- ವ್ಯಾಲೆಂಟೈನ್ಸ್ ಡೇ ಗಿಫ್ಟ್ ಆಗಿ ಹೊರಬಂತು “ಜಸ್ಟ್ ಮ್ಯಾರೀಡ್” ಚಿತ್ರದ ಪ್ರೇಮಗೀತೆ
- ಬಿಡುಗಡೆಗೆ ತಯಾರಾಗ್ತಿದೆ ಶೈನ್ ಶೆಟ್ಟಿ, ಅಂಕಿತಾ ಅಮರ್ ನಟನೆಯ “ಜಸ್ಟ್ ಮ್ಯಾರೀಡ್”
- ರಿಲೀಸ್ ಆಗಿದೆ ಕೆ. ಕಲ್ಯಾಣ್ ಸಾಹಿತ್ಯ, ಸರಿಗಮಪ ಖ್ಯಾತಿಯ ಜಸ್ಕರಣ್ ಸಿಂಗ್ ಹಾಡಿರುವ ಹಾಡು
ಸಿ.ಆರ್.ಬಾಬಿ C.R. Baby ಕತೆ ಬರೆದು ಸ್ವತಃ ನಿರ್ದೇಶನ ಮಾಡಿರುವ ಚಿತ್ರ “ಜಸ್ಟ್ ಮ್ಯಾರೀಡ್” Just Married. ಎಬಿಬಿಎಸ್ ಸ್ಟುಡಿಯೋಸ್ ABBS studios ಮೂಲಕ ಅಜನೀಶ್ ಲೋಕನಾಥ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ Shain Shetty ಹಾಗೂ ಅಂಕಿತಾ ಅಮರ್ Ankitha Amar ಲೀಡ್ ರೋಲ್ ಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಪ್ರಕ್ರಿಯೆಗಳು ಕೊನೆಯ ಹಂತದಲ್ಲಿದ್ದು ಇದೀಗ ಚಿತ್ರದ ಯುಗಳಗೀತೆಯನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಬಿಡುಗಡೆಗೊಳಿಸಿದ್ದಾರೆ.

ಇದು ಮೊದಲನೇ ಸ್ವಾಗತಾನಾ…
ಕೆ. ಕಲ್ಯಾಣ್ ರವರ ಸಾಹಿತ್ಯವಿರುವ, ಸರಿಗಮಪ ಖ್ಯಾತಿಯ, ದ್ವಾಪರ ದಾಟುತಾ ಹಾಡು ಹಾಡಿದ್ದ ಜಸ್ಕರಣ್ ಸಿಂಗ್ ಅವರ ಮಧುರ ಕಂಠದಲ್ಲಿ ಮೂಡಿಬಂದಿದೆ “ಇದು ಮೊದಲನೇ ಸ್ವಾಗತಾನಾ” ಅನ್ನೋ ಪ್ರೇಮಗೀತೆ. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಈ ಈ ಚಿತ್ರದ ಹಾಡುಗಳು ಲಭ್ಯವಾಗಲಿವೆ.
ದೇವರಾಜ್, ಅಚ್ಯುತಕುಮಾರ್, ಮಾಳವಿಕ ಅವಿನಾಶ್, ಅನೂಪ್ ಭಂಡಾರಿ, ಶ್ರುತಿ ಹರಿಹರನ್, ಶ್ರುತಿ ಕೃಷ್ಣ, ಸಾಕ್ಷಿ ಅಗರವಾಲ್, ಶ್ರೀಮಾನ್, ರವಿಶಂಕರ್ ಗೌಡ, ರವಿ ಭಟ್, ವಾಣಿ ಹರಿಕೃಷ್ಣ, ಸಂಗೀತ ಅನಿಲ್, ಕುಮುದಾ, ಜಯರಾಮ್, ವೇದಿಕಾ ಕಾರ್ಕಳ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.