ಲವ್ ಮಾಕ್ಟೇಲ್ ಲವ್ಲಿ ಜೋಡಿ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ಫುಲ್ ಫನ್ ಸ್ಟೋರಿ ಇಲ್ಲದೆ

Date:

  • ಲವ್ ಮಾಕ್ಟೇಲ್ ಲವ್ಲಿ ಜೋಡಿ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ಫುಲ್ ಫನ್ ಸ್ಟೋರಿ ಇಲ್ಲದೆ
  • ಮಾರ್ಕೆಟ್ ನಿಂದ ಫ್ರೆಶ್ ಹಣ್ಣು, ತರಕಾರಿ ತಗೋಳೋಕೆ ಎನಿಟೈಮ್ ರೆಡಿ ಅಂತೆ ಮಿಲನಾ
  • ಶಾಪಿಂಗ್ ಮಾಡೋದೇ ಕಡಿಮೆ, ಮಾಡಕ್ಕೋದ್ರೆ ಅರ್ಧ ಅಂಗಡಿನೇ ಎತ್ಕೊಂಬರ್ತಾರೆ ಡಾರ್ಲಿಂಗ್ ಕೃಷ್ಣ

ಲವ್ ಮಾಕ್ಟೇಲ್ ಜೋಡಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವ್ರ ಮನದಾಳದ ಮಾತುಗಳು, ಸಣ್ಣ ಪುಟ್ಟ ಖುಷಿಗಳು, ಮಗಳು ‘ಪರಿ’ಯ ಪ್ರೀತಿಯ ಪುಟ್ಟ ಪುಟ್ಟ ಹೆಜ್ಜೆಗಳು ಮುಂತಾದ ಇಂಟೆರೆಸ್ಟಿಂಗ್ ಸ್ಟೋರಿ ಇಲ್ಲಿದೆ.

ಹಳೇ ಹುಡ್ಗಿನ್ನ ಮರೆಯೋದಕ್ಕೆ ಡಾರ್ಲಿಂಗ್ ಕೃಷ್ಣ ಸಲ್ಯೂಷನ್ಸ್

ಮೊದಲು ಹೊಸ ಹುಡುಗಿಯನ್ನ ಹುಡ್ಕೋಬೇಕಂತೆ. ಹಳೇ ಹುಡುಗ/ ಹುಡುಗಿ ಕೈ ಕೊಟ್ಟಾಗ ಮನಸ್ಸಿನಲ್ಲಿ ಬೇಜಾರು, ಖಾಲಿತನ ಉಂಟಾಗಿರತ್ತೆ. ಆ ಖಾಲಿತನವನ್ನ ತುಂಬಲು ಇನ್ನೊಬ್ಬರ ಅಗತ್ಯ ಖಂಡಿತಾ ಇರತ್ತೆ. ಹಾಗಾಗಿ ಇನ್ನೊಬ್ಬ ಸ್ನೇಹಿತ/ ಸ್ನೇಹಿತೆಯನ್ನು ಹುಡ್ಕೋಳೇದೇ ಬೆಸ್ಟ್ ಐಡಿಯಾ.

“ಪರಿ”ಗೋಸ್ಕರ ಹೀಗೆಲ್ಲಾ ಮಾಡ್ತಾರೆ ಮಿಲನಾ-ಕೃಷ್ಣ

“ಪರಿ”ಗೆ ಜಾಸ್ತಿ ಅಟ್ಯಾಚ್ ಆಗಿರೋದು ಮಿಲನಾ ಅಂತೆ. ಹೆಚ್ಚು ಬಟ್ಟೆಗಳನ್ನ ಮಿಲನಾ ಕೊಡ್ಸಿದ್ರೆ, ಆಟಿಕೆಗಳನ್ನ ಕೃಷ್ಣ ಕೊಡಿಸ್ತಾರಂತೆ. ಎಂಟು ಗಂಟೆ ನಿದ್ದೆಯನ್ನು ಇಷ್ಟಪಟ್ಟು ಮಾಡೋ ಮಿಲನಾ ಅವ್ರು ಪರಿಗೋಸ್ಕರ ಒಂದೂವರೆ ವರ್ಷದಿಂದ 2-3 ಗಂಟೆಗಳ ನಿದ್ದೆಯನ್ನು ತ್ಯಾಗ ಮಾಡ್ತಿದಾರಂತೆ. ಪರಿಯನ್ನ ನಗಿಸೋಕ್ಕೋಸ್ಕರ ಹಲವು ವೇಷಗಳು, ಮತ್ತೆ ಕೆಲವೊಂದು ಸೌಂಡ್ ಗಳನ್ನ ಮಾಡ್ತಾರಂತೆ. ಕಣ್ಣಾ ಮುಚ್ಚಾಲೆ ಮಾಡಿ ನಗಿಸ್ತಾರಂತೆ ದಂಪತಿಗಳು.

ಚಿತ್ರಗಳಿಗೆ, ಕಥೆ ಬರೆದು ನಿರ್ದೇಶನ ಮಾಡೋ ಪ್ರೊಸೆಸ್ ಹೀಗಿರತ್ತೆ

ಮೊದಲನೇದಾಗಿ ಫಿಲ್ಮ್ ಆಗ್ಬೋದಾದಂತಹಾ ಒಂದು ಐಡಿಯಾ ಕ್ರಾಕ್ ಆಗ್ಬೇಕು. ಅನಂತರ‌ ಆ ಸಿನಿವಿಷಯದ ಸಾಧಕ- ಬಾಧಕಗಳ ಯೋಚನೆ. ಸಿನಿಮಾ ಕಥೆ ಎಲ್ಲಿಂದ ಪ್ರಾರಂಭ ಆಗಿ ಯಾವ ದಾರಿಯಲ್ಲಿ ಸಾಗಿ, ಹೇಗೆ ಎಂಡ್ ಆಗ್ಬೇಕು ಅನ್ನೋ ಪ್ಲಾನ್ ಆಗತ್ತೆ. ಅನಂತರ ಸ್ಕ್ರೀನ್ ಪ್ಲೇ ಮತ್ತು ಸಂಭಾಷಣೆಗಳು ರೆಡಿ ಆಗತ್ತೆ.

ದಂಪತಿಗಳ ಪರಸ್ಪರ ಕಲಿಕೆ ಹೀಗಿದೆ

ಮಿಲನಾ- ಕೃಷ್ಣ ದಂಪತಿಗಳು ಪರಸ್ಪರ ಒಬ್ರಿಂದ ಇನ್ನೊಬ್ರು ಅಳವಡಿಸಿಕೊಂಡಿರೋ ಗುಣಗಳ ಬಗ್ಗೆ ಹೀಗೆ ಹೇಳ್ತಾರೆ. ಮಿಲನಾ ಅವ್ರನ್ನ ನೋಡಿ ಜಾಸ್ತಿ ಜನರ ಜೊತೆಗೆ ಬೆರೆಯೋದು, ಚೆನ್ನಾಗಿ‌ ನಗೋದು ಮತ್ತು ಅವಾಗವಾಗ ಊರಿಗೋಗೋದು ಈ ಗುಣಗಳನ್ನ ಕೃಷ್ಣ ಅಳವಡಿಸಿಕೊಂಡ್ರೆ, ಮಿಲನಾ ಅವ್ರು ಜೀವನದಲ್ಲಿ ಒಮ್ಮೆ ನಿರ್ಧಾರ ತಗೊಂಡ್ಮೇಲೆ ಕ್ಲಾರಿಟಿ ಹೊಂದೋದು, ಆದಷ್ಟು ನೆಗೆಟಿವಿಟಿಯನ್ನು ಹತ್ರ ಬರದ ಹಾಗೆ ನೋಡ್ಕೊಳ್ಳೋದು, ಯಾರ ಮೇಲೂ‌ಜಾಸ್ತಿ ಡಿಪೆಂಡ್ ಆಗ್ಬಾರ್ದು ಅನ್ನೋದನ್ನ ಕಲ್ತಿದ್ದಾರಂತೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ ಕನ್ನಡ ಚಿತ್ರಗಳು – These new Kannada movies are available on OTT

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ...

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ – The Remarkable Journey of “Toxic”

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ ಸಾಮಾನ್ಯ...

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ – How to submit your short film to a film festival

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ...

ರೀಲ್ಸ್ ಮಾಡಲು ಹಾಡು ಹುಡುಕುತ್ತಿದ್ದೀರಾ? ಈ ಹಾಡುಗಳಿಗೆ ಇದೆ ಸಖತ್ ಡಿಮ್ಯಾಂಡ್! – Are You Looking for a song to make Reels? These songs are in great...

ರೀಲ್ಸ್ ಮಾಡಲು ಹಾಡು ಹುಡುಕುತ್ತಿದ್ದೀರಾ? ಈ ಹಾಡುಗಳಿಗೆ ಇದೆ ಸಖತ್ ಡಿಮ್ಯಾಂಡ್!...