ಪುಷ್ಪ 2 ಚಿತ್ರದ ಯಶಸ್ಸಿನ ಸಂಭ್ರಮದಲ್ಲಿರುವಾಗಲೇ ನಾಯಕ ನಟ ಅಲ್ಲು ಅರ್ಜುನ್ ಪೋಲಿಸರ ಅತಿಥಿಯಾಗಿದ್ದಾರೆ. ಡಿಸೆಂಬರ್ 4 ರಂದು ಹೈದರಾಬಾದ್ ಸಂಧ್ಯಾ ಥಿಯೇಟರ್ ನಲ್ಲಿ ನಡೆದ ಪುಷ್ಪ 2 ಚಿತ್ರದ ಪ್ರೀಮಿಯರ್ ಷೋ ನ ವೇಳೆ ನಡೆದಿದ್ದ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದ ಮಹಿಳೆಯ ಕುರಿತಾದ ಕೇಸ್ ನಲ್ಲಿ ಚಿಕ್ಕಡಪಲ್ಲಿ ಪೋಲಿಸರು ಇವರನ್ನು ಅರೆಸ್ಟ್ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಎಫ್.ಐ.ಆರ್. ದಾಖಲಾಗಿದ್ದು ನಟ ಅಲ್ಲು ಅರ್ಜುನ್ ಪ್ರಕರಣ ವಜಾಗೊಳಿಸುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ಮೃತ ಮಹಿಳೆಯ ಕುಟುಂಬಕ್ಕೆ ಪರಿಹಾರಾರ್ಥವಾಗಿ 25 ಲಕ್ಷ ರೂ ಗಳನ್ನು ನೀಡುವುದಾಗಿ, ಈ ಕಾಲ್ತುಳಿತ ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ತಂಡದ ಕಡೆಯಿಂದ ಭರಿಸುವುದಾಗಿ ಕೂಡಾ ತಿಳಿಸಿದ್ದರು.
ಚಿತ್ರದ ಯಶಸ್ಸಿನ ಈ ಶುಭಗಳಿಗೆಯಲ್ಲಿ ಹರ್ಷಾಚರಣೆಯ ಸಂದರ್ಭದಲ್ಲಿರುವಾಗಲೇ ನಾಯಕನಟನನ್ನು ಬಂಧಿಸಿದ್ದು ಚಿತ್ರತಂಡದವರಿಗೂ ಅಭಿಮಾನಿಗಳಿಗೂ ಬೇಸರವಾಗಿದೆ.