- ಈ ಬಾರಿ ಎಲ್ಲಾ ಭಾಷೆಗಳಲ್ಲೂ ಏಕಕಾಲಕ್ಕೆ ಬಿಗ್ ಬಾಸ್ ಪ್ರಾರಂಭಿಸುವ ಸಾಧ್ಯತೆ
- Bigg Boss ಕನ್ನಡ ಸೀಸನ್ 13 Big Update
- ಸ್ಪರ್ಧಿಗಳು ಯಾರಿರಬಹುದೆಂದು ಕುತೂಹಲದಿಂದ ಕಾಯ್ತಿದ್ದಾರೆ ಬಿಗ್ ಬಾಸ್ ಅಭಿಮಾನಿಗಳು
ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ Bigboss Kannada ಸೀಸನ್ 13ರ Season 13 ಕುರಿತು ಪ್ರೇಕ್ಷಕರ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ಲಾಂಚ್ ದಿನಾಂಕದ ಬಗ್ಗೆ ಹೊಸ ಮಾಹಿತಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ, ಸೆಪ್ಟೆಂಬರ್ 5ರಂದು ಹೊಸ ಸೀಸನ್ ಆರಂಭವಾಗುವ ಸಾಧ್ಯತೆ ಇದೆ.
ಕಳೆದ ಸೀಸನ್‌ನಲ್ಲಿ ಡ್ರಾಮಾ, ಟಾಸ್ಕ್‌ಗಳು, ಭಿನ್ನಾಭಿಪ್ರಾಯಗಳು, ಸ್ನೇಹ ಹಾಗೂ ಮನರಂಜನೆಯ ಮೂಲಕ ಗಮನ ಸೆಳೆದಿದ್ದ ಬಿಗ್‌ಬಾಸ್, ಈ ಬಾರಿ ಮತ್ತಷ್ಟು ಹೊಸತನದೊಂದಿಗೆ ಬರಲಿದೆ ಎನ್ನಲಾಗುತ್ತಿದೆ.
ಕಾಮನ್ ಮ್ಯಾನ್‌ಗೆ ಅವಕಾಶ
ಈ ಬಾರಿಯ ಪ್ರಮುಖ ಆಕರ್ಷಣೆ ‘ಕಾಮನ್ ಮ್ಯಾನ್’ ಎಂಟ್ರಿ. ಸಾಮಾನ್ಯ ಜನರಿಗಾಗಿ ಈಗಾಗಲೇ ಆಡಿಷನ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸಾವಿರಾರು ಮಂದಿ ತಮ್ಮ ಪ್ರತಿಭೆಯನ್ನು ಮೂರು ನಿಮಿಷಗಳ ವಿಡಿಯೊ ಮೂಲಕ ಕಳುಹಿಸಿದ್ದಾರೆ. ಅಂತಿಮವಾಗಿ ಯಾರಿಗೆ ದೊಡ್ಮನೆ ಪ್ರವೇಶ ಸಿಗಲಿದೆ ಎಂಬುದು ಲಾಂಚ್ ದಿನವೇ ಬಹಿರಂಗವಾಗಲಿದೆ.
ಭಾರತದ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ?
ಈ ಬಾರಿ ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಬಾಂಗ್ಲಾ ಭಾಷೆಗಳ ಬಿಗ್‌ಬಾಸ್ ಸೀಸನ್‌ಗಳು ಸಹ ಒಂದೇ ಅವಧಿಯಲ್ಲಿ ಆರಂಭವಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರಿಂದ ದೇಶದಾದ್ಯಂತ ಬಿಗ್‌ಬಾಸ್ ಕ್ರೇಜ್ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ.
ಸ್ಪರ್ಧಿಗಳ ಬಗ್ಗೆ ಭಾರೀ ಕುತೂಹಲ
ಸದ್ಯ ಸೋಶಿಯಲ್ ಮೀಡಿಯಾ ಮತ್ತು ಗಾಂಧಿನಗರದಲ್ಲಿ ಸ್ಪರ್ಧಿಗಳ ಹೆಸರುಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕೆಲ ರೀಲ್ಸ್ ಸ್ಟಾರ್‌ಗಳು, ಧಾರಾವಾಹಿ ಕಲಾವಿದರು ಹಾಗೂ ಇತರ ಜನಪ್ರಿಯ ವ್ಯಕ್ತಿಗಳ ಹೆಸರುಗಳು ಕೇಳಿಬರುತ್ತಿದ್ದರೂ, ಸ್ಪರ್ಧಿಗಳ ಅಧಿಕೃತ ಪಟ್ಟಿ ಇನ್ನೂ ಪ್ರಕಟವಾಗಿಲ್ಲ.
ಒಟ್ಟಾರೆ, ಬಿಗ್ ಬಾಸ್ ಕನ್ನಡ ಸೀಸನ್ 13ರ ಕುರಿತು ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಮೂಡಿದ್ದು, ಅಧಿಕೃತ ಘೋಷಣೆಗಾಗಿ ಎಲ್ಲರೂ ಕಾಯುತ್ತಿದ್ದಾರೆ.


