- ಹೊಸ ಸ್ಥಳಕ್ಕೆ ಶಿಫ್ಟ್ ಆಗಲಿದೆ ಈ ಬಾರಿಯ “ಬಿಗ್ ಬಾಸ್” ಮನೆ, ಎಲ್ಲಿ ಆ ಲೊಕೇಷನ್?
- ಕಿರುತೆರೆಯ ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಮನೆಯ ಲೊಕೇಷನ್ ಬದಲಾಗಿದೆ
- ಒಂದಷ್ಟು ಮಾಹಿತಿಯ ಪ್ರಕಾರ , ಬಿಗ್ ಬಾಸ್ ಸೀಸನ್ 12 ಕನ್ನಡ, ಸೆಪ್ಟೆಂಬರ್ ಕೊನೆಯಲ್ಲಿ ಪ್ರಾರಂಭವಾಗಲಿದೆ
ಕಿರುತೆರೆಯ ಜನಪ್ರಿಯ ರಿಯಾಲಿಟಿ ಷೋ Reality Show ಬಿಗ್ ಬಾಸ್ Big boss ಮನೆಯ ಲೊಕೇಷನ್ ಬದಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಕನ್ನಡದಲ್ಲಿ ಮೊದಲು ಬಿಗ್ ಬಾಸ್ ಆರಂಭವಾದಾಗ ಪುಣೆಯ ಲೋನಾವಾಲಾದಲ್ಲಿ ಚಿತ್ರೀಕರಣ ಶುರು ಮಾಡಿತ್ತು. ಮೊದಲ ಎರಡೂ ಸೀಸನ್ ಗಳೂ ಇಲ್ಲೇ ಶೂಟ್ ಆಗಿತ್ತು. ಬಳಿಕ ಬಿಗ್ ಬಾಸ್ ಮನೆಯನ್ನು ಬೆಂಗಳೂರಿನ ಹೊರ ವಲಯದಲ್ಲಿರುವ ಇನ್ನೋವೇಟಿವ್ ಫಿಲ್ಮ್ ಸಿಟಿಗೆ Innovative Film City ಸ್ಥಳಾಂತರಗೊಳಿಸಲಾಯಿತು. ಕೊನೆಗೆ ತಾವರೆಕೆರೆ ಹಾಗೂ ದೊಡ್ಡ ಆಲದ ಮರದ ಮಧ್ಯೆ ಇರುವ ಪ್ರದೇಶದಲ್ಲಿ ಬಿಗ್ ಬಾಸ್ ಗೆಂದೇ ಒಂದು ವಿಶೇಷ ಸೆಟ್ ನಿರ್ಮಿಸಲಾಗಿತ್ತು. ಬಿಗ್ ಬಾಸ್ ನ ಕೋಣೆಯನ್ನು ವಿಭಿನ್ನ ವಿನ್ಯಾಸಗಳಿಂದ ಬದಲಾಯಿಸಲಾಗಿತ್ತು. ಕೆಲವು ಸೀಸನ್ ಗಳನ್ನು ಇಲ್ಲೇ ಶೂಟ್ ಮಾಡಲಾಗಿತ್ತು.
ಮರಳಿ ಇನ್ನೋವೇಟಿವ್ ಫಿಲ್ಮ್ ಸಿಟಿಗೆ
ಇದೀಗ ಮತ್ತೆ ಬಿಗ್ ಬಾಸ್ ಮನೆಯ ಸ್ಥಳವನ್ನು ಮರಳಿ ಇನ್ನೋವೇಟಿವ್ ಫಿಲ್ಮ್ ಸಿಟಿಗೆ ಶಿಫ್ಟ್ ಮಾಡಲಾಗುತ್ತಿದೆ ಎನ್ನುವ ಮಾಹಿತಿ ದೊರೆತಿದೆ. ಇಲ್ಲಿ ಬಹಳ ಅದ್ದೂರಿಯಾಗಿ ಸೆಟ್ ನಿರ್ಮಿಸಲಾಗಿದೆಯಂತೆ. ಮನೆಯ ಡಿಸೈನ್ ಅನ್ನು ಸಂಪೂರ್ಣ ಬದಲಾಯಿಸಲಾಗಿದೆಯಂತೆ. ಸಾಮಾನ್ಯವಾಗಿ ಬಿಗ್ ಬಾಸ್ ನ ಒಂದು ಸೀಸನ್ ಮುಗಿದರೂ ಮತ್ತೊಂದು ಸೀಸನ್ ಶುರುವಾಗುವವರೆಗೂ ಆ ಸೆಟ್ ನ್ನು ಹಾಗೇ ಇರಿಸಲಾಗುತ್ತದೆ. ಆಗ ಬಿಗ್ ಬಾಸ್ ನ ಲೊಕೇಷನ್ ನೋಡಲೆಂದೇ ಸಾವಿರಾರು ಅಭಿಮಾನಿಗಳು ಸ್ಥಳಕ್ಕೆ ಬರುವುದು ಮಾಮೂಲು. ಒಂದಷ್ಟು ಮಾಹಿತಿಯ ಪ್ರಕಾರ , ಬಿಗ್ ಬಾಸ್ ಸೀಸನ್ 12 ಕನ್ನಡ, ಸೆಪ್ಟೆಂಬರ್ ಕೊನೆಯಲ್ಲಿ ಪ್ರಾರಂಭವಾಗಲಿದೆ. ಕಿಚ್ಚ ಸುದೀಪ್ Kiccha Sudeep ಬಿಗ್ ಬಾಸ್ ನಡೆಸಿಕೊಡಲಿದ್ದಾರೆ. ಆದರೆ ಈ ಬಾರಿ ಬಿಗ್ ಬಾಸ್ ಕೋಣೆಯಲ್ಲಿ ಯಾರೆಲ್ಲಾ ಇರಲಿದ್ದಾರೆ? ಕೋಣೆ ಹೇಗಿರಲಿದೆ ಎನ್ನುವ ಕುತೂಹಲಕ್ಕೆ ಸದ್ಯದಲ್ಲೇ ಉತ್ತರ ಸಿಗಬಹುದು.