ಅಗ್ನಿಸಾಕ್ಷಿಯ ಸನ್ನಿಧಿಯಾಗಿ ಮನೆಮಾತಾದ ವೈಷ್ಣವಿ ಗೌಡ: ಸಂಪೂರ್ಣ ಜೀವನಚರಿತ್ರೆ ಇಲ್ಲಿದೆ – Vaishnavi Gowda: The ‘Agnisakshi’ Star’s Complete Biography

Date:

  • ಅಗ್ನಿಸಾಕ್ಷಿಯ ಸನ್ನಿಧಿಯಾಗಿ ಮನೆಮಾತಾದ ವೈಷ್ಣವಿ ಗೌಡ: ಸಂಪೂರ್ಣ ಜೀವನಚರಿತ್ರೆ ಇಲ್ಲಿದೆ
  • ನಟಿ ವೈಷ್ಣವಿ ಗೌಡ: ಕಿರುತೆರೆ, ಸಿನಿಮಾ ಮತ್ತು ಡಿಜಿಟಲ್ ಲೋಕದ ಯಶಸ್ವಿ ಪಯಣ
  • ಕನ್ನಡ ಕಿರುತೆರೆಯ ಮೆಚ್ಚಿನ ನಾಯಕಿಯ ಇಷ್ಟಗಳೇನು ಎಲ್ಲಾ ಡೀಟೈಲ್ಸ್ ಇಲ್ಲಿದೆ

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರಾದ ವೈಷ್ಣವಿ ಗೌಡ Vaishnavi Gowda ಅವರು ತಮ್ಮ ಅದ್ಭುತ ಅಭಿನಯ, ಭರತನಾಟ್ಯ, ಗಾಯನ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿದ್ದಾರೆ. ಕಿರುತೆರೆಯಲ್ಲಿ ಸನ್ನಿಧಿ ಮತ್ತು ಸೀತಾ ಪಾತ್ರಗಳ ಮೂಲಕ ಮನೆಮಾತಾಗಿರುವ ವೈಷ್ಣವಿ, ಇಂದು ನಟಿಯಾಗಿ ಮಾತ್ರವಲ್ಲದೆ ನೃತ್ಯಗಾರ್ತಿ, ಗಾಯಕಿ, ಕಂಟೆಂಟ್ ಕ್ರಿಯೇಟರ್ ಹಾಗೂ ಪ್ರಭಾವಿ ಸಾಮಾಜಿಕ ಮಾಧ್ಯಮ ವ್ಯಕ್ತಿತ್ವವಾಗಿಯೂ ಗುರುತಿಸಿಕೊಂಡಿದ್ದಾರೆ.

1992ರ ಫೆಬ್ರವರಿ 20ರಂದು ಬೆಂಗಳೂರಿನಲ್ಲಿ ಜನಿಸಿದ ವೈಷ್ಣವಿ ಗೌಡ ಅವರು ಸಾಂಪ್ರದಾಯಿಕ ಕನ್ನಡ ಕುಟುಂಬದಲ್ಲಿ ಬೆಳೆದರು. ತಂದೆ ರವಿ ಕುಮಾರ್ ಗೌಡ ಹಾಗೂ ತಾಯಿ ಭಾನು ಗೌಡ ಅವರ ಪ್ರೋತ್ಸಾಹವೇ ತಮ್ಮ ಕಲಾ ಬದುಕಿನ ಅಡಿಪಾಯ ಎಂದು ಅವರು ಹಲವು ಬಾರಿ ಹೇಳಿಕೊಂಡಿದ್ದಾರೆ. ಸಹೋದರ ಸುನೀಲ್ ಕುಮಾರ್ ಅವರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿರುವ ವೈಷ್ಣವಿ, ಕುಟುಂಬದ ಬೆಂಬಲದಿಂದಲೇ ತಮ್ಮ ಕನಸುಗಳನ್ನು ನನಸಾಗಿಸಿಕೊಂಡಿದ್ದಾರೆ.

