ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ – How to submit your short film to a film festival

Date:

  • ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ
  • ನಿಮ್ಮ ಶಾರ್ಟ್‌ಫಿಲ್ಮ್‌ಗೂ ಸಿಗಬಹುದು ದೊಡ್ಡ ವೇದಿಕೆ, ಈ ರೂಲ್ಸ್ ಗಳನ್ನು ಫಾಲೋ ಮಾಡಿ
  • ನಿಮ್ಮ ಸಿನಿಮಾ ಎಷ್ಟೇ ಚಿಕ್ಕದಾಗಿರಲಿ, ಕಥೆ, ಸೃಜನಶೀಲತೆಗಿದೆ ಅವಕಾಶ. ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಆತ್ಮವಿಶ್ವಾಸದಿಂದ ಸಲ್ಲಿಸಿ.

ಸಿನಿಮಾ ಕ್ಷೇತ್ರಕ್ಕೆ ಕಾಲಿಡಲು ಬಯಸುವ ಹೊಸ ಪ್ರತಿಭೆಗಳಿಗೆ ಶಾರ್ಟ್‌ಫಿಲ್ಮ್‌ಗಳು Short Film ಉತ್ತಮ ವೇದಿಕೆ. ಕಡಿಮೆ ಬಜೆಟ್‌ನಲ್ಲಿ ತಮ್ಮ ಕಥೆ, ನಿರ್ದೇಶನ, ನಟನೆ ಮತ್ತು ತಾಂತ್ರಿಕ ಕೌಶಲ್ಯವನ್ನು ಪರಿಚಯಿಸಲು ಇದು ಅವಕಾಶ ನೀಡುತ್ತದೆ. ಆದರೆ ಸಿನಿಮಾ ರೆಡಿ ಆದ್ಮೇಲೆ ಅದನ್ನು ಸೂಕ್ತ ಫಿಲ್ಮ್ ಫೆಸ್ಟಿವಲ್ Film Festival ಅಥವಾ ಸ್ಪರ್ಧೆಗೆ Short Film Competition ಹೇಗೆ ಸಲ್ಲಿಸಬೇಕು ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ಈ ಎಲ್ಲಾ ವಿಷಯದ ಕುರಿತು ವಿವರವಾದ ಮಾಹಿತಿ ಇಲ್ಲಿದೆ.

ಶಾರ್ಟ್‌ಫಿಲ್ಮ್‌ನ್ನು ಫೆಸ್ಟಿವಲ್‌ಗೆ ಕಳುಹಿಸುವ ಮೊದಲು ಕೆಲವು ಪ್ರಮುಖ ವಿಷಯಗಳನ್ನು ಗಮನಿಸಬೇಕು.

ಸೂಕ್ತ ಫಿಲ್ಮ್ ಫೆಸ್ಟಿವಲ್ ಹುಡುಕಿ Searching Film Festival/ Competition

ಇನ್ನು ಕಿರುಚಿತ್ರ ತಯಾರಕರಿಗೆ ಹಬ್ಬದ ಕಾಲ. ಕೆಲವೇ ಸಮಯಗಳಲ್ಲಿ ಹಲವು ಶಾರ್ಟ್ ಫಿಲ್ಮ್ ಸ್ತರ್ಧೆಗಳು, ವೆಸ್ಟಿವಲ್ ಗಳು ಆರಂಭವಾಗುತ್ತವೆ. ಮೊದಲಿಗೆ ನಿಮ್ಮ ಸಿನಿಮಾಗೆ ಸೂಕ್ತವಾದ ಫೆಸ್ಟಿವಲ್ ಅಥವಾ ಸ್ಪರ್ಧೆಯನ್ನು ಆಯ್ಕೆ ಮಾಡಿಕೊಳ್ಳಿ. ಕೆಲವು ಫೆಸ್ಟಿವಲ್‌ಗಳು ನಿರ್ದಿಷ್ಟ ಭಾಷೆ, ವಿಷಯ, ಪ್ರಕಾರ ಅಥವಾ ವಯೋಮಾನದ ಚಿತ್ರಗಳಿಗೆ ಮಾತ್ರ ಅವಕಾಶ ನೀಡುತ್ತವೆ.

