- ಮಕ್ಕಳ ಸಾಹಸ ಚಿತ್ರ ‘ರಾಮ’ ಪೋಸ್ಟರ್ ಬಿಡುಗಡೆ
- ವೆಸ್ಲಿ ಬ್ರೌನ್ ನಿರ್ದೇಶನದ ಮಕ್ಕಳ ಚಿತ್ರ
- ಪೋಸ್ಟರ್ ಬಿಡುಗಡೆಗೊಳಿಸಿದ ಸಾಲು ಮರದ ತಿಮ್ಮಕ್ಕ
- ಪರಿಸರ ಕಾಳಜಿಯ ಚಿತ್ರ ರಾಮ
ವೆಸ್ಲಿ ಬ್ರೌನ್ ನಿರ್ದೇಶನದ ಕಾಡು, ಪರಿಸರ, ಪ್ರಾಕೃತಿಕ ಸಂಪತ್ತನ್ನು ಉಳಿಸುವ ಕಥಾ ಹಂದರದ ಮಕ್ಕಳ ಸಾಹಸ ಚಿತ್ರ ‘ರಾಮ’ Rama ಇದರ ಪೋಸ್ಟರ್ ಬಿಡುಗಡೆಗೊಂಡಿದೆ. ವೃಕ್ಷಮಾತೆ ಸಾಲುಮರದ ತಿಮ್ಮಕ್ಕ Saalumarada Thimmakka ಪೋಸ್ಟರ್ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ಈ ಚಿತ್ರ ಮುಖ್ಯವಾಗಿ ಮಕ್ಕಳಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸುವಂತಿದ್ದು, ಗ್ರಾಫಿಕ್ಸ್ ಬಳಸಿ ಮರಗಳು ಮತ್ತು ಅದರ ಬೇರುಗಳು ಮಾತನಾಡಿಕೊಳ್ಳುವುದು ಕುತೂಹಲಕಾರಿಯಾಗಿದೆ. ಮರ ಕಡಿಯಲು ಬಂದವರನ್ನು ಶಾಲೆಯ ಮಕ್ಕಳು ಯಾವ ರೀತಿ ನಿರ್ಬಂಧಿಸುತ್ತಾರೆ ಎಂಬುದನ್ನು ಚಿತ್ರದಲ್ಲಿ ನೋಡಬಹುದು ಎಂದು ಚಿತ್ರದ ಕುರಿತು ನಿರ್ದೇಶಕರು ತಿಳಿಸಿದ್ದಾರೆ.

ಮಾಸ್ಟರ್ ವಿಹಾನ್, ಬೇಬಿ ಶರೋನ್, ಬೇಬಿ ಸುಧೀಕ್ಷಾ, ನೆ.ಲ. ನರೇಂದ್ರಬಾಬು ಮುಂತಾದವರು ತಾರಾಗಣದಲ್ಲಿದ್ದಾರೆ. ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ನಿಕ್ಕಿನಾಶ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿಶ್ಚಲ್ ಬಿ.ಎಂ. ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಛಾಯಾಚಿತ್ರಗ್ರಹಣ ಹಾಗೂ ಸಂಕಲನದ ಜವಬ್ದಾರಿ ನಿರ್ದೇಶಕರದ್ದು. ಅಭಿಲಾಷ್ ಲಾಕ್ರಾ-ಜುವೆಲ್ ದುಬಾ ಸಂಗೀತ, ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಚಿತ್ರಕ್ಕಿದೆ.