- ಕನ್ನಡದ ನಟ ನಟಿಯರ ಕನ್ನಡಾಭಿಮಾನದ ಅಣಿಮುತ್ತುಗಳು ಇಲ್ಲಿವೆ
- ಕನ್ನಡ ಬರೀ ನಟನೆಗಲ್ಲಇವರ ಬದುಕಿಗೂ ಶಕ್ತಿ
- ನಿಮ್ಮ ನೆಚ್ಚಿನ ನಟ ನಟಿಯರ ಕನ್ನಡದ ಬಗ್ಗೆ ಏನ್ ಹೇಳ್ತಾರೆ ನೋಡಿ
ಕರ್ನಾಟಕಕ್ಕೆ ಕನ್ನಡ ಚಿತ್ರರಂಗ ನೀಡಿದ ಕೊಡುಗೆ ಅಪಾರ, ಕನ್ನಡ ಚಿತ್ರರಂಗದ ನಟ, ನಟಿಯರು ಕರ್ನಾಟಕ, ಕನ್ನಡ ಭಾಷೆಯ ಕುರಿತು ಅಭಿಮಾನದಿಂದ ಮಾತುಗಳನ್ನು ಆಡುತ್ತಲೇ ಇರುತ್ತಾರೆ. ನಟ, ನಟಿಯರು ಕನ್ನಡದ ಕುರಿತು ಪ್ರೀತಿಯಿಂದ ಆಡಿದ ಮಾತುಗಳ ಆಯ್ದ ಸರಮಾಲೆ ಇಲ್ಲಿದೆ.
Quotes by Kannada film actors regarding Kannada
“ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಕನ್ನಡಿಗರು ಬೇರೆ ಯಾರೂ ಅಲ್ಲ, ಅವರೇ ನನ್ನ ಪ್ರತ್ಯಕ್ಷ ದೇವರು. ನಾನು ಹುಟ್ಟಿದ್ದೇ ಕನ್ನಡ ಮಣ್ಣಿನಲ್ಲಿ, ಸಾಯುವುದೂ ಕನ್ನಡ ಮಣ್ಣಿನಲ್ಲಿ. ನನ್ನ ನಟನೆ ಏನಿದ್ದರೂ ನನ್ನ ಕನ್ನಡ ಜನರಿಗಾಗಿ ಮಾತ್ರ”
-ಡಾ.ರಾಜ್ ಕುಮಾರ್
“ನಾವು ಕೇವಲ ಭಾಷೆಯ ಹೆಸರಿನಲ್ಲಿ ಹೋರಾಡುವುದಕ್ಕಿಂತ, ಕನ್ನಡ ನೆಲದಲ್ಲಿ ಜಾಗತಿಕ ಮಟ್ಟದ ಕೆಲಸಗಳನ್ನು ಮಾಡಿ ತೋರಿಸಬೇಕು. ಕನ್ನಡಿಗರು ಎಲ್ಲ ರಂಗಗಳಲ್ಲೂ ಮುಂಚೂಣಿಯಲ್ಲಿರಬೇಕು.”
-ಶಂಕರ್ ನಾಗ್
“ಕನ್ನಡ ನೆಲದಲ್ಲಿ ಬದುಕುತ್ತಿರುವ ನಾವು ಈ ಮಣ್ಣಿಗೆ ಮತ್ತು ಭಾಷೆಗೆ ಸದಾ ದಾಸರಾಗಿರಬೇಕು, ಬೇರೆ ಭಾಷೆಗಳನ್ನು ಕಲಿಯಿರಿ, ಆದರೆ ಕನ್ನಡವನ್ನು ಎಂದಿಗೂ ಮರೆಯಬೇಡಿ, ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಉಸಿರು ಮತ್ತು ಸಂಸ್ಕೃತಿ.