ನಿಯಮಗಳನ್ನು ಸಂಪೂರ್ಣವಾಗಿ ಓದಿ Understanding rules

ಪ್ರತಿ ಫೆಸ್ಟಿವಲ್‌ಗೂ ತನ್ನದೇ ಆದ ನಿಯಮಗಳಿರುತ್ತವೆ. ಚಿತ್ರದ ಗರಿಷ್ಠ ಅವಧಿ, ನಿರ್ಮಾಣದ ವರ್ಷ, ಭಾಷೆ, ಥೀಮ್, ಪ್ರೀಮಿಯರ್ ನಿಯಮಗಳು ಮತ್ತು ಸಲ್ಲಿಕೆಯ ಕೊನೆಯ ದಿನಾಂಕವನ್ನು ಪರಿಶೀಲಿಸಿ. ಕೆಲವು ಫೆಸ್ಟಿವಲ್‌ ಗಳು ಈಗಾಗಲೇ ಪ್ರದರ್ಶಿಸಲಾದ ಚಿತ್ರಗಳನ್ನು ಸ್ವೀಕರಿಸುವುದಿಲ್ಲ.

ಸಿನಿಮಾ ಫೈಲ್ ಸಿದ್ಧಪಡಿಸಿ Preparing Film Files

ಫೆಸ್ಟಿವಲ್‌ ಕೇಳಿರುವ ತಾಂತ್ರಿಕ ಗುಣಮಟ್ಟ ಮತ್ತು ಫಾರ್ಮ್ಯಾಟ್‌ನಲ್ಲಿ ಸಿನಿಮಾವನ್ನು ಸಿದ್ಧಪಡಿಸಬೇಕು. ಚಿತ್ರ ಮತ್ತು ಧ್ವನಿಯ ಗುಣಮಟ್ಟ ಉತ್ತಮವಾಗಿರುವಂತೆ ನೋಡಿಕೊಳ್ಳುವುದು ಮುಖ್ಯ. ಚಿತ್ರದ ಹೆಸರು, ನಿರ್ದೇಶಕರ ಹೆಸರು ಮತ್ತು ಸಂಪರ್ಕ ಮಾಹಿತಿಯನ್ನು ಸರಿಯಾಗಿ ನಮೂದಿಸಿ.

ಸಬ್‌ಟೈಟಲ್ಸ್ ಮರೆಯಬೇಡಿ Subtitles

ಕನ್ನಡ ಶಾರ್ಟ್‌ಫಿಲ್ಮ್‌ನ್ನು ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಫೆಸ್ಟಿವಲ್‌ಗೆ ಕಳುಹಿಸುವಾಗ ಇಂಗ್ಲಿಷ್ ಸಬ್‌ಟೈಟಲ್ಸ್ ಇದ್ದರೆ ಒಳ್ಳೆಯದು. ಉಪಶೀರ್ಷಿಕೆಗಳು ಸ್ಪಷ್ಟವಾಗಿದ್ದು, ಸಂಭಾಷಣೆಗೆ ಸರಿಯಾಗಿ ಹೊಂದಿಕೆಯಾಗಿರುವಂತೆ ನೋಡಿಕೊಳ್ಳಿ.

ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ Documents

ಸಲ್ಲಿಕೆ ವೇಳೆ ಸಿನಿಮಾ ಪೋಸ್ಟರ್, ಚಿತ್ರದ ಕೆಲವು ಸ್ಟಿಲ್‌ಗಳು, ಕಥೆಯ ಸಂಕ್ಷಿಪ್ತ ವಿವರಣೆ, ಟ್ರೈಲರ್ ಅಥವಾ ಟೀಸರ್, ನಿರ್ದೇಶಕರ ಪರಿಚಯ ಮತ್ತು ನಿರ್ದೇಶಕರ ಹೇಳಿಕೆ ಮುಂತಾದ ಮಾಹಿತಿಯನ್ನು ಕೇಳಬಹುದು. ಇವುಗಳನ್ನು ಮೊದಲೇ ಸಿದ್ಧಪಡಿಸಿಕೊಂಡರೆ ಸಲ್ಲಿಕೆ ಪ್ರಕ್ರಿಯೆ ಸುಲಭವಾಗುತ್ತದೆ.

