್ಲಿ ಗುರುಕಿರಣ್, ನಾಯಕಿಯಾಗಿ ಬಿಂಬಿಕಾ, ಕೀರ್ತಿ ಕೃಷ್ಣ, ದರ್ಶನ್ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ.. ಈ ಸಿನಿಮಾದ ವಿತರಣೆ ಹಕ್ಕನ್ನು ಶ್ರೀ ದುರ್ಗಾಪರಮೇಶ್ವರಿ ಪ್ರೊಡಕ್ಷನ್ ಅವರು ಮಾಡುತ್ತಿದ್ದಾರೆ. ಟ್ರೇಲರ್ ನಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ನಾರಾಯಣ ನಾರಾಯಣ ಸಿನಿಮಾ ಸದ್ಯದಲ್ಲೇ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ.