- ಕೊನೆಗೂ ಫಿಕ್ಸ್ ಆಯ್ತು ಕನ್ನಡದ ಬಿಗ್ ಬಾಸ್ ಸೀಸನ್ 12 ರ ಡೇಟ್
- ಕುತೂಹಲ ಕೆರಳಿಸಿದೆ ಸ್ಪರ್ಧಿಗಳ ಲಿಸ್ಟ್!
- ಸೆಪ್ಟೆಂಬರ್ 28 ರಿಂದ “ಕಲರ್ಸ್ ಕನ್ನಡ” ವಾಹಿನಿಯಲ್ಲಿ ಪ್ರಾರಂಭವಾಗಲಿದೆ ಶೋ
ಟಿವಿ ಲೋಕದ ಜನಪ್ರಿಯ ರಿಯಾಲಿಟಿ ಶೋ Reality Show ಬಿಗ್ ಬಾಸ್ ಗೆ 12 Bigboss Season 12 ಸೀಸನ್ ದಿನಗಣನೆ ಆರಂಭವಾಗಿದೆ. ಸೆಪ್ಟೆಂಬರ್ 28ರಿಂದ ಬಿಗ್ ಬಾಸ್ ಶುರುವಾಗಲಿದೆ ಎಂದು ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ Kiccha Sudeep ಕಾರ್ಯಕ್ರಮವೊಂದರಲ್ಲಿ ಘೋಷಿಸಿದ್ದಾರೆ. ಹಾಗಾಗಿ ಕನ್ನಡ ಕಿರುತೆರೆಯ ಬಹುನಿರೀಕ್ಷಿತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 ನ್ನು ಎದುರುಗೊಳ್ಳಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಸೆಪ್ಟೆಂಬರ್ 28 ರಿಂದ “ಕಲರ್ಸ್ ಕನ್ನಡ” Colors Kannada ವಾಹಿನಿಯಲ್ಲಿ ಪ್ರಾರಂಭವಾಗಲಿರುವ ಈ ಶೋಗೆ ಈ ಬಾರಿಯೂ ಕಿಚ್ಚ ಸುದೀಪ್ ಅವರೇ ನಿರೂಪಕರಾಗಿ ಮುಂದುವರೆಯುತ್ತಿದ್ದಾರೆ.
ಸ್ಪರ್ಧಿಗಳ ಹೆಸರು ಅಂತಿಮ?
ಈ ಸಲದ ಬಿಗ್ ಬಾಸ್ ಸ್ಪರ್ಧಿಗಳ ಬಗೆಗಿನ ಊಹಾಪೋಹಗಳು ಈಗಾಗಲೇ ಶುರುವಾಗಿದೆ. ಕಿರುತೆರೆ ನಟ-ನಟಿಯರು, ಸೋಶಿಯಲ್ ಮೀಡಿಯಾ ಸ್ಟಾರ್ಸ್, ಮತ್ತು ವಿಶಿಷ್ಟ ವ್ಯಕ್ತಿಗಳು ಇರಬಹುದು ಎಂದು ಹೇಳಲಾಗುತ್ತಿದೆ. ಪ್ರತಿ ಸೀಸನ್ನಂತೆ, ಸ್ಪರ್ಧಿಗಳ ಪಟ್ಟಿಯನ್ನ ಶೋ ಆರಂಭವಾಗುವ ದಿನದವರೆಗೂ ಸೀಕ್ರೆಟ್ ಆಗಿ ಇಡಲಾಗುತ್ತದೆ. ಈಗಾಗಲೇ ಸ್ಪರ್ಧಿಗಳ ಆಯ್ಕೆ ಪೂರ್ಣಗೊಂಡಿದೆ. ಆದರೆ ಅಧಿಕೃತವಾಗಿ ಎಲ್ಲಿಯೂ ಈ ಕುರಿತು ವಾಹಿನಿ ಸಿಕ್ರೆಟ್ ಬಿಟ್ಟುಕೊಟ್ಟಿಲ್ಲ. ಆದರೆ “ಅಪೂರ್ವ” ಸಿನಿಮಾದ ನಟಿ ಅಪೂರ್ವ Apoorva ಅವರು ಸ್ಪರ್ದೆಯಲ್ಲಿರಬಹುದು ಎನ್ನಲಾಗುತ್ತಿದೆ. ಉಳಿದಂತೆ ಯಾವ ಸ್ಪರ್ಧಿಗಳ ಬಗ್ಗೆಯೂ ಮಾಹಿತಿ ಲಭ್ಯವಾಗಿಲ್ಲ. ಹಾಗಾಗಿ ಈ ಕುರಿತು ವೀಕ್ಷಕರಲ್ಲಿ ತೀವ್ರ ಕುತೂಹಲ ಮೂಡಿದ್ದು, ಸದ್ಯದಲ್ಲೇ ಸ್ಪರ್ಧಿಗಳ ಅಪ್ಡೇಟ್ ಲಭ್ಯವಾಗುವ ಸಾಧ್ಯತೆ ಇದೆ.