ಆನ್‌ಲೈನ್ ಮೂಲಕ ಸಲ್ಲಿಕೆ Apply through online

ಇಂದಿನ ಬಹುತೇಕ ಫಿಲ್ಮ್ ಫೆಸ್ಟಿವಲ್‌ಗಳು ಆನ್‌ಲೈನ್ ಮೂಲಕ ಚಿತ್ರಗಳನ್ನು ಸ್ವೀಕರಿಸುತ್ತವೆ. ಅಧಿಕೃತ ವೆಬ್‌ಸೈಟ್ ಅಥವಾ ಫೆಸ್ಟಿವಲ್ ಸೂಚಿಸಿರುವ ವೇದಿಕೆಯಲ್ಲಿ ಅರ್ಜಿ ಭರ್ತಿ ಮಾಡಿ, ಚಿತ್ರದ ಲಿಂಕ್ ಅಥವಾ ಫೈಲ್‌ನ್ನು ಅಪ್‌ಲೋಡ್ ಮಾಡಿ. ಅಗತ್ಯವಿದ್ದರೆ ಪ್ರವೇಶ ಶುಲ್ಕವನ್ನೂ ಪಾವತಿಸಬೇಕು.

ಕೊನೆಯ ದಿನಾಂಕ ಗಮನಿಸಿ Last date

ಸಲ್ಲಿಕೆಯ Deadline ತಪ್ಪಿಸಿಕೊಳ್ಳಬೇಡಿ. ಕೆಲವು ಫೆಸ್ಟಿವಲ್‌ಗಳಲ್ಲಿ Early Bird, Regular ಮತ್ತು Late Submission ಎಂಬ ವಿವಿಧ ಹಂತಗಳಿರುತ್ತವೆ. ಆರಂಭದಲ್ಲೇ ಸಲ್ಲಿಸಿದರೆ ಪ್ರವೇಶ ಶುಲ್ಕದಲ್ಲಿಯೂ ವ್ಯತ್ಯಾಸ ಇರಬಹುದು.

ಸಲ್ಲಿಕೆಯಾದ ನಂತರ ಹೀಗೆ ಮಾಡಿ

ಸಿನಿಮಾ ಸಲ್ಲಿಸಿದ ಬಳಿಕ ಆಯ್ಕೆ ಸಮಿತಿ ಚಿತ್ರವನ್ನು ಪರಿಶೀಲಿಸುತ್ತದೆ. ಆಯ್ಕೆಯಾದ ಚಿತ್ರಗಳಿಗೆ ಸಾಮಾನ್ಯವಾಗಿ ಇ-ಮೇಲ್ ಅಥವಾ ಅಧಿಕೃತ ಪ್ರಕಟಣೆಯ ಮೂಲಕ ಮಾಹಿತಿ ನೀಡಲಾಗುತ್ತದೆ. ಫೆಸ್ಟಿವಲ್‌ನ ಪ್ರಕಾರ ಪ್ರದರ್ಶನದ ಅವಕಾಶ, ಪ್ರಶಸ್ತಿ, ಪ್ರಮಾಣಪತ್ರ ಅಥವಾ ಇತರ ಗೌರವಗಳು ದೊರೆಯಬಹುದು.

ಹೊಸ ನಿರ್ದೇಶಕರು ಗಮನಿಸಬೇಕಾದದ್ದು

ಶಾರ್ಟ್‌ಫಿಲ್ಮ್ ಫೆಸ್ಟಿವಲ್‌ಗೆ ಸಿನಿಮಾ ಕಳುಹಿಸುವಾಗ ಕಥೆ ಮತ್ತು ನಿರ್ದೇಶನದಷ್ಟೇ ಸಲ್ಲಿಕೆ ನಿಯಮಗಳಿಗೂ ಮಹತ್ವ ನೀಡಿ. ತಪ್ಪಾದ ಫೈಲ್ ಫಾರ್ಮ್ಯಾಟ್, ಅಪೂರ್ಣ ಮಾಹಿತಿ ಅಥವಾ ಗಡುವು ಮೀರಿದ ಸಲ್ಲಿಕೆ ನಿಮ್ಮ ಚಿತ್ರದ ಅವಕಾಶವನ್ನು ಕಳೆದುಕೊಳ್ಳುವಂತೆ ಮಾಡಬಹುದು. ಆದ್ದರಿಂದ ಮೊದಲು ಸರಿಯಾದ ಫೆಸ್ಟಿವಲ್ ಆಯ್ಕೆ ಮಾಡಿ, ಅದರ ನಿಯಮಗಳನ್ನು ಓದಿ, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ಮತ್ತು ಗಡುವಿನೊಳಗೆ ಸಿನಿಮಾವನ್ನು ಸಲ್ಲಿಸಿ.

ಒಂದು ಶಾರ್ಟ್‌ಫಿಲ್ಮ್ ನಿಮ್ಮ ಪ್ರತಿಭೆಯನ್ನು ದೊಡ್ಡ ಪ್ರೇಕ್ಷಕರಿಗೆ ಪರಿಚಯಿಸುವ ಮೊದಲ ಹೆಜ್ಜೆಯಾಗಬಹುದು. ನಿಮ್ಮ ಸಿನಿಮಾ ಎಷ್ಟೇ ಚಿಕ್ಕದಾಗಿರಲಿ, ಅದರ ಕಥೆ ಮತ್ತು ನಿಮ್ಮ ಸೃಜನಶೀಲತೆಗೆ ದೊಡ್ಡ ವೇದಿಕೆ ಸಿಗಬಹುದು. ಆದ್ದರಿಂದ ಸೂಕ್ತ ಫೆಸ್ಟಿವಲ್‌ ಹುಡುಕಿ, ನಿಯಮಗಳನ್ನು ತಿಳಿದುಕೊಂಡು ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಆತ್ಮವಿಶ್ವಾಸದಿಂದ ಸಲ್ಲಿಸಿ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ ಕನ್ನಡ ಚಿತ್ರಗಳು – These new Kannada movies are available on OTT

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ...

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ – The Remarkable Journey of “Toxic”

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ ಸಾಮಾನ್ಯ...

ರೀಲ್ಸ್ ಮಾಡಲು ಹಾಡು ಹುಡುಕುತ್ತಿದ್ದೀರಾ? ಈ ಹಾಡುಗಳಿಗೆ ಇದೆ ಸಖತ್ ಡಿಮ್ಯಾಂಡ್! – Are You Looking for a song to make Reels? These songs are in great...

ರೀಲ್ಸ್ ಮಾಡಲು ಹಾಡು ಹುಡುಕುತ್ತಿದ್ದೀರಾ? ಈ ಹಾಡುಗಳಿಗೆ ಇದೆ ಸಖತ್ ಡಿಮ್ಯಾಂಡ್!...

ಈ ಬಾರಿ ಎಲ್ಲಾ ಭಾಷೆಗಳಲ್ಲೂ ಏಕಕಾಲಕ್ಕೆ ಬಿಗ್ ಬಾಸ್ ಪ್ರಾರಂಭಿಸುವ ಸಾಧ್ಯತೆ – Bigg Boss Kannada Season 13 Major Update

ಈ ಬಾರಿ ಎಲ್ಲಾ ಭಾಷೆಗಳಲ್ಲೂ ಏಕಕಾಲಕ್ಕೆ ಬಿಗ್ ಬಾಸ್ ಪ್ರಾರಂಭಿಸುವ ಸಾಧ್ಯತೆ...