ತೆರೆಗೆ ಬರಲು ಸಿದ್ಧವಾಗಿದೆ ಅಜಯ್ ಸೂರ್ಯ ಫಿಲಂಸ್ ನ ಆರಿದ್ರಾ

Date:

ಅಜಯ್ ಸೂರ್ಯ ಫಿಲಂಸ್ ನ ಚೊಚ್ಚಲ ಚಿತ್ರ ಅಜಯ್ ಸೂರ್ಯ Ajay Surya ಅವರ ನಟನೆ ಹಾಗೂ ನಿರ್ದೇಶನದ “ಆರಿದ್ರಾ”, Aridra ಪೋಸ್ಟ್ ಪ್ರೊಡಕ್ಷನ್ ವರ್ಕ್ ಗಳೆಲ್ಲಾ ಪೂರ್ಣಗೊಳಿಸಿ ಸೆನ್ಸಾರ್ ಮಂಡಳಿಯ ಒಪ್ಪಿಗೆಗೆ ಕಳಿಸಲು ಸಿದ್ಧವಾಗಿದೆ. ಇದೇ ಉತ್ಸಾಹದಲ್ಲಿ ಚಿತ್ರತಂಡ ಚಿತ್ರದ ಹಾಡುಗಳನ್ನು ಈ ತಿಂಗಳಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ.

ಅಜಯ್ ಸೂರ್ಯ ಫಿಲಂಸ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರ ನಾಯಕ ಅಜಯ್ ಸೂರ್ಯಗೆ ಮೊದಲ ಚಿತ್ರವೂ ಹೌದು. ನಾಗರತ್ನಾ ರಮೇಶ್ ಬಂಡವಾಳ ಹಾಕಿದ್ದಾರೆ. ಇದು ಸಸ್ಪೆಸ್ಸ್ ಥ್ರಿಲ್ಲರ್ ಮೂವಿಯಾಗಿದ್ದು, ಹೊಸ ಚಿತ್ರತಂಡ ಹೊಸ ಪ್ರಯೋಗಗಳಿಗೆ ಈ ಚಿತ್ರದ ಮೂಲಕ ಒಡ್ಡಿಕೊಂಡಿದೆ.

ಚಿತ್ರದ ಯಶಸ್ಸಿಗೆ ಕಾರಣೀಭೂತರಿವರು

ಅಜಯ್ ಸೂರ್ಯರವರ ಜೊತೆ ನಾಯಕಿಯಾಗಿ ನವ್ಯಾಶ್ರೀ Navyashree ಜೋಡಿಯಾಗಿದ್ದಾರೆ. ಸಮರ್ಥ್ ಸಾಹಿತ್ಯ ಮತ್ತು ಸಂಗೀತ ನೀಡಿದ್ದಾರೆ‌. ಜೀ ಕನ್ನಡ ಸರಿಗಮಪ ಖ್ಯಾತಿಯ ಚೆನ್ನಪ್ಪ, Channappa Huddar ಚೇತನ್ ನಾಯ್ಕ್, ಸುಬ್ರಮಣ್ಯ ಆಚಾರ್ಯ ಕಂಠಸಿರಿಯಲ್ಲಿ ಹಾಡುಗಳು ಮೂಡಿಬಂದಿವೆ. ಮೋಹನ್ ಎಂ.ಎಸ್. ಕ್ಯಾಮೆರಾವನ್ನು ಸಮರ್ಥವಾಗಿ ನಿಭಾಯಿಸಿದ್ದರೆ, ಶ್ರೀ ಜವಳಿಯವರ ಸಂಕಲನವಿದೆ. ದಿವಾಕರ್ ಕೆ ಇವರು ಡಬ್ಬಿಂಗ್ ಮಾಡಿದ್ದು DI and VFX ಗುರುಪ್ರಭ ಸ್ಟೂಡಿಯೋ ಹಾಗೂ ಮಿಕ್ಸಿಂಗ್ ಹಾಗೂ ಮಾಸ್ಟರಿಂಗ್ ಸ್ವಯಂಭ ಸ್ಟೂಡಿಯೋದಲ್ಲಿದಲ್ಲಿ ನಡೆದಿದೆ.

ಚಿತ್ರದಲ್ಲಿ ಗೋಪಿ ರಾಮ್, ಯೋಗೀಶ್, ಮಂಜೇಶ್, ರಕ್ಷಿತಾ, ಬಾಲರಾಜ್, ಗಿಣಿರಾಮ ಖ್ಯಾತಿಯ ಬಾಲ ನಟಿ ಭೈರವಿ, ಕಾರ್ತಿಕ್ ವರ್ಣೇಕರ್, ಶ್ರೀದೇವಿ, ಮುಂತಾದ ಕಲಾವಿದರು ಪರದೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶನ ತಂಡದಲ್ಲಿ ಯೋಗೀಶ್, ವಿನಯ್ ಇದ್ದು ಸದ್ಯ ಚಿತ್ರತಂಡ ಚಿತ್ರದ ಹಾಡುಗಳನ್ನ ಇದೇ ಡಿಸೇಂಬರ್ ಅಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ.

Aridra movie dialogue Promo :

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ ಲಿಸ್ಟ್

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ...

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ ಕನ್ನಡ ಚಿತ್ರಗಳು – These new Kannada movies are available on OTT

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ...

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ – The Remarkable Journey of “Toxic”

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ ಸಾಮಾನ್ಯ...

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ – How to submit your short film to a film festival

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ...