ಸಿನಿಪ್ರಿಯರಿಗೆ ರಸದೌತಣ- ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

Date:

  • ಸಿನಿಪ್ರಿಯರಿಗೆ ರಸದೌತಣ- ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
  • ಸಿನಿ ಪ್ರಿಯರಿಗೆ ಸಡಗರದ ಸುಗ್ಗಿ
  • ಈ ಸಲದ ಚಿತ್ರೋತ್ಸವದ ಸ್ಪೆಷಲ್ ಸುದ್ದಿ ಇಲ್ಲಿದೆ

ಸಿನಿಮಾ ಪ್ರೇಮಿಗಳು ಕಾತರದಿಂದ ನಿರೀಕ್ಷಿಸುತ್ತಿರುವ 17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ Bengaluru Film Festival ಜನವರಿ 29 ರಿಂದ ಫೆಬ್ರವರಿ 6 ರವರೆಗೆ ನಡೆಯುತ್ತಿದೆ. ಜನವರಿ 26 ರಂದು ಸಂಜೆ ವಿಧಾನಸೌಧದ ಪೂರ್ವದ್ವಾರ ಮೆಟ್ಟಿಲುಗಳ ಬಳಿ ಭವ್ಯ ಉದ್ಘಾಟನಾ ಸಮಾರಂಭದೊಂದಿಗೆ ಆರಂಭವಾಗಿದೆ ಚಿತ್ರೋತ್ಸವ.

ಪ್ರದರ್ಶನ ಎಲ್ಲಿ?

ರಾಜಾಜಿನಗರದ ಲುಲು ಮಾಲ್ನಲ್ಲಿರುವ ಸಿನೆಪೊಲಿಸ್ನ 11 ಸ್ಕ್ರೀನ್ಗಳಲ್ಲಿ ಜನವರಿ 30 ರಿಂದ ಫೆಬ್ರವರಿ 6 ರವರೆಗೆ ಚಿತ್ರ ಪ್ರದರ್ಶನಗಳು ನಡೆಯುತ್ತಿದೆ. ಇದರ ಜೊತೆಗೆ ಕನ್ನಡ ಚಲನಚಿತ್ರ ಕಲಾವಿದರ ಸಂಘ ಮತ್ತು ಸುಚಿತ್ರಾ ಫಿಲಂ ಸೊಸೈಟಿಯಲ್ಲೂ ವಿಶೇಷ ಪ್ರದರ್ಶನಗಳು ಇರಲಿವೆ.

65 ದೇಶಗಳಿಂದ ಭರ್ಜರಿ 225 ಚಿತ್ರಗಳು

ಈ ವರ್ಷದ ಚಿತ್ರೋತ್ಸವದಲ್ಲಿ 65 ದೇಶಗಳಿಂದ ಸುಮಾರು 225 ಅತ್ಯುತ್ತಮ ಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದು, ಅಮೆರಿಕಾ, ಬ್ರಿಟನ್, ಫ್ರಾನ್ಸ್, ಜರ್ಮನಿ, ಜಪಾನ್, ಕೊರಿಯಾ, ಇರಾನ್ ಸೇರಿದಂತೆ ಹಲವು ದೇಶಗಳ ಪ್ರಶಸ್ತಿ ವಿಜೇತ ಚಿತ್ರಗಳನ್ನು “ಬೆಂಗಳೂರುದಲ್ಲಿ ಜಗತ್ತು” ಎಂಬ ಶೀರ್ಷಿಕೆಯಡಿ ಸಮಕಾಲೀನ ವಿಶ್ವಸಿನಿಮಾ ವಿಭಾಗದಲ್ಲಿ ಪ್ರದರ್ಶಿಸಲಾಗುತ್ತದೆ.

ಈ ಸಲದ ಥೀಮ್ ಏನು?

ಪ್ರತಿ ವರ್ಷವೂ ಅರ್ಥಪೂರ್ಣ ಧ್ಯೇಯವಾಕ್ಯ ಹೊಂದಿರುವ ಬೆಂಗಳೂರು ಸಿನಿಮೋತ್ಸವ, ಈ ಬಾರಿ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ Dr G s Shivarudrappa ಅವರ ಪ್ರಸಿದ್ಧ ಗೀತೆಯ ಸಾಲು “ಸ್ತ್ರೀ ಎಂದರೆ ಅಷ್ಟೇ ಸಾಕೆ” ಎಂಬುದನ್ನು ಧ್ಯೇಯವಾಕ್ಯವಾಗಿ ಆಯ್ಕೆ ಮಾಡಿಕೊಂಡಿದೆ. “ಸ್ತ್ರೀ ಸಂವೇದನೆ, ಸಮಾನತೆಯ ದನಿ” ಎಂಬ ಟ್ಯಾಗ್ಲೈನ್ನೊಂದಿಗೆ ಚಿತ್ರೋತ್ಸವ ಪ್ರಾರಂಭವಾಗಿದೆ.

