- ಗಾಂಧಿ ಜಯಂತಿ ಸ್ಪೆಷಲ್: ಮಹಾತ್ಮನ ಸಂದೇಶ ಸಾರುವ ಚಿತ್ರಗಳ ಲಿಸ್ಟ್ ಇಲ್ಲಿದೆ
- ಬೆಳ್ಳಿ ತೆರೆಯಲ್ಲಿ ಮಿಂಚಿದ ಗಾಂಧೀಜಿ ಅವರ ಆದರ್ಶಮಯ ಬದುಕು
- ಸತ್ಯ ಘಟನೆಯಾಧಾರಿತ ಶಕ್ತಿಶಾಲಿ ಕನ್ನಡ ಸಿನಿಮಾಗಳು
ಗಾಂಧೀಜಿ ಅವರ ಬದುಕು, ಆದರ್ಶದ ಘಟನೆ ಆಧಾರಿತ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಮಿಂಚಿವೆ. ಪ್ರೇಕ್ಷಕರನ್ನು ಕಾಡಿವೆ. ಈ ಎಲ್ಲಾ ಸಿನಿಮಾಗಳಲ್ಲಿ ಗಾಂಧೀಜಿ, ಜನತೆಗೆ ನೀಡಿದ ಸಂದೇಶಗಳಿವೆ, ಸ್ಪೂರ್ತಿ ಕತೆಗಳಿವೆ. ಯಾವುದು ಆ ಸಿನಿಮಾಗಳು? ಇಲ್ಲಿದೆ ಲಿಸ್ಟ್
Movies related to Mahatma Gandhi’s life
ಮೋಹನ ದಾಸ Mohanadasa
ಗಾಂಧೀಜಿ ಅವರ ಬಾಲ್ಯದ ಜೀವನ ಆಧಾರಿತ ಚಿತ್ರವಿದು. ಮೋಹಸ ದಾಸ, ಗಾಂಧಿ ಆಗಿ ಪರಿವರ್ತನೆ ಆದ ಕತೆ ಇಲ್ಲಿದೆ. 2021 ರಲ್ಲಿ ಬಿಡುಗಡೆಯಾದ ಈ ಸಿನಿಮಾವನ್ನು ಪಿ.ಶೇಷಾದ್ರಿ ಅವರು ನಿರ್ದೇಶಿಸಿದ್ದು, ಸಮರ್ಥ, ಶ್ರುತಿ, ದತ್ತಣ್ಣ, ಅನಂತ ಮಹಾದೇವನ್ ಮುಂತಾದವರು ನಟಿಸಿದ್ದಾರೆ.
ಕೂರ್ಮಾವತಾರ Koormavathara
ಇದು ಮಹಾತ್ಮಗಾಂಧಿಯವರ ಪಾತ್ರ ಮಾಡುವ ಒಬ್ಬ ನಿವೃತ್ತ ಸರಕಾರಿ ನೌಕರನ ಕತೆ. ಇದು ಗಾಂಧೀಜಿ ಜೀವನದಲ್ಲಿ ಬರುವ ನೈತಿಕ ಹಾಗೂ ಮಾನಸಿಕ ಸಂಘರ್ಷದ ಕಥಾಹಂದರ ಹೊಂದಿದೆ. 2011 ರಲ್ಲಿ ಈ ಚಿತ್ರ ಬಿಡುಗಡೆಯಾಯಿತು. ಗಿರೀಶ್ ಕಾಸರವಳ್ಳಿ ನಿರ್ದೇಶನದ ಈ ಚಿತ್ರದಲ್ಲಿ ಶಿಕಾರಿಪುರ ಕೃಷ್ಣಮೂರ್ತಿ ಜಯಂತಿ, ಅಪೂರ್ವ ಕಾಸರವಳ್ಳಿ ಮೊದಲಾದವರು ನಟಿಸಿದ್ದಾರೆ.
ಗಾಂಧಿ ಸ್ಮೈಲ್ಸ್: Gandhi Smiles
ಇದು ಮೋಸ ಹೋದ ದಲಿತ ಯುವತಿಯೊಬ್ಬಳು ತನಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ‘ಸತ್ಯಾಗ್ರಹ’ ಹೂಡುವುದರ ಸುತ್ತ ಇರುವ ಕತೆ. ಗಾಂಧೀಜಿಯಿಂದ ಸ್ಪೂರ್ತಿ ಪಡೆದ ಕಥಾನಾಯಕಿಯ ನ್ಯಾಯಯುತ ಸತ್ಯಾಗ್ರಹವೇ ಚಿತ್ರದ ಮುಖ್ಯ ವಿಷಯ. 2012 ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಕೃಷ್ಣ ಜೋಶಿ ನಿರ್ದೇಶಿಸಿದ್ದು, ಮುಖ್ಯಮಂತ್ರಿ ಚಂದ್ರು, ಉಮಾಶ್ರೀ, ಪವಿತ್ರಾ ಲೋಕೇಶ್, ಸಿ.ಆರ್. ಸಿಂಹ, ಸುಚೇಂದ್ರ ಪ್ರಸಾದ್, ನಿವೇದಿತಾ ಮೊದಲಾದವರು ನಟಿಸಿದ್ದಾರೆ.


