- ಕ್ರೆಡಿಟ್ ಲೋಕದ ಕತೆ ಹೇಳಲು ಸಿದ್ಧವಾಗ್ತಿದೆ “ಕ್ರೆಡಿಟ್ ಸ್ಕೋರ್”
- ಮಂಜುಮೆಲ್ ಬಾಯ್ಸ್ ಖ್ಯಾತಿಯ ಶ್ರೀನಾಥ್ ಭಸಿ ನಾಯಕನಾಗಿ ಮಿಂಚಿದ್ದಾರೆ.
- ಈಗಾಗಲೇ ಚಿತ್ರತಂಡ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದೆ.
ಬ್ಯಾಂಕುಗಳು ಸಾಲ ಕೊಡುವ ಮುನ್ನ ಗ್ರಾಹಕರ ಅರ್ಹತೆಗಳನ್ನು ನೋಡುವುದು ಸಾಮಾನ್ಯ.ಈ ಸನ್ನಿವೇಶಗಳನ್ನೇ ಹೆಣೆಯಲಾದ ಸಿನಿಮಾವೊಂದು ಸಿದ್ಧಗೊಂಡಿದೆ. ಸಿನಿಮಾದ ಹೆಸರು “ಕ್ರೆಡಿಟ್ ಸ್ಕೋರ್” Credit Score
ಇದೊಂದು ಮಲಯಾಳಂ ಸಿನಿಮಾ.
ಶಶಿಧರ್ ಕೆ ಎಂ Shashidhar K M ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಮಂಜುಮೆಲ್ ಬಾಯ್ಸ್ Manjummel Boys ಖ್ಯಾತಿಯ ಶ್ರೀನಾಥ್ ಭಸಿ Shrinath Bhasi ನಾಯಕನಾಗಿ ಮಿಂಚಿದ್ದಾರೆ.

EFG (eFlix Graffiti Pvt Ltd) ಈ ಚಿತ್ರವನ್ನು ನಿರ್ಮಿಸಿದೆ. ಎಂಜಿನಿಯರ್ ಮತ್ತು ವೈದ್ಯರಾದ ವಿವೇಕ್ ಶ್ರೀಕಂಠಯ್ಯ ಮತ್ತು ಡಾ. ಸತೀಶ್ ಶೆಂದ್ರೆ ಈ ಸಂಸ್ಥೆಯ ಸಂಸ್ಥಾಪಕರು. Subjective ಕತೆ ಹೊಂದಿರುವ ಈ ಚಿತ್ರ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈಗಾಗಲೇ ಚಿತ್ರತಂಡ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದೆ.
ಕೆಲವೇ ದಿನಗಳಲ್ಲಿ ಚಿತ್ರದ ಟೀಸರ್, ಟ್ರೈಲರ್ ಹಾಗೂ ಹಾಡುಗಳು ಕೂಡ ರಿಲೀಸ್ ಆಗಲಿವೆ . ಚಿತ್ರ ಶೀಘ್ರದಲ್ಲಿಯೇ ಮಲಯಾಳಂ, ಕನ್ನಡ ಹಾಗು ಇನ್ನಿತರ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಒಂದೊಳ್ಳೆ ಕತೆ ಹೊಂದಿರುವ “ಕ್ರೆಡಿಟ್ ಸ್ಕೋರ್” ಎಲ್ಲಾ ಭಾಷೆಗಳಲ್ಲೂ ಹಿಟ್ ಆಗುವ ನಿರೀಕ್ಷೆ ಮೂಡಿಸಿದೆ.