-ವಿಷ್ಣುವರ್ಧನ್
“ನನಗೆ ಬೇರೆ ಭಾಷೆಗಳ ಸಿನಿಮಾ ಮಾಡುವ ಅವಕಾಶ ಬಂದರೂ, ನಾನು ಕನ್ನಡದಲ್ಲೇ ಮುಂದುವರಿಯಲು ಬಯಸುತ್ತೇನೆ. ನಮ್ಮ ಭಾಷೆಯ ಸೊಗಡು, ಇಲ್ಲಿನ ಜನರ ಪ್ರೀತಿ ಬೇರೆಲ್ಲೂ ಸಿಗುವುದಿಲ್ಲ. ಕನ್ನಡವನ್ನು ನಾವು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬೇಕು”
-ಪುನೀತ್ ರಾಜ್ ಕುಮಾರ್
“ಕನ್ನಡ ಭಾಷೆಯ ವಿಚಾರ ಬಂದಾಗ ಪ್ರಾಣ ಕೊಡೋಕೂ ಸಿದ್ಧನಿದ್ದೇನೆ. ನನಗೆ 59 ವರ್ಷ ಆಯ್ತು. 60ನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ, ಕನ್ನಡ ಭಾಷೆಗೆ ಪ್ರಾಣ ಕೊಡಬೇಕಾದ ಪರಿಸ್ಥಿತಿ ಬಂದರೆ ಅದಕ್ಕೂ ಸಿದ್ಧನಿದ್ದೇನೆ”
-ಶಿವರಾಜ್ ಕುಮಾರ್
“ಕನ್ನಡ ಅನ್ನ ಹಾಕಿದ ನೆಲ ಕರ್ನಾಟಕ, ಬದುಕು, ಭಾವನೆಗಳ ಕೊಟ್ಟ ಭಾಷೆ ಕನ್ನಡ, ಎಂದೆಂದಿಗೂ ಪ್ರೀತಿ ಕೊಡುವವರು ಕನ್ನಡಿಗರು”
-ಕಿಚ್ಚ ಸುದೀಪ್
“ಕನ್ನಡ ಚಿತ್ರರಂಗ ಇಡೀ ದೇಶ ಹೆಮ್ಮೆ ಪಡುವಂತೆ ಮಾಡಿದೆ, ಇದು ನಮ್ಮ ಭಾಷೆಯ ತಾಕತ್ತು.”
-ಯಶ್
“ಕನ್ನಡ ಭಾಷೆ ಮತ್ತು ಸಂಸ್ಕೃತಿ ತುಂಬಾ ಶ್ರೀಮಂತವಾಗಿದೆ. ನಮ್ಮ ಜಾನಪದ, ನಮ್ಮ ಆಚರಣೆಗಳನ್ನು ಸಿನಿಮಾದಲ್ಲಿ ಅಳವಡಿಸಿದಾಗ ಅದು ಜಾಗತಿಕ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ”
-ರಕ್ಚಿತ್ ಶೆಟ್ಟಿ
“ನಮ್ಮ ಮಕ್ಕಳಿಗೆ ಬೇರೆ ಭಾಷೆಗಳನ್ನು ಕಲಿಸುವುದರಲ್ಲಿ ತಪ್ಪಿಲ್ಲ. ಆದರೆ ತಾಯ್ನುಡಿಯಾದ ಕನ್ನಡವನ್ನು ಕಡೆಗಣಿಸಬಾರದು. ಸಂಸ್ಕೃತಿ ಎನ್ನುವುದು ಭಾಷೆಯ ಮೂಲಕವೇ ಮುಂದಿನ ಪೀಳಿಗೆಗೆ”
-ತಾರಾ,
“ಕನ್ನಡ ನಮ್ಮ ಅಸ್ಮಿತೆ. ಕನ್ನಡಿಗರು ವಿಶಾಲ ಹೃದಯಿಗಳು, ಎಲ್ಲರನ್ನೂ ಅಪ್ಪಿಕೊಳ್ಳುತ್ತಾರೆ. ಆದರೆ ನಮ್ಮ ಭಾಷೆಯನ್ನು ನಾವು ಎಂದಿಗೂ ಮರೆಯಬಾರದು ಮತ್ತು ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ.”
-ರಮ್ಯಾ
“ನಾನು ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ ಕರ್ನಾಟಕದಲ್ಲಿ. ಕನ್ನಡ ಭಾಷೆ ನನಗೆ ಬದುಕು ಕೊಟ್ಟಿದೆ. ನನ್ನ ಮಕ್ಕಳಿಗೆ ನಾನು ಮೊದಲು ಕಲಿಸುವುದು ಕನ್ನಡವನ್ನೇ. ನಮ್ಮ ಭಾಷೆಯ ಸೊಗಡೇ ಬೇರೆ.”
-ರಾಧಿಕಾ ಪಂಡಿತ್


