ಪ್ರಶಸ್ತಿ ಪಡೆದು ಸದ್ದು ಮಾಡಿದ ತುಳು ಚಿತ್ರ “ಪಿದಾಯಿ” ಮೇ 9 ರಂದು ತೆರೆಗೆ

Date:

  • ಪ್ರಶಸ್ತಿ ಪಡೆದು ಸದ್ದು ಮಾಡಿದ ತುಳು ಚಿತ್ರ “ಪಿದಾಯಿ” ಮೇ 9 ರಂದು ತೆರೆಗೆ
  • ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ನಿರ್ದೇಶನದಲ್ಲಿ ಮೂಡಿಬಂದಿದೆ “ಪಿದಾಯಿ”
  • ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಬಾಚಿಕೊಂಡ ಚೊಚ್ಚಲ ತುಳು ಚಿತ್ರ

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರಾದ ಸಂತೋಷ್ ಮಾಡ Santhosh Mada ನಿರ್ದೇಶನದ, ನಮ್ಮ ಕನಸು Namma Kanasu ಬ್ಯಾನರ್ ನಲ್ಲಿ ಕೆ.ಸುರೇಶ್ K. Suresh ಅವರು ನಿರ್ಮಾಣ ಮಾಡಿದ ತುಳು ಸಿನಿಮಾ “ಪಿದಾಯಿ” Pidayi ಇದೇ ಮೇ 9 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು ಹಲವಾರು ಕಾರಣಗಳಿಂದ ಕುತೂಹಲ ಮೂಡಿಸಿದೆ. ಮುಖ್ಯವಾಗಿ ಈ ತುಳು ಸಿನಿಮಾ ಈಗಾಗಲೇ ಕೊಲ್ಕತ್ತ, ಸಿಮ್ಲಾ, ಜಾರ್ಖಂಡ್‌ ಹಾಗೂ ಕ್ಯಾಲಿಫೋರ್ನಿಯಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಧಿಕೃತವಾಗಿ ಆಯ್ಕೆಯಾಗಿರುವುದು ಮಾತ್ರವಲ್ಲ, 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚೊಚ್ಚಲ ಬಾರಿಗೆ ತುಳು ಚಿತ್ರವೊಂದು ಭಾರತೀಯ ಹಾಗೂ ಕನ್ನಡ ಚಲನಚಿತ್ರದ ಎರಡೂ ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡಿರುವುದು ವಿಶೇಷ.

