- ರೀಲ್ಸ್ ಮಾಡಲು ಹಾಡು ಹುಡುಕುತ್ತಿದ್ದೀರಾ? ಈ ಹಾಡುಗಳಿಗೆ ಇದೆ ಸಖತ್ ಡಿಮ್ಯಾಂಡ್!
- ಕನ್ನಡದ ಈ 10 ಹಾಡುಗಳಿಗೆ ರೀಲ್ಸ್ ಮಾಡಿದ್ರೆ ವೈರಲ್ ಆಗೋ ಚಾನ್ಸ್ ಹೆಚ್ಚು
- ಇಲ್ಲಿದೆ ನಿಮ್ಮ ರೀಲ್ಸ್ ಟಾಪಿಕ್ ಗೆ ಸೂಕ್ತವಾದ ಹಾಡಿನ ಸಜೆಷನ್
ಇತ್ತೀಚಿನ ರೀಲ್ಸ್ ಸಾಂಗ್ಸ್ ಟ್ರೆಂಡ್ ಟ್ರಾಕ್ ಮಾಡಿದ್ರೆ ಕನ್ನಡ ಲವ್ ಸಾಂಗ್ಸ್, ಮೆಲೋಡಿ, ಜಾನಪದ ಮತ್ತು ಹೊಸ ಸಿನಿಮಾಗಳ ಹಿಟ್ ಹಾಡುಗಳು ಹೆಚ್ಚು ವೈರಲ್ ಆಗ್ತಿವೆ.
Instagram Reelsಗೆ ಸೂಕ್ತವಾದ ಕನ್ನಡ ಹಾಡುಗಳು
Kannada Songs for Instagram reels
ಲವ್ ರೀಲ್ಸ್ ಗೆ
ಪ್ರೇಮ, ಕಪಲ್, ಕ್ರಷ್ ಹಾಗೂ ರೊಮ್ಯಾಂಟಿಕ್ ಕ್ಷಣಗಳ ವಿಡಿಯೋಗಳಿಗೆ ಮೆಲೋಡಿ ಸಾಂಗ್ಸ್ ಉತ್ತಮ ಆಯ್ಕೆ. ತುಂಬಾ ಟ್ರೆಂಡಿಂಗ್ ನಲ್ಲಿರೋ ಸಾಂಗ್ಸ್ ಲಿಸ್ಟ್ ಇಲ್ಲಿದೆ.
• ಕರೆಯೋಲೆ- ಸಂಜಿತ್ ಹೆಗ್ಡೆ
• ನಿನ್ನ ನೋಟವು- ತನ್ಮಯ್ ಗುರುರಾಜ್
• ನಾನೇ ನೀನಂತೆ- ಬ್ರ್ಯಾಟ್
• ಏನೋ ಒಂಥರಾ ಚಂದ
• ತುಳಸಿ
ಡ್ಯಾನ್ಸ್ ರೀಲ್ಸ್ ಗೆ
ಎನರ್ಜಿಟಿಕ್ ಡ್ಯಾನ್ಸ್, ಟ್ರಾನ್ಸಿಷನ್ ಮತ್ತು ಫನ್ ವಿಡಿಯೋಗಳಿಗೆ ಬೀಟ್ ಇರುವ ಹಾಡುಗಳು ಸೂಕ್ತ.
