ಮಕ್ಕಳ ಸಾಹಸ ಚಿತ್ರ ‘ರಾಮ’ ಪೋಸ್ಟರ್ ಬಿಡುಗಡೆ

Date:

  • ಮಕ್ಕಳ ಸಾಹಸ ಚಿತ್ರ ‘ರಾಮ’ ಪೋಸ್ಟರ್ ಬಿಡುಗಡೆ
  • ವೆಸ್ಲಿ ಬ್ರೌನ್ ನಿರ್ದೇಶನದ ಮಕ್ಕಳ ಚಿತ್ರ
  • ಪೋಸ್ಟರ್ ಬಿಡುಗಡೆಗೊಳಿಸಿದ ಸಾಲು ಮರದ ತಿಮ್ಮಕ್ಕ
  • ಪರಿಸರ ಕಾಳಜಿಯ ಚಿತ್ರ ರಾಮ

ವೆಸ್ಲಿ ಬ್ರೌನ್ ನಿರ್ದೇಶನದ ಕಾಡು, ಪರಿಸರ, ಪ್ರಾಕೃತಿಕ ಸಂಪತ್ತನ್ನು ಉಳಿಸುವ ಕಥಾ ಹಂದರದ ಮಕ್ಕಳ ಸಾಹಸ ಚಿತ್ರ ‘ರಾಮ’ Rama ಇದರ ಪೋಸ್ಟರ್‌ ಬಿಡುಗಡೆಗೊಂಡಿದೆ. ವೃಕ್ಷಮಾತೆ ಸಾಲುಮರದ ತಿಮ್ಮಕ್ಕ Saalumarada Thimmakka ಪೋಸ್ಟರ್ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ಈ ಚಿತ್ರ ಮುಖ್ಯವಾಗಿ ಮಕ್ಕಳಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸುವಂತಿದ್ದು, ಗ್ರಾಫಿಕ್ಸ್ ಬಳಸಿ ಮರಗಳು ಮತ್ತು ಅದರ ಬೇರುಗಳು ಮಾತನಾಡಿಕೊಳ್ಳುವುದು ಕುತೂಹಲಕಾರಿಯಾಗಿದೆ. ಮರ ಕಡಿಯಲು ಬಂದವರನ್ನು ಶಾಲೆಯ ಮಕ್ಕಳು ಯಾವ ರೀತಿ ನಿರ್ಬಂಧಿಸುತ್ತಾರೆ ಎಂಬುದನ್ನು ಚಿತ್ರದಲ್ಲಿ ನೋಡಬಹುದು ಎಂದು ಚಿತ್ರದ ಕುರಿತು ನಿರ್ದೇಶಕರು ತಿಳಿಸಿದ್ದಾರೆ‌.

ಮಾಸ್ಟರ್ ವಿಹಾನ್, ಬೇಬಿ ಶರೋನ್, ಬೇಬಿ ಸುಧೀಕ್ಷಾ, ನೆ.ಲ. ನರೇಂದ್ರಬಾಬು ಮುಂತಾದವರು ತಾರಾಗಣದಲ್ಲಿದ್ದಾರೆ. ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ನಿಕ್ಕಿನಾಶ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿಶ್ಚಲ್ ಬಿ.ಎಂ. ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಛಾಯಾಚಿತ್ರಗ್ರಹಣ ಹಾಗೂ ಸಂಕಲನದ ಜವಬ್ದಾರಿ ನಿರ್ದೇಶಕರದ್ದು. ಅಭಿಲಾಷ್ ಲಾಕ್ರಾ-ಜುವೆಲ್ ದುಬಾ ಸಂಗೀತ, ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಚಿತ್ರಕ್ಕಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವಾರ ಓಟಿಟಿಗೆ ಎಂಟ್ರಿ ಕೊಡುತ್ತಿದೆ ಎರಡು ಬಹುನಿರೀಕ್ಷಿತ ಸಿನಿಮಾಗಳು – Two of the Most Awaited Movies are Finally Entering OTT This Week

• ಮಳೆಗಾಲದಲ್ಲಿ ಮನೆಯಲ್ಲಿಯೇ ಬಿಂದಾಸ್ ಮನರಂಜನೆ• ಒಂದು ಆಕ್ಷನ್ ಇನ್ನೊಂದು ಅಪರೂಪದ...

ಓಟಿಟಿಯಲ್ಲಿ ಸದ್ದು ಮಾಡ್ತಿವೆ ಈ ಸೂಪರ್ ಹಿಟ್ ಚಿತ್ರಗಳು

ಜೂನ್ ಮಳೆಯೊಂದಿಗೆ ಆನಂದಿಸಬಹುದಾದ ಇಂಟರೆಸ್ಟಿಂಗ್ ಸಿನಿಮಾಗಳು ಆಕ್ಷನ್, ಕಾಮಿಡಿ, ಸಖತ್ ಥ್ರಿಲ್ಲರ್ ಮೂವಿಗಳದ್ದೇ...

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್ ರಂಗಭೂಮಿಯಿಂದ ಕಲಾಯಾತ್ರೆ ಆರಂಭಿಸಿ...

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ ಯುವ ಸಂಗೀತ ನಿರ್ದೇಶಕನ...