ಫೆಬ್ರವರಿ 7ಕ್ಕೆ “ಎಲ್ಲೋ ಜೋಗಪ್ಪ ನಿನ್ನರಮನೆ”ತೆರೆಗೆ

Date:

  • ಫೆಬ್ರವರಿ 7ಕ್ಕೆ “ಎಲ್ಲೋ ಜೋಗಪ್ಪ ನಿನ್ನರಮನೆ” ತೆರೆಗೆ
  • ಕಂಬ್ಳಿಹುಳ ಮೂವಿಯಲ್ಲಿ ನಟಿಸಿದ್ದ ಅಂಜನ್ ನಾಗೇಂದ್ರ ಚಿತ್ರದ ನಾಯಕ
  • ಅಗ್ನಿಸಾಕ್ಷಿ, ಕಮಲಿ, ನಾಗಿಣಿ ಧಾರಾವಾಹಿಗಳ ನಿರ್ದೇಶಕ ಹಯವದನ ಅವರ ನಿರ್ದೇಶನವಿದೆ.
  • “ಹೌದಾ ಹುಲಿಯ”, “ಜಾಣಮರಿ ಏಕೆ ಕಾಡುವೆ” ಹಾಡುಗಳ ಬಿಡುಗಡೆ

ಪ್ರೀತಿ ಪ್ರೇಮಗಳ ಕತೆಯ ಮಿಳಿತದೊಂದಿಗೆ, ತಂದೆ ಮಗನ ಬಾಂಧವ್ಯವನ್ನೂ ತೋರಿಸುವ ಕಥಾಹಂದರವನ್ನು ಹೊಂದಿರುವ ಜರ್ನಿ ಕಮ್ ಎಮೋಷನಲ್ ಮೂವೀ “ಎಲ್ಲೋ ಜೋಗಪ್ಪ ನಿನ್ನರಮನೆ”. Yello Jogappa Ninnaramane Movie ಕಂಬ್ಳಿಹುಳ ಮೂವಿಯಲ್ಲಿ ನಟಿಸಿರುವ ಅಂಜನ್ ನಾಗೇಂದ್ರ Anjan Nagendra ಅವ್ರು ಈ ಚಿತ್ರದ ನಾಯಕ, ನಾಯಕಿಯಾಗಿ ವೆನ್ಯಾ ರೈ Venya Rai ಮಿಂಚಿದ್ದಾರೆ. ಹಲವು ಧಾರಾವಾಹಿಗಳ ನಿರ್ದೇಶನ ಮಾಡಿ ಕಿರುತೆರೆಯಲ್ಲಿ ಹೆಸರು ಗಳಿಸಿರುವ ನಿರ್ದೇಶಕ ಹಯವದನ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಎರಡು ಹಾಡುಗಳ ಬಿಡುಗಡೆ

ಝೇಂಕಾರ್ ಮ್ಯೂಸಿಕ್ ನ ಯೂಟ್ಯೂಬ್ ಚಾಲನ್ ನಲ್ಲಿ ಈ ಮೂವಿಯ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಮೊದಲು ಬಿಡುಗಡೆಯಾದ “ಹೌದಾ ಹುಲಿಯ” ಹಾಡಿಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎರಡನೇ ಹಾಡು “ಜಾಣಮರಿ ಏಕೆ ಕಾಡುವೆ” ಹಾಡಿನಲ್ಲಿ ನಾಯಕ ನಾಯಕಿಯರು ಒಟ್ಟಿಗೆ ಹೆಜ್ಜೆ ಹಾಕಿದಾರೆ. ರವೀಂದ್ರ ಮುದ್ದಿ, ಪ್ರಮೋದ್ ಮರವಂತೆ ಅವರ ಸಾಹಿತ್ಯಕ್ಕೆ ಶಿಯೋಮ್ ಪ್ರಸಾದ್ ಅವರ ಸಂಗೀತವಿದೆ. ರವೀಂದ್ರ ಸೊರಗ್ವಿ, ರಕ್ಷಿತಾ ಸುರೇಶ್, ವಿಶಾಕ್ ನಾಗಲಾಪುರ ಅವರು ಧ್ವನಿಯಾಗಿದ್ದಾರೆ.

ಬೆಂಗಳೂರಿನಿಂದ ಶುರುವಾಗತ್ತೆ ಸಿನಿಪಯಣ

ಈಗಾಗ್ಲೇ ಹೇಳಿದಂಗೆ ಇದು ಭಾವನಾತ್ಮಕ ಸಿನಿಮಾದ ಜೊತೆಗೆ ಜರ್ನಿ ಬೇಸ್ಡ್ ಸಿನಿಮಾ ಕೂಡಾ ಆಗಿದ್ದು, ಇದರಲ್ಲಿ ಬೆಂಗಳೂರಿನಿಂದ ಶುರುವಾಗುವ ನಾಯಕನ ಪಯಣ ಹಿಮಾಲಯದವರೆಗೂ ಸಾಗುತ್ತದೆ. ಹಾಗಾಗಿ ಬೇರೆ ಬೇರೆ ರಾಜ್ಯಗಳ ಹಲವು ಸ್ಥಳಗಳಲ್ಲಿ ಚಿತ್ರದ ಶೂಟಿಂಗ್ ನಡೆದಿದ್ದು, ಯುವಜನರ ಮನಸ್ಸಿಗೆ ಚಿತ್ರ ಹತ್ತಿರವಾಗಬಹುದೆಂಬ ನಿರೀಕ್ಷೆ ಚಿತ್ರತಂಡಕ್ಕಿದೆ. ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು ಫೆಬ್ರವರಿ ಏಳರಂದು ಬೆಳ್ಳಿತೆರೆಯ ಮೇಲೆ ಬಿಡುಗಡೆಯಾಗಲಿದೆ.

ಪ್ರಮುಖ ಪಾತ್ರದಲ್ಲಿ ಸಂಜನಾ ದಾಸ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಿರಾದರ್, ಶರತ್ ಲೋಹಿತಾಶ್ವ, ದಾನಪ್ಪ, ಸ್ವಾತಿ, ದಿನೇಶ್ ಮಂಗಳೂರು, ಲಕ್ಷ್ಮೀ ನಾಡಗೌಡ ಚಿತ್ರದಲ್ಲಿ ನಟಿಸಿದ್ದಾರೆ. ನಟರಾಜ್ ಮದ್ದಾಲ ಛಾಯಾಗ್ರಹಣ, ರವಿಚಂದ್ರನ್ ಸಂಕಲನ ಈ ಚಿತ್ರಕ್ಕಿದೆ. ಭಜರಂಗಿ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ನರಸಿಂಹ ಸಾಹಸ ನಿರ್ದೇಶನ ಈ ಸಿನಿಮಾಗಿದೆ. ‘ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್’ ಮತ್ತು ‘ಕೃಷ್ಣಛಾಯಾ ಚಿತ್ರ’ ಬ್ಯಾನರ್ ಮೂಲಕ ಪವನ್ ಸಿಮಿಕೇರಿ ಹಾಗೂ ಸಿಂಧು ಹಯವದನ ಅವರು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

Jaana Mari – Video Song – Yello Jogappa Ninnaramane – Movie

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ”

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ” ಲವ್...

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು!

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು! ಮಾತಾಡಲು ಬರ್ತಿದೆ ಮಾತೊಂದ...

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ”

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ” ಅಕ್ಟೋಬರ್ 31 ಕ್ಕೆ ಬಹುನಿರೀಕ್ಷಿತ ಚಿತ್ರ “ಮಾರುತ”...

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ ನೋಡಿ

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ...