ಟ್ರೈಲರ್ ಮೂಲಕ ಸಿಕ್ತಿದೆ “ನಿಮಗೊಂದು ಸಿಹಿಸುದ್ದಿ”

Date:

  • ಟ್ರೈಲರ್ ಮೂಲಕ ಸಿಕ್ತಿದೆ “ನಿಮಗೊಂದು ಸಿಹಿಸುದ್ದಿ”
  • ವಿಭಿನ್ನವಾಗಿ ಕುತೂಹಲಕಾರಿಯಾಗಿದೆ “ನಿಮಗೊಂದು ಸಿಹಿಸುದ್ದಿ” ಟ್ರೈಲರ್
  • ಫೆ. 28 ಶಿವರಾತ್ರಿಯಂದು ಬಿಡುಗಡೆಗೆ ಸಿದ್ಧವಾಗಿದೆ ಮೂವಿ

ಯುವಕನೊಬ್ಬ ಗರ್ಭ ಧರಿಸಿದ್ದಾನೆ ಅನ್ನೋ ಸುದ್ದಿ ಕೇಳಿದ್ರೆ ಎಲ್ಲರಿಗೂ ಅಚ್ಚರಿಯ ಜೊತೆ ಅಸಹಜ ಅಂತ ಕೂಡಾ ಅನ್ನಿಸತ್ತೆ. ಆದ್ರೆ ಹೀಗೆ ಗರ್ಭ ಧರಿಸಿದ ವ್ಯಕ್ತಿಗೆ ಸೀಮಂತ ಶಾಸ್ತ್ರ ಕೂಡಾ ನಡೆದಿದೆ. ಆದ್ರೆ ಗರ್ಭ ಧರಿಸಿದ್ದು ರಿಯಲ್ ಲೈಫ್ ನಲ್ಲಲ್ಲ ರೀಲ್ ಲೈಫ್ ನಲ್ಲಿ ಅನ್ನೋದು ಮಾತ್ರ ರಿಯಲ್. ಇತ್ತೀಚೆಗೆ ನಡೆದ “ನಿಮಗೊಂದು ಸಿಹಿಸುದ್ದಿ” ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರದ ನಾಯಕ, ನಿರ್ದೇಶಕ ರಘು ಭಟ್ ಅವರಿಗೆ ಸೀಮಂತ ಶಾಸ್ತ್ರ ಮಾಡುವ ಮೂಲಕ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ಟ್ರೇಲರ್ ಎ 2 ಮ್ಯೂಸಿಕ್ ಯೂಟ್ಯೂಬ್ ಚಾನಲ್ನಲ್ಲಿ ಲಭ್ಯವಿದೆ.

ತಾಯಿಯಿಂದ ಸ್ಪೂರ್ತಿ ಪಡೆದು ಹುಟ್ಟಿದ ಕತೆ

ಫೆ. 28 ಶಿವರಾತ್ರಿಯ ದಿನದಂದು ಬಿಡುಗಡೆಯಾಗುತ್ತಿರುವ “ನಿಮಗೊಂದು ಸಿಹಿಸುದ್ದಿ” ಸಿನಿಮಾಕ್ಕೆ ನಾಯಕ, ನಿರ್ದೇಶಕನಾಗಿ ಕಾಣಿಸಿಕೊಂಡಿದ್ದಾರೆ ರಘು ಭಟ್. “ಈ ಚಿತ್ರದ ಕಥೆ ಬರೆಯುವುದಕ್ಕೆ ನಮ್ಮ ತಾಯಿ ಸ್ಫೂರ್ತಿ. ನಿನ್ನನ್ನು ಒಂಬತ್ತು ತಿಂಗಳು ಹೆತ್ತು-ಹೊತ್ತಿದ್ದಕ್ಕೆ ಈ ರೀತಿ ಮಾಡಿದ ಎಂಬ ಮಾತು ಸಹಜವಾಗಿ ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಒಂದು ಮಾತು ಕೇಳಿಬರುತ್ತದೆ. ನಾನು ಒಮ್ಮೆ ಇಂಥದ್ದೊಂದು ಮಾತು ಕೇಳಬೇಕಾಯಿತು. ಒಬ್ಬ ತಾಯಿ ಇಷ್ಟೊಂದು ನೋವು ಅನಭವಿಸಬೇಕಾದರೆ, ಯಾಕೆ ಈ ವಿಷಯನ್ನು ಇಟ್ಟುಕೊಂಡು ಚಿತ್ರ ಮಾಡಬಾರದು ಎಂಬ ಯೋಚನೆ ಹೊಳೆದು, ಈ ಕಥೆ ಬರೆದೆ. ಇದನ್ನು ಎಲ್ಲಾ ತಾಯಂದಿರು, ಅಕ್ಕಂದಿರಿಗೆ ಅರ್ಪಿಸುತ್ತಿದ್ದೇವೆ. ಅವರಲ್ಲಿದೆ ನಾವಿಲ್ಲ” ಎಂದಿದ್ದಾರೆ.

ಅವ್ಯಕ್ತ ಸಿನಿಮಾಸ್ ಸಂಸ್ಥೆಯಡಿ ಹರೀಶ್ ಎನ್. ಗೌಡ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಕಾವ್ಯ ಶೆಟ್ಟಿ, ಹರಿಣಿ ಶ್ರೀಕಾಂತ್, ಪದ್ಮಿನಿ ನರಸಿಂಹನ್, ಸುಜಯ್ ಶಾಸ್ತ್ರಿ, ಶಿಲ್ಪಾ ಶೈಲೇಶ್, ಪ್ರಜ್ವಲ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಆನಂದ್ ಸುಂದರೇಶ್ ಛಾಯಾಗ್ರಹಣ, ಅಶ್ವಿನ್ ಹೇಮಂತ್ ಸಂಗೀತವಿದೆ.

Nimagondu Sihi Suddi Official Trailer

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ ಲಿಸ್ಟ್

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ...

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ ಕನ್ನಡ ಚಿತ್ರಗಳು – These new Kannada movies are available on OTT

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ...

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ – The Remarkable Journey of “Toxic”

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ ಸಾಮಾನ್ಯ...

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ – How to submit your short film to a film festival

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ...