ಸಿನಿರಸಿಕರ ಎದೆಯಲಿ ಒಲವಿನ ಮಳೆ ಸುರಿಸಿದ “ಪ್ರೇಮದ ಊರಲಿ”

Date:

  • ಸಿನಿರಸಿಕರ ಎದೆಯಲಿ ಒಲವಿನ ಮಳೆ ಸುರಿಸಿದ “ಪ್ರೇಮದ ಊರಲಿ”
  • ಸಹಜ ಸುಂದರ ಮುಗ್ದ ಹಳ್ಳಿ ಕತೆಗೆ ಪ್ರೇಕ್ಷಕರು ಮಂತ್ರಮುಗ್ಧ
  • ಕನ್ನಡದ ಮಣ್ಣಿನ ಪರಿಮಳದ ಚಿತ್ರಕ್ಕೆ ಭರ್ಜರಿ ಗೆಲುವು ತಂದು ಕೊಟ್ಟ ಕನ್ನಡಿಗರು

‘ಪ್ರೇಮದ ಊರಲಿ’ ಸಿನಿಮಾ Premada urali cinema ಸಿನಿರಸಿಕರ ಎದೆಯಲ್ಲಿ ಪ್ರೇಮದ ಕವಿತೆ ಬರೆಯುವ ಮೂಲಕ ಸ್ಯಾಂಡಲ್ ವುಡ್ ಗೆ ಹೊಸ ಭರವಸೆ ತಂದಿದೆ. ರಿಲೀಸ್ ಆದ ದಿನದಿಂದ ಇಂದಿನವರೆಗೂ ಚಿತ್ರ ಬೇರೆ ಬೇರೆ ಕಾರಣಗಳಿಗಾಗಿ ಸದ್ದು ಮಾಡುತ್ತಲೇ ಇರೋದು ವಿಶೇಷ.
ಬಿಡುಗಡೆಯಾದ ಬಳಿಕ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲೂ ಗಮನ ಸೆಳೆಯುತ್ತಿದೆ. ರಾಷ್ಟ್ರಪ್ರಶಸ್ತಿ ವಿಜೇತ ಮನೋಜ್ ಕುಮಾರ್ Manoj Kumar ನಿರ್ದೇಶನದಲ್ಲಿ, ವೆನಿಲ್ಲಾ ಎಂಟರ್ಟೇನ್ಮೆಂಟ್ Venilla Entertinement ನಿರ್ಮಿಸಿರುವ ಈ ಸಿನಿಮಾ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಬುಕ್ ಮೈ ಶೋ ನಲ್ಲೂ ಭರ್ಜರಿ ಸದ್ದು ಮಾಡಿದ ಸಿನಿಮಾ:

ಬುಕ್ ಮೈ ಶೋ ಟಿಕೆಟ್ ಮಾರಾಟದ ವಿಚಾರದಲ್ಲಿ ‘ಪ್ರೇಮದ ಊರಲಿ’ ಚಿತ್ರವು ಅಜಯ್ ದೇವಗನ್ ಅಭಿನಯದ ‘ದೃಶ್ಯಂ 3’ ಸಿನಿಮಾವನ್ನು ಹಿಂದಿಕ್ಕಿದೆ ಎನ್ನಲಾಗಿದೆ. ಅಕ್ಟೋಬರ್ 12ರಂದು ಒಂದೇ ದಿನ ಈ ಚಿತ್ರದ ಬರೋಬ್ಬರಿ 1.49 ಲಕ್ಷ ಟಿಕೆಟ್ ಗಳು ಬುಕ್ ಮೈ ಶೋ ಮೂಲಕ ಮಾರಾಟವಾಗಿದ್ದು, ಆ ದಿನ ಭಾರತದಲ್ಲೇ ಅತಿ ಹೆಚ್ಚು ಟಿಕೆಟ್ ಮಾರಾಟವಾದ ಚಿತ್ರ ಎಂಬ ಸಾಧನೆ ಮಾಡಿದೆ ಎನ್ನುವುದು ವಿಶೇಷ ಸಂಗತಿ. ಅಂದ ಹಾಗೆ ಅತಿಯಾದ ಆರ್ಭಟವಿಲ್ಲದೆ ಬಿಡುಗಡೆಯಾಗಿ, ಪ್ರೇಕ್ಷಕರ ಮೌತ್ ಪಬ್ಲಿಸಿಟಿಯಿಂದಲೇ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ‘ಪ್ರೇಮದ ಊರಲಿ’ ಸಿನಿಮಾ ಪ್ರತಿ ದಿನ ಕೋಟ್ಯಂತರ ರೂಪಾಯಿ ಕಲೆಕ್ಷನ್ ಮಾಡುತ್ತಿರುವುದು ಸಿನಿಮಾವೊಂದು ಅತಿಯಾದ ಪ್ರಚಾರವಿಲ್ಲದೆಯೂ ಗೆಲ್ಲಬಹುದು ಎನ್ನುವುದಕ್ಕೆ ದೊಡ್ಡ ಉದಾಹರಣೆ.

ಮೋಡಿ ಮಾಡಿದ ಹಳ್ಳಿ ಸಹಜ ಸುಂದರ ಕತೆ:

‘ಪ್ರೇಮದ ಊರಲಿ’ ಸಿನಿಮಾ ಗ್ರಾಮೀಣ ಬದುಕಿನ ಸೊಗಡು, ಮುಗ್ಧ ಪ್ರೀತಿ ಹಾಗೂ ಕೌಟುಂಬಿಕ ಸಂಬಂಧಗಳ ಭಾವನಾತ್ಮಕ ಕಥಾಹಂದರದ ಮೂಲಕವೇ ಗೆದ್ದಿದೆ. ಹಚ್ಚಹಸಿರಿನ ಗ್ರಾಮೀಣ ಪರಿಸರದಲ್ಲಿ ಸಾಗುವ ಈ ಚಿತ್ರ ಮನುಷ್ಯತ್ವ, ಪ್ರೀತಿ ಮತ್ತು ಕುಟುಂಬದ ಸಂಬಂಧಗಳ ಸೂಕ್ಷ್ಮ ಎಳೆಗಳನ್ನು ತೆರೆದಿಡುತ್ತದೆ.
ಇಂದಿನ ಆ್ಯಕ್ಷನ್ ಹಾಗೂ ಅದ್ಧೂರಿ ಸಿನಿಮಾಗಳ ನಡುವೆ ಸರಳ ಕಥೆ ಮತ್ತು ಭಾವನಾತ್ಮಕ ನಿರೂಪಣೆಯೊಂದಿಗೆ ಮೂಡಿಬಂದಿರುವ ‘ಪ್ರೇಮದ ಊರಲಿ’ ಪ್ರೇಕ್ಷಕರಿಗೆ ಆಪ್ತವಾಗುವ ಫೀಲ್ಗುಡ್ ಸಿನಿಮಾವಾಗಿ ಗುರುತಿಸಿಕೊಂಡಿದೆ.

ಚಿತ್ರದಲ್ಲಿ ನಾಯಕ ಶ್ರೀರಾಮ್ ಹಾಗೂ ನಾಯಕಿಯರಾದ ರಮಿಕಾ ಶಿವು ಮತ್ತು ತಪಸ್ವಿನಿ ಪೂಣಚ್ಚ ತಮ್ಮ ಸಹಜ ಅಭಿನಯದ ಮೂಲಕ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಹಿರಿಯ ನಟ ರಂಗಾಯಣ ರಘು ಅವರು ಕೌಟುಂಬಿಕ ಬಿಕ್ಕಟ್ಟುಗಳಿಗೆ ಸಂಬಂಧಿಸಿದ ಭಾವನಾತ್ಮಕ ಸನ್ನಿವೇಶಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಿ ಚಿತ್ರದ ತೂಕವನ್ನು ಹೆಚ್ಚಿಸಿದ್ದಾರೆ. ರಾಜ್ಕಾಂತ್ ಅವರ ಛಾಯಾಗ್ರಹಣದಲ್ಲಿ ಹಳ್ಳಿಯ ಅಂಗಳ, ಹಸಿರು ಗದ್ದೆಗಳು ಹಾಗೂ ಗ್ರಾಮೀಣ ಪರಿಸರದ ಸೊಬಗು ಮನಮೋಹಕವಾಗಿ ಮೂಡಿಬಂದಿದೆ.

