- ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ
- ಸಾಮಾನ್ಯ ಕುಟುಂಬದ ಹುಡುಗನಿಂದ ಪ್ಯಾನ್-ಇಂಡಿಯಾ ಸ್ಟಾರ್‌ವರೆಗೆ ಯಶ್ ಸಾಧನೆ
- ಜನಸಾಮಾನ್ಯನಿಗಿಂತ “ಟಾಕ್ಸಿಕ್” ಹ್ಯಾಂಡಲ್ ಮಾಡುವ ಸಿನಿ ಪ್ರೇಕ್ಷಕನಿಗೆ ವಿಶೇಷ ಈ ಸಿನಿಮಾ ಅಂತಾರೆ ನೋಡಿದವ್ರು
ಕನ್ನಡ ಚಿತ್ರರಂಗದ Sandalwood ರಾಕಿಂಗ್ ಸ್ಟಾರ್ ಯಶ್ Rocking Star Yash ಅವರ ಟಾಕ್ಸಿಕ್ Toxic ಸಿನಿಮಾ ಬಿಡುಗಡೆಯಾದ ಬಳಿಕ ಚಿತ್ರಕ್ಕಿಂತಲೂ ಅದರ ಸುತ್ತಲಿನ ಚರ್ಚೆಗಳು ಹೆಚ್ಚು ಸುದ್ದಿಯಾಗುತ್ತಿವೆ. ಸಿನಿಮಾ ಆಗಸ್ಟ್ 26ರಂದು ತೆರೆಕಂಡಿದ್ದು, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ದೃಶ್ಯಗಳು, ಕೆಲವು ಸನ್ನಿವೇಶಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮತ್ತು ವಿವಾದಗಳು ನಡೆದಿವೆ.
ಸ್ಫೂರ್ತಿದಾಯಕ ಸ್ಟಾರ್‌ಡಮ್
ಆದರೆ ಟಾಕ್ಸಿಕ್ ಸುತ್ತಲಿನ ಈ ಚರ್ಚೆಗಳ ನಡುವೆ ಗಮನ ಸೆಳೆಯುವ ಮತ್ತೊಂದು ವಿಷಯವೆಂದರೆ ಯಶ್ ಸಿನಿಪಯಣ. ಇಂದು ದೇಶಾದ್ಯಂತ ಮಾತ್ರವಲ್ಲದೆ ವಿದೇಶಗಳಲ್ಲೂ ಅಭಿಮಾನಿಗಳನ್ನು ಹೊಂದಿರುವ ಯಶ್, ಯಾವುದೇ ದೊಡ್ಡ ಸಿನಿಮಾ ಕುಟುಂಬದ ಹಿನ್ನೆಲೆಯಿಂದ ಬಂದವರಲ್ಲ. ಸಾಮಾನ್ಯ ಕುಟುಂಬದಿಂದ ಬಂದ ಅವರು ತಮ್ಮದೇ ಪರಿಶ್ರಮದಿಂದ ಚಿತ್ರರಂಗದಲ್ಲಿ ಸ್ಥಾನ ಪಡೆದವರು. ಸಣ್ಣಪುಟ್ಟ ಅವಕಾಶಗಳಿಂದ ಆರಂಭವಾದ ಅವರ ಪಯಣ ನಿಧಾನವಾಗಿ ದೊಡ್ಡ ಪರದೆಯತ್ತ ಸಾಗಿತು. ಇಂದು ಅವರ ಸಿನಿಮಾಗಳು ಬಿಡುಗಡೆಯಾಗುವಾಗ ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಪ್ರೇಕ್ಷಕರಲ್ಲೂ ಕುತೂಹಲ ಮೂಡುತ್ತದೆ.
ಹೀಗಿದೆ ಸಿನಿಪ್ರೇಮಿಗಳ ಅಭಿಪ್ರಾಯ
“ಒಬ್ಬ ವ್ಯಕ್ತಿಯಲ್ಲಿ ಕಾಮ, ಕ್ರೋಧ, ಮದ-ಮತ್ಸರ, ಬಂದಾಗ ಏನೆಲ್ಲಾ ಮಾಡಿಸುತ್ತದೆ, ಮತ್ತು ಅವೆಲ್ಲಾ ಕೊನೆಯಲ್ಲಿ ನಮ್ಮನ್ನೇ ಸುಟ್ಟು ನಾಶ ಮಾಡುತ್ತವೆ. ಜೀವನದಲ್ಲಿ ನಾವು ಏನು ಆಯ್ಕೆ ಮಾಡುತ್ತೇವೋ ಅವುಗಳಿಗೆ ಬೆಲೆ ಕಟ್ಟಬೇಕಾಗುತ್ತದೆ. ವಯಸ್ಸು ಅನ್ನೋದು ಒಂದು ಆಟ, ಆ ಆಟದಿಂದ ಜೀವನದಲ್ಲಿ ಹೇಗೆಲ್ಲಾ ತೊಂದರೆ ಆಗುತ್ತದೆ ಅನ್ನೋದೆ ಮೂವಿಯ ಮುಖ್ಯ ಥೀಮ್.