ಗಮನಸೆಳೆಯಲಿದೆ ಸಂವಾದಗಳು:

ಚಿತ್ರೋತ್ಸವದ ಅವಧಿಯಲ್ಲಿ ಪ್ರತಿದಿನವೂ ಚಿತ್ರ ನಿರ್ಮಾಣ, ನಿರ್ದೇಶನ, ಕಥನ ಹಾಗೂ ತಂತ್ರಜ್ಞಾನ ಕುರಿತಂತೆ ತಜ್ಞರೊಂದಿಗೆ ಉಪನ್ಯಾಸ, ಸಂವಾದ ಮತ್ತು ಮಾಸ್ಟರ್ಕ್ಲಾಸ್ಗಳು ನಡೆಯುತ್ತಿದ್ದು, ಪ್ರಕಾಶ್ ರಾಜ್, ಅನುರಾಗ್ ಕಶ್ಯಪ್, ಶ್ರೀಕರ್ ಪ್ರಸಾದ್, ಮಹೇಶ್ ನಾರಾಯಣನ್, ಬಿಶ್ವದೀಪ್ ಚಟರ್ಜಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಗಿರೀಶ್ ಕಾಸರವಳ್ಳಿ, ಜಯಮಾಲ ಹಾಗೂ ಸಾಧು ಕೋಕಿಲ ಅವರೊಂದಿಗೆ ಕನ್ನಡ ಸಿನಿಮಾದ ನಾಲ್ಕು ದಶಕಗಳ ಪಯಣದ ಕುರಿತ ವಿಶೇಷ ಸಂವಾದವೂ ಇರಲಿದೆ.

ಇನ್ನೂ ಏನೇನಿದೆ?

ಭಾರತ ರತ್ನ ಭುಪೆನ್ ಹಜಾರಿಕಾ ಹಾಗೂ ಈಜಿಪ್ಟ್ನ ಖ್ಯಾತ ನಿರ್ದೇಶಕ ಯೂಸುಫ್ ಷಹೀನ್ ಅವರ ಶತಮಾನೋತ್ಸವ ಸ್ಮರಣೆ ನಡೆಯಲಿದೆ. ಇತ್ತೀಚೆಗೆ ನಿಧನರಾದ ಡಾ. ಸರೋಜಾ ದೇವಿ ಮತ್ತು ಎಂ.ಎಸ್. ಉಮೇಶ್ ಅವರ ಸ್ಮರಣಾರ್ಥ ವಿಶೇಷ ಚಿತ್ರ ಪ್ರದರ್ಶನಗಳು ಇರಲಿವೆ. ಶಂಕರ್ ನಾಗ್ ಅವರ ಪ್ರಸಿದ್ಧ ಚಿತ್ರ ‘ಆಕ್ಸಿಡೆಂಟ್’ ಡಿಜಿಟಲೀಕೃತ ರೂಪದಲ್ಲಿ ಪ್ರದರ್ಶಿಸಲಾಗುತ್ತದೆ.

ಸ್ಪರ್ಧಾ ವಿಭಾಗಗಳು

• ಏಷಿಯನ್ ಸಿನಿಮಾ ಸ್ಪರ್ಧೆ
• ಭಾರತೀಯ ಸಿನಿಮಾ (ಚಿತ್ರ ಭಾರತೀ)
• ಕನ್ನಡ ಸಿನಿಮಾ ಸ್ಪರ್ಧೆ
ಪ್ರತಿ ವಿಭಾಗದಲ್ಲೂ ತಲಾ ಮೂರು ಅತ್ಯುತ್ತಮ ಚಿತ್ರಗಳಿಗೆ ಪ್ರಶಸ್ತಿಗಳು ನೀಡಲಾಗುತ್ತವೆ.
ಬಯಲು ಚಿತ್ರ ಪ್ರದರ್ಶನ
ಲುಲು ಮಾಲ್ ಹೊರ ಆವರಣದಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ 35mm ಪ್ರಿಂಟ್ನಲ್ಲಿರುವ ಕ್ಲಾಸಿಕ್ ಕನ್ನಡ ಚಿತ್ರಗಳ ಉಚಿತ ಪ್ರದರ್ಶನ ನಡೆಯಲಿದೆ. ಜೊತೆಗೆ ಕನ್ನಡ ಸಿನಿಮಾದ 91 ವರ್ಷಗಳ ಪಯಣವನ್ನು ತೋರಿಸುವ ವಿಶೇಷ ಛಾಯಾಚಿತ್ರ ಪ್ರದರ್ಶನವೂ ಇರಲಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಕನ್ನಡದ ಟಾಪ್ ಲವ್ ಸ್ಟೋರಿ ಫಿಲ್ಮ್ಸ್ ಡಿಟೈಲ್ಸ್ ಇಲ್ಲಿದೆ Top Love Story Films List In Kannada

ಬೋರ್ ಆದಾಗ ಮನಸ್ಸನ್ನು ಚಿಲ್ ಮಾಡಲು ನೋಡ್ಬೋದು ಈ ಮೂವೀಸ್ ಎಷ್ಟು...

Dr Rajkumar All Movies List – ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಮೂವೀ ಲಿಸ್ಟ್ ಇಲ್ಲಿದೆ

ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಎ ಟು ಝಡ್ ಮೂವೀ...

ಮಿಲನಾ ನಾಗರಾಜ್ ಬದುಕಿನ ಇಂಟರೆಸ್ಟಿಂಗ್ ಕಹಾನಿ

ಮಿಲನಾ ನಾಗರಾಜ್ ಬದುಕಿನ ಇಂಟರೆಸ್ಟಿಂಗ್ ಕಹಾನಿ ಸಿನಿಮಾ ಕಡಲಲ್ಲಿ ಈಜಿದ ಹಾಸನದ ಬೆಡಗಿ,...