ಕಾಡುವ ಸುಮಧರ ಸಂಗೀತ:

ಸಿನಿಮಾದ ಗೆಲುವಿಗೆ ಸಂಗೀತವೂ ದೊಡ್ಡ ಕಾರಣ. ಮತ್ತೆ ಮತ್ತೆ ಗುನುಗುವಂತಿರುವ ಸಂಗೀತ, ಸಿನಿಮಾ ನೋಡದವರಲ್ಲೂ ಸಿನಿಮಾ ನೋಡುವ ಆಸೆಯನ್ನು ಹೆಚ್ಚಿಸಿರುವುದು ಸಿನಿಮಾದ ಹೆಚ್ಚುಗಾರಿಕೆ. ಸುನಾದ್ ಗೌತಮ್ Sunaad Gowtha. ಅವರ ಸುಮಧುರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರಕ್ಕೆ ದೊಡ್ಡ ಲೀಡ್ ನೀಡಿದೆ.

ಒಟ್ಟಾರೆಯಾಗಿ, ಗ್ರಾಮೀಣ ಬದುಕಿನ ಸೊಗಡು, ಕೌಟುಂಬಿಕ ಮೌಲ್ಯಗಳು ಮತ್ತು ಪ್ರೀತಿಯ ಭಾವನೆಗಳನ್ನು ಒಳಗೊಂಡಿರುವ ‘ಪ್ರೇಮದ ಊರಲಿ’ ಕುಟುಂಬ ಸಮೇತರಾಗಿ ವೀಕ್ಷಿಸಬಹುದಾದ ಚಿತ್ರವಾಗಿ ಗಮನ ಸೆಳೆಯುತ್ತಿದ್ದು, ಗಲ್ಲಾಪೆಟ್ಟಿಗೆಯಲ್ಲೂ ಧೂಳೆಬ್ಬಿಸಿರುವುದು ಕನ್ನಡ ಚಿತ್ರರಂಗಕ್ಕೆ ಒಂದು ದೊಡ್ಡ ಸಮಾಧಾನ ಮತ್ತು ಹೆಮ್ಮೆ ತಂದುಕೊಟ್ಟಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಅಪ್ಪು ಸಿನಿಪಯಣ: ಬಾಲನಟನಿಂದ ಪವರ್ ಸ್ಟಾರ್‌ವರೆಗೆ ಪುನೀತ್ ರಾಜ್‌ಕುಮಾರ್ ನಟಿಸಿದ ಸಿನಿಮಾಗಳ ಪಟ್ಟಿ – Punith Raj Kumar Movie List

ಅಪ್ಪು ಸಿನಿಪಯಣ: ಬಾಲನಟನಿಂದ ಪವರ್ ಸ್ಟಾರ್‌ವರೆಗೆ ಪುನೀತ್ ರಾಜ್‌ಕುಮಾರ್ ನಟಿಸಿದ ಸಿನಿಮಾಗಳ...

ದಸರಾ ಹಬ್ಬದ ಖುಷಿಯಲ್ಲಿ ಈ ಎರಡು ಸಿನಿಮಾಗಳನ್ನು ಒಟಿಟಿಯಲ್ಲಿ ತಪ್ಪದೇ ನೋಡಿ

ದಸರಾ ಹಬ್ಬದ ಖುಷಿಯಲ್ಲಿ ಈ ಎರಡು ಸಿನಿಮಾಗಳನ್ನು ಒಟಿಟಿಯಲ್ಲಿ ತಪ್ಪದೇ ನೋಡಿ ಸಿನಿ...

ಕನ್ನಡದ ಸಿನಿರಸಿಕರ ಮನದಲ್ಲೂ ಕಾಡಿದ್ದ ನಾನಾ ಪಾಟೇಕರ್

ಕನ್ನಡದ ಸಿನಿರಸಿಕರ ಮನದಲ್ಲೂ ಕಾಡಿದ್ದ ನಾನಾ ಪಾಟೇಕರ್ ‘ಯಕ್ಷ’ ಚಿತ್ರದಲ್ಲಿ ಖಡಕ್ ಪೊಲೀಸ್...

ಗಾಂಧಿ ಜಯಂತಿ ಸ್ಪೆಷಲ್: ಮಹಾತ್ಮನ ಸಂದೇಶ ಸಾರುವ ಚಿತ್ರಗಳ ಲಿಸ್ಟ್ ಇಲ್ಲಿದೆ – Top Gandhi Jayanti Special Movies

ಗಾಂಧಿ ಜಯಂತಿ ಸ್ಪೆಷಲ್: ಮಹಾತ್ಮನ ಸಂದೇಶ ಸಾರುವ ಚಿತ್ರಗಳ ಲಿಸ್ಟ್ ಇಲ್ಲಿದೆ...