ವೈಷ್ಣವಿ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಬೆಂಗಳೂರಿನಲ್ಲೇ ಪೂರ್ಣಗೊಳಿಸಿದರು. ನಂತರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣಕ್ಕೆ ಸೇರ್ಪಡೆಯಾದರೂ, ಕಿರುತೆರೆ ಕ್ಷೇತ್ರದಲ್ಲಿ ಅವಕಾಶಗಳು ಹೆಚ್ಚಿದ ಹಿನ್ನೆಲೆಯಲ್ಲಿ ನಿರಂತರ ಚಿತ್ರೀಕರಣದ ಕಾರಣ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

ವೈಷ್ಣವಿ ಗೌಡ ಅವರ ಪತಿ ಅಂಕೂಲ್ ಮಿಶ್ರಾ. ಕುಟುಂಬ ಮತ್ತು ವೃತ್ತಿಜೀವನದ ನಡುವೆ ಸಮತೋಲನ ಕಾಯ್ದುಕೊಂಡು ಅವರು ತಮ್ಮ ಕಲಾ ಪಯಣವನ್ನು ಯಶಸ್ವಿಯಾಗಿ ಮುಂದುವರಿಸುತ್ತಿದ್ದಾರೆ.

ಬಾಲ್ಯದಿಂದಲೇ ಕಲೆಯತ್ತ ಒಲವು

ಬಾಲ್ಯದಿಂದಲೇ ವೈಷ್ಣವಿ ಅವರಿಗೆ ನೃತ್ಯ ಮತ್ತು ಸಂಗೀತದ ಮೇಲೆ ವಿಶೇಷ ಆಸಕ್ತಿ ಇತ್ತು. ಭರತನಾಟ್ಯದಲ್ಲಿ ಶಾಸ್ತ್ರೀಯ ತರಬೇತಿ ಪಡೆದ ಅವರು ಕರ್ನಾಟಕದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ದೇವಾಲಯಗಳ ಉತ್ಸವಗಳು ಹಾಗೂ ವೇದಿಕೆಗಳಲ್ಲಿ ಅನೇಕ ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ಭರತನಾಟ್ಯದ ಮೂಲಕ ಲಯ, ತಾಳ ಮತ್ತು ಭಾವಾಭಿನಯದಲ್ಲಿ ಪರಿಣತಿ ಪಡೆದಿರುವ ಅವರು, ಸಾಂದರ್ಭಿಕವಾಗಿ ಭಕ್ತಿಗೀತೆ ಹಾಗೂ ಶಾಸ್ತ್ರೀಯ ಹಾಡುಗಳನ್ನೂ ಹಾಡುತ್ತಾರೆ.

ಕಿರುತೆರೆಯ ಯಶಸ್ವಿ ಪಯಣ

ವೈಷ್ಣವಿ ಗೌಡ ಅವರ ಅಭಿನಯ ಪಯಣ ಪೌರಾಣಿಕ ಧಾರಾವಾಹಿ ‘ದೇವಿ’ Devi ಮೂಲಕ ಆರಂಭವಾಯಿತು. ನಂತರ ‘ಪುನರ್ವಿವಾಹ’ Punarvivaha ಧಾರಾವಾಹಿಯಲ್ಲಿ ಅಭಿನಯಿಸಿ ಗಮನ ಸೆಳೆದರು. ಆದರೆ 2013ರಲ್ಲಿ ಆರಂಭವಾದ ‘ಅಗ್ನಿಸಾಕ್ಷಿ’ Agnisakshi ಧಾರಾವಾಹಿಯ ‘ಸನ್ನಿಧಿ’ ಪಾತ್ರವೇ ಅವರ ಬದುಕಿನ ಮಹತ್ವದ ತಿರುವಾಯಿತು. ಸುಮಾರು ಆರು ವರ್ಷಗಳ ಕಾಲ ಪ್ರಸಾರವಾದ ಈ ಧಾರಾವಾಹಿ ಅವರಿಗೆ ಕರ್ನಾಟಕದ ಮನೆಮಾತಿನ ನಟಿ ಎಂಬ ಹೆಗ್ಗಳಿಕೆಯನ್ನು ತಂದುಕೊಟ್ಟಿತು.
ನಂತರ ‘ಸೀತಾ ರಾಮ’ (2023–2025) Seetha Rama ಧಾರಾವಾಹಿಯಲ್ಲಿ ಸೀತಾ ಪಾತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮನ ಗೆದ್ದರು. ಏಕಪೋಷಕ ತಾಯಿಯ ಪಾತ್ರದಲ್ಲಿ ಅವರ ಅಭಿನಯ ವ್ಯಾಪಕ ಮೆಚ್ಚುಗೆಗೆ ಪಾತ್ರವಾಯಿತು.

ರಿಯಾಲಿಟಿ ಶೋಗಳಲ್ಲಿ ಜನಪ್ರಿಯತೆ

ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ ವೈಷ್ಣವಿ ತಮ್ಮ ಸಂಯಮ, ಸರಳತೆ ಹಾಗೂ ವ್ಯಕ್ತಿತ್ವದಿಂದ ಅಪಾರ ಅಭಿಮಾನಿಗಳನ್ನು ಗಳಿಸಿದರು. ಅವರು ಟಾಪ್-5 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು.

ಇದರ ಜೊತೆಗೆ ಮಜಾ ಟಾಕೀಸ್, ಡ್ಯಾನ್ಸಿಂಗ್ ಚಾಂಪಿಯನ್ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳು ಹಾಗೂ ವಿಶೇಷ ಹಬ್ಬದ ಸಂಚಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾ ಪಯಣ

ಕಿರುತೆರೆಯಲ್ಲಿ ಯಶಸ್ಸು ಕಂಡ ನಂತರ ವೈಷ್ಣವಿ ಬೆಳ್ಳಿತೆರೆಯಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.
• ಗಿರ್ಗಿಟ್ಲೆ (2019) – ನಾಯಕಿಯಾಗಿ ಬೆಳ್ಳಿತೆರೆಗೆ ಪದಾರ್ಪಣೆ.
• ಬಹುಕೃತ ವೇಷಂ (2022) – ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಪ್ರಮುಖ ಪಾತ್ರ.
• ಬಿಳಿ ಚುಕ್ಕಿ ಹಳ್ಳಿ ಹಕ್ಕಿ (2025) – ಭಾವನಾತ್ಮಕ ಕಥಾಹಂದರ ಹೊಂದಿರುವ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಡಿಜಿಟಲ್ ಜಗತ್ತಿನಲ್ಲೂ ಯಶಸ್ಸು
ಬಿಗ್ ಬಾಸ್ ನಂತರ ವೈಷ್ಣವಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾದರು. ಜೀವನಶೈಲಿ, ಫ್ಯಾಷನ್, ಸಾಂಪ್ರದಾಯಿಕ ಉಡುಗೆ, ಪ್ರವಾಸ, ಫಿಟ್ನೆಸ್ ಹಾಗೂ ಮನರಂಜನಾ ವಿಡಿಯೊಗಳ ಮೂಲಕ ಅವರು ದಕ್ಷಿಣ ಭಾರತದ ಪ್ರಮುಖ ಡಿಜಿಟಲ್ ಇನ್‌ಫ್ಲುಯೆನ್ಸರ್‌ಗಳಲ್ಲಿ ಒಬ್ಬರಾಗಿದ್ದಾರೆ.