ಚಿತ್ರ ತಂಡದಲ್ಲಿ ಶ್ರಮಿಸಿದ್ದಾರೆ ಪ್ರತಿಭಾವಂತರು

ಈ ಚಿತ್ರದಲ್ಲಿ ಮಹಾಮಾಯಿ ಪಾತ್ರಿಯಾಗಿ ಖ್ಯಾತ ನಟ ಶರತ್ ಲೋಹಿತಾಶ್ವ ನಟಿಸಿದ್ದು, ಉಳಿದಂತೆ ದೀಫರ್ ರೈ ಪಾಣಾಜೆ, ಪುಷ್ಪರಾಜ್ ಬೋಳಾರ್, ರೂಪಶ್ರೀ ವರ್ಕಾಡಿ, ಇಳಾ ವಿಟ್ಲ, ದೇವಿ ನಾಯರ್, ಪ್ರೀತೇಶ್, ಅನಿಲ್ ರಾಜ್ ಉಪ್ಪಳ, ರವಿ ವರ್ಕಾಡಿ ಮಿಂಚಿದ್ದಾರೆ. ಇನ್ನು ಬಾಲ ಪ್ರತಿಭೆಗಳಾದ ಮೋನಿಶ್, ತ್ರಿಷ, ಧ್ರುವ, ನಿಹಾ, ಖುಷಿ, ಅನಿತಾ ಚಂದ್ರಶೇಖರ್ ಮೊದಲಾದವರು ಬಣ್ಣ ಹಚ್ಚಿದ್ದಾರೆ. ಉಣ್ಣೆ ಮಾಡವೂರ್ ಅವರ ಕ್ಯಾಮರಾ ಕೈಚಳಕವಿದೆ, ಸುರೇಶ್ ಅರಸ್ ಸಂಕಲನ, ರಮೇಶ್ ಶೆಟ್ಟಿಗಾರ್, ಡಿಬಿಸಿ ಶೇಖರ್ ಸಂಭಾಷಣೆ ಇದೆ. ಅಜಯ್ ನಂಬೂದಿರಿ ಸಂಗೀತವಿದ್ದು, ಡಾ. ವಿದ್ಯಾಭೂಷಣ್ ಚೊಚ್ಚಲ ಬಾರಿಗೆ ಸಿನಿಮಾಗಾಗಿ ಹಾಡಿದ್ದಾರೆ. ದೀಪಾಂಕುರನ್ ಹಿನ್ನೆಲೆ ಸಂಗೀತವಿದ್ದು ಹಿನ್ನೆಲೆ ಗಾಯಕರಾದ ಮೇಧ ವಿದ್ಯಾಭೂಷಣ್, ವಿಜೇಶ್ ಗೋಪಾಲ್ ಮೊದಲಾದವರು ಕಂಠದಾನ ಮಾಡಿದ್ದಾರೆ.
ಸಿನಿಮಾದಲ್ಲಿ ತುಳುನಾಡಿನ ಸಾಂಪ್ರದಾಯಿಕ ಸ್ವಾದವಿದ್ದು ಮೇ. 9 ರಂದು ಆ ಸ್ವಾದ ಸಿನಿಪ್ರಿಯರಿಗೆ ಸಿಗಲಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಲವ್ ಮಾಕ್ಟೇಲ್ ಲವ್ಲಿ ಜೋಡಿ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ಫುಲ್ ಫನ್ ಸ್ಟೋರಿ ಇಲ್ಲದೆ

ಲವ್ ಮಾಕ್ಟೇಲ್ ಲವ್ಲಿ ಜೋಡಿ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ಫುಲ್...

ಯುಗಾದಿ ಬಂತು, ಎಲ್ಲೆಲ್ಲೂ ಸಂಭ್ರಮ ತಂದಿತು: ಯುಗಾದಿ ಸಂಭ್ರಮಕ್ಕೆ ಈ ಹಾಡುಗಳು ನಿಮಗೆ ಜೊತೆಯಾಗುತ್ತವೆ

ಯುಗಾದಿ ಬಂತು, ಎಲ್ಲೆಲ್ಲೂ ಸಂಭ್ರಮ ತಂದಿತು: ಯುಗಾದಿ ಸಂಭ್ರಮಕ್ಕೆ ಈ ಹಾಡುಗಳು...

ದೂರ ಪಯಣಕ್ಕೆ ಕರೆದೊಯ್ಯುವ ರೋಮಾಂಚಕ ಸಿನಿಮಾಗಳಿವು

ದೂರ ಪಯಣಕ್ಕೆ ಕರೆದೊಯ್ಯುವ ರೋಮಾಂಚಕ ಸಿನಿಮಾಗಳಿವು ಟ್ರಾವೆಲ್ ಥ್ರೀಂ ನಲ್ಲಿ ಪ್ರೇಕ್ಷಕರನ್ನು ಮೋಡಿ...

ಓಟಿಟಿ ವೇದಿಕೆಯಲ್ಲಿ ನೀವು ನೋಡಲೇಬೇಕಾದ ಕನ್ನಡದ ಎರಡು ಅತ್ಯುತ್ತಮ ಚಿತ್ರಗಳು

ಓಟಿಟಿ ವೇದಿಕೆಯಲ್ಲಿ ನೀವು ನೋಡಲೇಬೇಕಾದ ಕನ್ನಡದ ಎರಡು ಅತ್ಯುತ್ತಮ ಚಿತ್ರಗಳು ವಿಭಿನ್ನ ಕತೆ-ವಿಭಿನ್ನ...