• ತಬಾಹಿ- ಟಾಕ್ಸಿಕ್
• ಬೆಂಕಿ ಸಾಂಗ್- ಗ್ರಾಮಾಯಣ
• ಮಸ್ತ್ ಮಲೈಕಾ- ಮಾರ್ಕ್
• ಬ್ಯಾಂಗಲ್ ಬಂಗಾರಿ- ಎಕ್ಕ
• ಅಣ್ತಮ್ಮ ಜೋಡೆತ್ತು ಕಣೋ-ಕೆಡಿ
• ಸೈಕೋ ಸೈತಾನ್- ಮಾರ್ಕ್
ಟ್ರಾವೆಲ್ ರೀಲ್ಸ್ ಗೆ
ಪ್ರಕೃತಿ, ಬೈಕ್ ರೈಡ್, ಪ್ರವಾಸ, ಮಳೆ ಮತ್ತು ಸ್ಲೋ-ಮೋಷನ್ ದೃಶ್ಯಗಳಿಗೆ ಸಾಫ್ಟ್ ಮೆಲೋಡಿ ಅಥವಾ ಫೀಲ್-ಗುಡ್ ಹಾಡುಗಳು ಚೆನ್ನಾಗಿ ಹೊಂದಿಕೊಳ್ಳುತ್ತವೆ.
• ಗಿರ ಗಿರಾ- ವಾಸುಕಿ ವೈಭವ್
• ಬ್ರಹ್ಮಕಲಶ- ಕಾಂತಾರ 2
• ಮದನ ಮನ ಮೋಹಿನಿ- ಕಾಂತಾರ 2
ಅಟಿಟ್ಯೂಡ್ ರೀಲ್ಸ್ ಗೆ
ಮಾಸ್ ಬೀಟ್ ಇರುವ ಹಾಡುಗಳು, ವಿಶೇಷವಾಗಿ ಎನೆರ್ಜಿಟಿಕ್ ಟ್ರಾಕ್ಸ್, ಆಟಿಟ್ಯೂಡ್ ಹಾಗೂ ಟ್ರಾನ್ಸಿಷನ್ ರೀಲ್ಸ್ಗೆ ಬಳಸಬಹುದು
• ಇದ್ರೆ ನೆಮ್ದಿಯಾಗ್ ಇರ್ಬೇಕ್- ದಿ ಡೆವಿಲ್
• ಅಫ್ರೋ ಟಪಾಂಗ್-45
ಎಮೋಷನಲ್ ಮತ್ತು ಫೀಲ್ ಗುಡ್ ರೀಲ್ಸ್
• ಮಾಯಾವಿ- ಭೂಮಿ 2024, ಭಾವನಾತ್ಮಕ ಹಾಗೂ ನೆನಪುಗಳ ವಿಡಿಯೋಗಳಿಗೆ ಸೂಕ್ತ ಈ ಹಾಡು
• ಕಡಲನು- ಸಪ್ತ ಸಾಗರದಾಚೆ ಎಲ್ಲೋ
• ಹೃದಯವು ಕೇಳದೇ- ಕಲ್ಟ್, ಲವ್ ಮತ್ತು ಎಮೋಷನಲ್ ಕಂಟೆಂಟ್‌ಗೆ ಬಳಸಬಹುದಾದ ಮತ್ತೊಂದು ಹಾಡು.
ಹಳೆಯ ಹಾಡುಗಳಿಗೂ ಹೊಸ ಟ್ರೆಂಡ್
ಹೊಸ ಹಾಡುಗಳಷ್ಟೇ ಅಲ್ಲದೆ, ಹಳೆಯ ಕನ್ನಡ ಹಾಡುಗಳನ್ನು ಹೊಸ ಟ್ರಾನ್ಸಿಷನ್, ಕಪಲ್ ಅಥವಾ ನಾಸ್ಟಾಲ್ಜಿಕ್ ರೀಲ್ಸ್ ಜೊತೆ ಬಳಸುವುದೂ ಒಳ್ಳೆಯ ಸ್ಟಾಟರ್ಜಿ. ಇನ್ಸ್ಟಾಗ್ರಾಮ್ ನಲ್ಲಿ ಹಳೆಯ ಹಾಡುಗಳು ಹೊಸ ರಿಲ್ ಟ್ರೆಂಡ್ಸ್ ಮೂಲಕ ಮತ್ತೆ ವೈರಲ್ ಆಗುವ ಉದಾಹರಣೆಗಳು ಇತ್ತೀಚೆಗೆ ಕಂಡುಬರುತ್ತಿವೆ.