ಆದ್ರೆ ಈ ಸಿನಿಮಾ ಲಾರ್ಜ್ ಆಡಿಯನ್ಸ್ ಗೆ ಅಲ್ಲ, ಕಾರಣ ಜನಸಾಮಾನ್ಯರು ಸಿನಿಮಾವನ್ನು ಎಂಟರ್ಟೈನ್ಮೆಂಟ್ ಗೋಸ್ಕರ ನೋಡ್ತಾರೆ, ಲಾಜಿಕ್ ಹುಡುಕೋಕೆ ಅಥವಾ ಎಕ್ಸ್ಪರಿಮೆಂಟ್ ಮಾಡಕ್ಕಾಗಲಿ ನೋಡುವವರು ಅತಿ ವಿರಳ. ಹಾಗಾಗಿ ಸಿನಿಮಾ ತಂಡ ಸಿನಿಮಾವನ್ನು ಸಿನಿಮಾ ರೀತಿ ಹಾಗೆ ಚಿತ್ರಮಂದಿರಗಳನ್ನ ಚಿತ್ರಮಂದಿರಗಳ ರೀತಿಯಲ್ಲಿ ಇಟ್ಟಿದ್ರೆ ಜನರಿಗೆ ಇಷ್ಟ ಆಗುತ್ತಿತ್ತೇನೋ. ಆದರೆ ಇಲ್ಲಿ ಸಿನಿಮಾವನ್ನು ಒಂದು ಎಕ್ಸ್ಪರಿಮೆಂಟಲ್ ಪ್ರಾಡಕ್ಟ್ ಹಾಗು ಚಿತ್ರಮಂದಿರಗಳನ್ನ ಲ್ಯಾಬ್ ರೀತಿ ಮಾಡಿಬಿಟ್ರು. ಅರ್ಧ ಸಿನಿಮಾ ನೋಡುವಷ್ಟರಲ್ಲಿ ತಲೆ ಅರ್ಧ ಹಾಳಾದ ಹಾಗೆ ಆಗುತ್ತದೆ. ಕೊನೆಯಲ್ಲಿ ಇಷ್ಟೊತ್ತು ನೀವು ನೋಡಿರೋದು ಒಂದು ಇಲ್ಲಿ ಆಗ್ತಿರೋದೇ ಇನ್ನೊಂದು ಅಂತ ಅನ್ನಿಸಿದ್ರೆ ಪ್ರೇಕ್ಷಕನಿಗೆ ತಲೆ ಕೆಟ್ಟು ಪಿತ್ತ ನೆತ್ತಿಗೇರಿದ ಅನುಭವ.
ಒಟ್ಟಿನಲ್ಲಿ ಸಿನಿಮಾದಲ್ಲಿ ಯಶ್ ಒಬ್ಬರೇ ಹೀರೋ ಅಲ್ಲ. ಪರದೆ ಮೇಲೆ ಯಶ್ ರಾಯನ ರೂಪದಲ್ಲಿ ಹೀರೋ ಆಗಿ ಕಂಡ್ರೆ , ತೆರೆಯ ಹಿಂದೆ SFX ನಿಂದ ಹಿಡಿದು VFX ವರೆಗೂ ವರ್ಕ್ ಮಾಡಿರುವಂತಹ ಟೆಕ್ನಿಷಿಯನ್ಗಳು ಕೂಡ ಒಂದು ರೀತಿ ಹೀರೋ ಅಂತಾನೆ ಹೇಳಬಹುದು. ಕೊನೆಯದಾಗಿ TOXIC is not a movie for every audience… It’s a movie for those who can handle the TOXIC… It’s a fairy tale for experimental minds…!”
ಸಿನಿಪ್ರಿಯರಲ್ಲಿ ಮಿಶ್ರ ಪ್ರತಿಕ್ರಿಯೆ
ಟಾಕ್ಸಿಕ್ ಸಿನಿಮಾ ಹೇಗಿದೆ ಎಂಬುದರ ಬಗ್ಗೆ ಪ್ರೇಕ್ಷಕರ ಅಭಿಪ್ರಾಯಗಳು ವಿಭಿನ್ನವಾಗಿರಬಹುದು. ಕೆಲವರಿಗೆ ಸಿನಿಮಾ ಇಷ್ಟವಾಗಿದ್ದರೆ, ಇನ್ನೂ ಕೆಲವರು ಕಥೆ ಮತ್ತು ನಿರೂಪಣೆಯ ಬಗ್ಗೆ ಟೀಕೆ ಮಾಡಿದ್ದಾರೆ. ಆದರೆ ಈ ಎಲ್ಲದರ ನಡುವೆಯೂ ಯಶ್ ಅವರ ಎರಡು ದಶಕಗಳ ಪರಿಶ್ರಮದಿಂದ ನಿರ್ಮಿಸಿರುವ ಸ್ಟಾರ್‌ಡಮ್ ಅನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಒಂದು ಕಾಲದಲ್ಲಿ ಕಿರುತೆರೆ ಮತ್ತು ರಂಗಭೂಮಿಯಿಂದ ಆರಂಭಿಸಿದ್ದ ಹುಡುಗ ಇಂದು ದೇಶ-ವಿದೇಶಗಳಲ್ಲಿ ತನ್ನದೇ ಅಭಿಮಾನಿ ಬಳಗ ಹೊಂದಿರುವ ಪ್ಯಾನ್-ಇಂಡಿಯಾ ಸ್ಟಾರ್ ಆಗಿರುವುದು, ಕನ್ನಡ ಚಿತ್ರರಂಗದ ಪ್ರತಿಭೆ ಮತ್ತು ಪರಿಶ್ರಮಕ್ಕೆ ಸಿಕ್ಕಿರುವ ದೊಡ್ಡ ಉದಾಹರಣೆ ಎಂದೇ ಹೇಳಬಹುದು.


