- ಶಿವರಾಜ್ ಕುಮಾರ್ ಜೀವನದ ಈ ಕಥೆ ನಿಮಗೆ ಗೊತ್ತೇ?
- ಶಿವಣ್ಣ ಹೆಸರು ಬದಲಿಸಿದವರು ಯಾರು
- ಅವರ ಈ ವಯಸ್ಸಿನಲ್ಲೂ ಬತ್ತದ ಉತ್ಸಾಹಕ್ಕೆ ಕಾರಣ ಏನು?
“ನಾಗರಾಜು ಶಿವಪುಟ್ಟಸ್ವಾಮಿ” ಅನ್ನೋದು ಶಿವರಾಜ್ ಕುಮಾರ್ ಅವರ ಒರಿಜಿನಲ್ ಹೆಸರು. ತಂದೆ ತಾಯಿಯರು ಇಟ್ಟ ಈ ಹೆಸರನ್ನು ಬದಲಾಯಿಸಿದ್ದರ ಹಿಂದೆಯೂ ಒಬ್ಬ ವ್ಯಕ್ತಿ ಇದಾರೆ, ಒಂದು ಕಥೆಯಿದೆ. ಶಿವಣ್ಣ ಅವ್ರ ತಂದೆ ಕನ್ನಡದ ಮೇರುನಟ ರಾಜ್ ಕುಮಾರ್. ಇವರ ಸ್ನೇಹಿತರಾದ ರಾಮಸ್ವಾಮಿ ಅವ್ರೇ ಹೆಸರು ಬದಲಾಯಿಸಲು ಕಾರಣರಂತೆ. ಶಿವಣ್ಣ ಕನ್ನಡ ಇಂಡಸ್ಟ್ರಿಗೆ ಆಗಷ್ಟೇ ತೆರೆದುಕೊಳ್ಳುತ್ತಿದ್ದ ಕಾಲ, ಆ ಸಂದರ್ಭದಲ್ಲಿ ಬಾಲಿವುಡ್ ಗಳಲ್ಲಿ ಫ್ಯಾಮಿಲಿ ಸಿನಿ ಪರಂಪರೆಯೇ ಇರುವಂತೆ ನಮ್ಮ ಸ್ಯಾಂಡಲ್ ವುಡ್ ನಲ್ಲೂ ಯಾಕಿರ್ಬಾರ್ದು ಅನ್ನೋ ಯೋಚನೆಯಿಂದ “ರಾಜ್ ಕುಮಾರ್ ಫ್ಯಾಮಿಲಿ” ಅಂತಲೇ ಫೇಮಸ್ ಆಗ್ಲಿ ಎಂಬ ಉದ್ದೇಶದಿಂದ ಶಿವರಾಜ್ ಕುಮಾರ್ ಅನ್ನೋ ಹೆಸರು ಸಜೆಸ್ಟ್ ಮಾಡ್ತಾರೆ. ಇದೇ ಶಿವಣ್ಣ ಅವ್ರ ಬದಲಾದ ಹೆಸರಿನ ಹಿಂದಿರುವ ಕಥೆ.
ಸಿನಿ ಅಭಿಮಾನಿಗಳು, ಅಭಿಮಾನಿಗಳ ಪ್ರೀತಿಯೇ ಶಿವಣ್ಣ ಅವರ ಈ ವಯಸ್ಸಿನಲ್ಲೂ ಬತ್ತದ ಉತ್ಸಾಹದ ಹಿಂದಿನ ಸ್ಫೂರ್ತಿಯ ಕಥೆಯಂತೆ. ಎನರ್ಜಿಯ ಹಿಂದಿನ ಟಾನಿಕ್, ಬೂಸ್ಟ್ ಎಲ್ಲವೂ ಅಭಿಮಾನಿ ದೇವರುಗಳು ಅವರ ಪ್ರೀತಿ ಮತ್ತೆ ವಿಶ್ವಾಸ ಅಂತಾರೆ ಶಿವರಾಜ್ ಕುಮಾರ್. ಅವ್ರ ಬ್ಯುಸಿ ಕೆಲಸ, ಶೂಟಿಂಗ್, ಕಾರ್ಯಕ್ರಮಗಳು ಇದೆಲ್ಲದರಿಂಗೆ ಅವರೆಷ್ಟೇ ಸುಸ್ತಾಗಿದ್ರೂ ಜನರು ಪ್ರೀತಿಯಿಂದ ಒಂದು ಸ್ಟೆಪ್ ಹಾಕಿ ಅಂತನೋ ಒಂದೆರಡು ಡೈಲಾಗ್ ಹೇಳಿ ಅಂತನೋ ಕೇಳ್ಕೊಂಡ ಕೂಡ್ಲೇ ಉತ್ಸಾಹ ಉಕ್ಕಿ ಬರತ್ತಂತೆ. ಜನರ ಚಪ್ಪಾಳೆ, ವಿಷಲ್, ಹಿರಿಯರ ಆಶೀರ್ವಾದ ಇವೆಲ್ಲವೂ ಕಾರಣ ಇರ್ಬೋದು ಅಂತಾರೆ ಶಿವಣ್ಣ.