ಶೀಘ್ರದಲ್ಲೇ ತೆರೆಗೆ ಬರಲಿದೆ ಕ್ರೈಂ, ಥ್ರಿಲ್ಲರ್ ಮೂವಿ “ಠಾಣೆ”

Date:

  • ಶೀಘ್ರದಲ್ಲೇ ತೆರೆಗೆ ಬರಲಿದೆ ಕ್ರೈಂ, ಥ್ರಿಲ್ಲರ್ ಮೂವಿ “ಠಾಣೆ”
  • 20 ವರ್ಷಗಳ ಹಿಂದೆ ನ್ಯಾಯಕ್ಕಾಗಿ ಹೋರಾಟ ಮಾಡಿದ ಯುವಕನ ಕಥೆಯೇ “ಠಾಣೆ”
  • ಎಸ್. ಭಗತ್ ರಾಜ್ ನಿರ್ದೇಶನದ ಈ ಚಿತ್ರದ ಒಗಟುಗಳನ್ನು ಉಪಯೋಗಿಸಿ ರಚಿಸಿದ ಹಾಡು ರಿಲೀಸ್ ಆಗಿದೆ.

ಗಾಯತ್ರಿ ಎಂ Gayathri M ಇವರು ಬಂಡವಾಳ ಹೂಡಿರುವ, ಎಸ್ ಭಗತ್ ರಾಜ್ S. Bhagath Raj ನಿರ್ದೇಶಿಸಿರುವ ಅಪರೂಪದ ಕಥಾ ವಸ್ತುವಿನ ಚಿತ್ರ “ಠಾಣೆ” Thaane ತಯಾರಾಗಿದ್ದು ಸದ್ಯಯಲ್ಲೇ ತೆರೆಗೆ ಬರಲಿದೆ. ವಿದುಷಿ ಹರಿಣಾಕ್ಷಿ ನಾಯಕಿಯಾಗಿ ನಟಿಸಿದ್ದು, ಬಿ.ವಿ.ರಾಜಾರಾಂ, ಬಲ ರಾಜವಾಡಿ, ಪಿ.ಡಿ.ಸತೀಶ್ ಚಂದ್ರ ಮುಂತಾದವರು ತಾರಾಗಣದಲ್ಲಿದ್ದಾರೆ.

ನಾಯಕನ ನ್ಯಾಯಕ್ಕಾಗಿ ಹೋರಾಟದ ಕಥೆ

ಚಿತ್ರದ ನಾಯಕನಾಗಿ ನಟಿಸಿರುವ ರಂಗಭೂಮಿ ಕಲಾವಿದ ಪ್ರವೀಣ್ ಗೆ Praveen ಇದು ಚೊಚ್ಚಲ ಚಿತ್ರವಾಗಿದ್ದು, ಚಿತ್ರದಲ್ಲಿ ಕಾಳಿ ಎಂಬ ಪಾತ್ರ ಮಾಡಿದ್ದಾರೆ. 20 ವರ್ಷಗಳ ಹಿಂದೆ ಪೊಲೀಸ್ ಠಾಣೆಗಳ ಪ್ರಮಾಣ ಕಡಿಮೆ ಇದ್ದಂತಹ ಸಂದರ್ಭದಲ್ಲಿ ಜನರೇ‌ ನ್ಯಾಯಕ್ಕಾಗಿ ಯಾವ ರೀತಿ ಹೋರಾಟ ಮಾಡುತ್ತಿದ್ದರು ಎಂಬುದನ್ನು ಚಿತ್ರದ ಕಥಾ ಹಂದರವಾಗಿ ತೆಗೆದುಕೊಳ್ಳಲಾಗಿದೆ. ಇಲ್ಲಿ ನಾಯಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಾನೆ. ಹಳೆಯ ಕಟ್ಟಡಗಳು, ಸ್ಥಳಗಳನ್ನು ಹುಡುಕಿ ಚಿತ್ರದ ಚಿತ್ರೀಕರಣ ಮಾಡಲಾಗಿದೆ‌.

ಒಗಟುಗಳನ್ನು ಬಳಸಿಕೊಂಡು ಹಾಡು

ಮಜಾ ಟಾಕೀಸ್ ಖ್ಯಾತಿಯ ರೇಮೋ Remo ಸಾಹಿತ್ಯ ಬರೆದಿರುವ ಒಗಟುಗಳಿಂದ ಕೂಡಿದ ಒಂದು ಹಾಡು ಚಿತ್ರದಲ್ಲಿದ್ದು ಅದಕ್ಕೆ ರಾಜೇಶ್ ಕೃಷ್ಣ, Rajesh Krishna ರೇಮೋ ಮುಂತಾದವರ ಧ್ವನಿ ಇದೆ‌. ಮಾನಸ ಹೊಳ್ಳ Manasa Holla ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಪ್ರಶಾಂತ್ ಸಾಗರ್ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ ಚಿತ್ರಕ್ಕಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

“ಕೃಷ್ಣಂ ಪ್ರಣಯ ಸಖಿ” ಜೋಡಿಯ ಹೊಸ ಸಿನಿಮಾ ಅನೌನ್ಸ್: ವಿಭಿನ್ನ ಕಥಾ ಹಂದರವಿರೋ ರೊಮ್ಯಾಂಟಿಕ್ ಚಿತ್ರ

“ಕೃಷ್ಣಂ ಪ್ರಣಯ ಸಖಿ” ಜೋಡಿಯ ಹೊಸ ಸಿನಿಮಾ ಅನೌನ್ಸ್: ವಿಭಿನ್ನ ಕಥಾ...

ಓಟಿಟಿಯಲ್ಲಿ ಸಿನಿ ರಸಿಕರಿಗೆ ವಾರಾಂತ್ಯ ಹಬ್ಬ: ಅಬ್ಬರಿಸಿತು ಈ ಮೂರು ಚಿತ್ರಗಳು

ಓಟಿಟಿಯಲ್ಲಿ ಸಿನಿ ರಸಿಕರಿಗೆ ವಾರಾಂತ್ಯ ಹಬ್ಬ: ಅಬ್ಬರಿಸಿತು ಈ ಮೂರು ಚಿತ್ರಗಳು ವಾರಾಂತ್ಯದಲ್ಲೂ...

“ಕಾಂತಾರ ಚಾಪ್ಟರ್ 1” ನ ನಾಯಕಿಯ ಫಸ್ಟ್ ಲುಕ್ ರಿಲೀಸ್ : ಇವರೇ ನೋಡಿ ಕಾಂತಾರದ ಆ “ಮಹಾರಾಣಿ”

“ಕಾಂತಾರ ಚಾಪ್ಟರ್ 1” ನ ನಾಯಕಿಯ ಫಸ್ಟ್ ಲುಕ್ ರಿಲೀಸ್ :...

“ಕರಾವಳಿ” ಸಿನಿಮಾದ ಟೀಸರ್ ನೋಡಿ ಪ್ರೇಕ್ಷಕರು ಸಖತ್ ಖುಷ್: ಏನ್ ಸ್ಪೆಷಲ್ ಇದೆ ಟೀಸರ್ ನಲ್ಲಿ?

“ಕರಾವಳಿ” ಸಿನಿಮಾದ ಟೀಸರ್ ನೋಡಿ ಪ್ರೇಕ್ಷಕರು ಸಖತ್ ಖುಷ್: ಏನ್ ಸ್ಪೆಷಲ್...