ಅಗ್ನಿಸಾಕ್ಷಿ ಧಾರಾವಾಹಿಯಲ್ಲಿನ ಅಭಿನಯಕ್ಕಾಗಿ ಅವರು ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ನಲ್ಲಿ ಹಲವು ಬಾರಿ ‘ಮನೆ ಮೆಚ್ಚಿದ ಸೊಸೆ’ ಹಾಗೂ ‘ಜನ ಮೆಚ್ಚಿದ ನಾಯಕಿ’ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಭರತನಾಟ್ಯ , ಗಾಯನ, ಪ್ರವಾಸ, ಯೋಗ ಮತ್ತು ಫಿಟ್ನೆಸ್ , ಪುಸ್ತಕ ಓದುವುದು, ಛಾಯಾಗ್ರಹಣ, ಸಾಮಾಜಿಕ ಜಾಲತಾಣಗಳಿಗಾಗಿ ಕಂಟೆಂಟ್ ಸೃಷ್ಟಿಸುವುದು, ಫ್ಯಾಷನ್ ಮತ್ತು ಸ್ಟೈಲಿಂಗ್ ಇವರ ಹವ್ಯಾಸಗಳಾದ್ರೆ, ಇಷ್ಟದ ಬಣ್ಣ: ಗುಲಾಬಿ, ಬಿಳಿ, ದಕ್ಷಿಣ ಭಾರತೀಯ ಆಹಾರಗಳೇ ಇವರಿಗಿಷ್ಟ. ಇಷ್ಟದ ನಟ: ಡಾ. ರಾಜ್‌ಕುಮಾರ್, ಇಷ್ಟದ ನಟಿ: ಸೌಂದರ್ಯ , ಇಷ್ಟದ ಕ್ರೀಡೆ: ಬ್ಯಾಡ್ಮಿಂಟನ್, ಇಷ್ಟದ ಪ್ರವಾಸಿ ತಾಣ: ಕೊಡಗು, ಮೈಸೂರು. ಇಷ್ಟದ ಉಡುಗೆ: ಸಾಂಪ್ರದಾಯಿಕ ಕಾಂಜೀವರಂ ಸೀರೆ

ನೃತ್ಯಗಾರ್ತಿಯಾಗಿ ಆರಂಭವಾದ ವೈಷ್ಣವಿ ಗೌಡ ಅವರ ಪಯಣ ಇಂದು ಯಶಸ್ವಿ ನಟಿ, ಗಾಯಕಿ, ಡಿಜಿಟಲ್ ಇನ್‌ಫ್ಲುಯೆನ್ಸರ್ ಹಾಗೂ ಯುವಜನತೆಗೆ ಪ್ರೇರಣೆಯಾದ ವ್ಯಕ್ತಿತ್ವವಾಗಿ ಬೆಳೆದಿದೆ. ಪ್ರತಿಭೆ, ಪರಿಶ್ರಮ ಮತ್ತು ಸರಳ ವ್ಯಕ್ತಿತ್ವದಿಂದ ಕನ್ನಡ ಮನರಂಜನಾ ಕ್ಷೇತ್ರದಲ್ಲಿ ಅವರು ತಮ್ಮದೇ ಆದ ವಿಶಿಷ್ಟ ಸ್ಥಾನವನ್ನು ನಿರ್ಮಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುವ ನಿರೀಕ್ಷೆಯಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ ಕನ್ನಡ ಚಿತ್ರಗಳು – These new Kannada movies are available on OTT

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ...

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ – The Remarkable Journey of “Toxic”

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ ಸಾಮಾನ್ಯ...

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ – How to submit your short film to a film festival

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ...

ರೀಲ್ಸ್ ಮಾಡಲು ಹಾಡು ಹುಡುಕುತ್ತಿದ್ದೀರಾ? ಈ ಹಾಡುಗಳಿಗೆ ಇದೆ ಸಖತ್ ಡಿಮ್ಯಾಂಡ್! – Are You Looking for a song to make Reels? These songs are in great...

ರೀಲ್ಸ್ ಮಾಡಲು ಹಾಡು ಹುಡುಕುತ್ತಿದ್ದೀರಾ? ಈ ಹಾಡುಗಳಿಗೆ ಇದೆ ಸಖತ್ ಡಿಮ್ಯಾಂಡ್!...