- ಮತ್ತೆ ಓಪನ್ ಆಯ್ತು “ಬಿಗ್ ಬಾಸ್” ಮನೆ; ಅಭಿಮಾನಿ ಪ್ರೇಕ್ಷಕರು ನಿರಾಳ
- ಈ ವಾರ ಬಿಗ್ ಬಾಸ್ ನಲ್ಲಿ ಕಾದಿದೆ ಒಂದು ದೊಡ್ಡ ಟ್ವಿಸ್ಟ್
- ಕೆಲಸ ಮಾಡಿತೇ ಕಿಚ್ಚ ಸುದೀಪ್ ಫೋನ್ ಕಾಲ್?
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ KSPCB ನೀಡಿದ್ದ ನೋಟಿಸ್ ನಿಂದಾಗಿ “ಬಿಗ್ ಬಾಸ್” Bigboss ಷೋ ನಡೆಯುತ್ತಿದ್ದ ಜಾಲಿವುಡ್ ನಲ್ಲಿದ್ದ ಮನೆಯಿಂದ ಸ್ಪರ್ಧಾರ್ಥಿಗಳನ್ನು ಹೊರಗೆ ಕಳಿಸಿ ಬೀಗ ಹಾಕಲಾಗಿತ್ತು. ಆದರೆ ಇದೀಗ ಬಿಗ್ಬಾಸ್ ಆಯೋಜಕರು, ಜಾಲಿವುಡ್ ರೆಸಾರ್ಟ್ನ ಅಧಿಕಾರಿಗಳು, ಕಿಚ್ಚ ಸುದೀಪ್ Kiccha Sudeep ಮುಂತಾದ ಗಣ್ಯರ ಒಟ್ಟು ಪ್ರಯತ್ನದಿಂದಾಗಿ ಬಿಗ್ಬಾಸ್ ಶೋ ಪುನರಾರಂಭಿಸಲು ಅನುಮತಿ ದೊರೆತಿದ್ದು, ಸ್ಪರ್ಧಾರ್ಥಿಗಳು ಮನೆಗೆ ಮರಳಿದ್ದಾರೆ.
10 ದಿನಗಳ ಕಾಲಾವಕಾಶ
ಸ್ಟುಡಿಯೋದಲ್ಲಿ ಮಾಲಿನ್ಯಕ್ಕೆ ಸಂಬಂಧಿಸಿದ ನಿಯಮ ಉಲ್ಲಂಘನೆಯಾಗಿರುವುದನ್ನು ಸರಿಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳು 10 ದಿನಗಳ ಕಾಲಾವಕಾಶ ನೀಡಿದ್ದಾರೆ. ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳು, ಜಾಲಿವುಡ್ ಸ್ಟುಡಿಯೋಕ್ಕೆ ಬೀಗ ಹಾಕಿರುವುದಕ್ಕೂ ಬಿಗ್ಬಾಸ್ ಶೋಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ನೇತೃತ್ವದಲ್ಲಿ ಜಾಲಿವುಡ್ ಸ್ಟುಡಿಯೋದ ಸಿ ಗೇಟ್ ಓಪನ್ ಮಾಡಲಾಗಿದೆ.
ಬಿಗ್ ಬಾಸ್ ನಲ್ಲಿ ಕಾದಿದೆ ದೊಡ್ಡ ಟ್ವಿಸ್ಟ್
ಕಳೆದ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಅವರೇ ನೀಡಿದ್ದ ಹಿಂಟ್ ಪ್ರಕಾರ ಸದ್ಯದಲ್ಲೇ ಬಿಗ್ ಬಾಸ್ ನಲ್ಲಿ ಮಾಸ್ ಎಲಿಮಿನೇಷನ್ ನಡೆಯುವ ಸಾಧ್ಯತೆ ಇದೆಯಂತೆ. ಇದೀಗ ಹರಿದಾಡುತ್ತಿರುವ ವಿಷಯದಂತೆ ಮನೆ ಅರ್ಧದಷ್ಟು ಖಾಲಿ ಆಗಲಿದೆಯಂತೆ. ಹಾಗೇ ಹೊರ ಹೋದಿ ಸ್ಪರ್ಧಿಗಳ ಸ್ಥಾನ ತುಂಬಲು ಅಷ್ಟೇ ಸ್ಪರ್ಧಿಗಳು ಪುನಃ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರಂತೆ. ಒಟ್ಟಾರೆಯಾಗೇ ಈ ಮೊದಲೇ ಹೇಳಿದಂತೆ ಪ್ರತಿ ಸೀಸನ್ ನಂತೆ ಈ ಸೀಸನ್ ಇರುವುದಿಲ್ಲ ಅನ್ನೋದನ್ನು ಸಾಬೀತು ಪಡಿಸ್ತಿದೆ ಬಿಗ್ ಬಾಸ್.


