ತೆರೆಯ ಮೇಲೆ ಮಿಂಚಲಿದೆ ತಂದೆ ಮಕ್ಕಳ ಬಾಂಧವ್ಯದ ಕಹಾನಿ: ಬರ್ತಿದೆ ಬಹುನಿರೀಕ್ಷಿತ ಚಿತ್ರಗಳು!

Date:

ತಂದೆ ಮಕ್ಕಳ ಬಾಂಧವ್ಯವನ್ನು ಸಾರುವ ಬಹಳಷ್ಟು ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಬಂದು ಹೋಗಿವೆ. ಆದರೂ ತಂದೆ ಮಕ್ಕಳ ಪ್ರೀತಿ ಯಾವತ್ತೂ ಬೋರು ಹೊಡೆಸುವ ಸಂಗತಿಯಲ್ಲ. ಇತ್ತೀಚೆಗಷ್ಟೇ ಅಪ್ಪಂದಿರ ದಿನವನ್ನು ಆಚರಿಸಲಾಯ್ತು. ಈ ಹಿನ್ನೆಲೆಯಲ್ಲಿ ತಂದೆ ಮಕ್ಕಳ ಪ್ರೀತಿಯನ್ನು ಸಾರಲು ಬರುತ್ತಿರೋ ಆ ಬಹುನಿರೀಕ್ಷಿತ ಸಿನಿಮಾಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

Father son bonding Upcoming Kannada movies list:

ಫಾದರ್ Father

ಖ್ಯಾತನಟ ಪ್ರಕಾಶ್ ರಾಜ್ Prakash Raj ಮತ್ತು ಡಾಲಿಂಗ್ ಕೃಷ್ಣ Darling Krishna ತಂದೆ-ಮಗನಾಗಿ ನಟಿಸಿರುವ ಭಾವನಾತ್ಮಕ ಚಿತ್ರವಿದು. ಆರ್ ಚಂದ್ರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಒಂದು ವಿಭಿನ್ನವಾದ ಕತೆಯ ಎಳೆಯಿರುವ ಸಿನಿಮಾವಿದು. ಈಗಾಗಲೇ ಈ ಸಿನಿಮಾದ ಶೂಟಿಂಗ್ ಮುಗಿದಿದೆ. ರಾಜಮೋಹನ್ ಈ ಚಿತ್ರಕ್ಕೆ ಕತೆ ಚಿತ್ರಕತೆ ಬರೆದು ನಿರ್ದೇಶಕನಾಗಿ ಆಕ್ಷನ್ ಕಟ್ ಹೇಳಿದ್ದಾರೆ.

ಚೌಕಿ ದಾರ್ Chowkidar

ಇದು ಖ್ಯಾತ ನಟ ಸಾಯಿಕುಮಾರ್ Sai Kumar ತಂದೆಯಾಗಿ, ಪೃಥ್ವಿ ಅಂಬರ್ Prithvi Ambar ಮಗನಾಗಿ ನಟಿಸುತ್ತಿರುವ ಸಿನಿಮಾ “ಚೌಕಿ ದಾರ್”. ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಿಸುತ್ತಿರುವ ಈ ಸಿನಿಮಾಗೆ ಸಚಿನ್ ಬಸ್ರೂರ್ ಸಂಗೀತ, ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ. ವಿಜಯ್ ಪ್ರಕಾಶ್ ಕೆಲ ಹಾಡುಗಳನ್ನು ಹಾಡಿದ್ದಾರೆ. ಧನ್ಯಾ ರಾಮ್ ಕುಮಾರ್ Dhanya Ram Kumar ನಾಯಕಿಯಾಗಿ ಮಿಂಚಿದ್ದಾರೆ. ನಟಿ ಸುಧಾರಾಣಿ Sudharani ಕೂಡ ಈ ಸಿನಿಮಾಗೆ ಬಣ್ಣ ಹಚ್ಚಿದ್ದಾರೆ. ಕಲ್ಲಹಳ್ಳಿ ಚಂದ್ರಶೇಖರ್ ಈ ಚಿತ್ರಕ್ಕೆ ಹಣ ಹೂಡಿದ್ದು ತಂದೆ ಮಕ್ಕಳ ಸೆಂಟಿಮೆಂಟ್ ಕೂಡ ಈ ಸಿನಿಮಾದಲ್ಲಿದೆ.

ಸನ್ ಆಫ್ ಮುತ್ತಣ್ಣ Son of Mutthanna

ಡೈನಾಮಿಕ್ ಸ್ಟಾರ್ ದೇವರಾಜ್ ಪುತ್ರ ಪ್ರಣಮ್ ದೇವರಾಜ್ Pranam Devaraj ನಟನೆಯ,ರಂಗಾಯಣ ರಘು Rangayana Raghu ತಂದೆಯಾಗಿ ಪಾತ್ರ ಮಾಡಿರುವ ಈ ಸಿನಿಮಾವನ್ನು ಶ್ರೀಕಾಂತ್ ಹುಣಸೂರ್ ನಿರ್ದೆಶಿಸುತ್ತಿದ್ದಾರೆ. ನಾಯಕಿಯಾಗಿ ಖುಷಿ ರವಿ Khushi Ravi ನಟಿಸುತ್ತಿದ್ದಾರೆ. ಸುಚೇಂದ್ರ ಪ್ರಸಾದ್, ಗಿರೀಶ್ ಶಿವಣ್ಣ, ತಬಲನಾಣಿ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ತಂದೆ ಮಗನ ನಡುವೆ ನಡೆಯೋ ವಿಭಿನ್ನ ಕತೆಯೇ ಈ ಸಿನಿಮಾದ ಮುಖ್ಯ ಎಳೆ. ಪುರಾತನ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ SRK ಫಿಲ್ಮ್ಸ್ ಜೊತೆಗೂಡಿ ಈ ಸಿನಿಮಾ ನಿರ್ಮಿಸಲಾಗಿದೆ. ಸಚಿನ್ ಬಸ್ರೂರು ಸಂಗೀತವಿದೆ. ಸಿನಿಮಾದ ಹಾಡುಗಳಿಗೆ ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ.

ಸನ್ ಆಫ್ ಸತ್ಯ ಹರಿಶ್ಚಂದ್ರ Son Of Sathya Harishchandra

ಸಾಯಿಕುಮಾರ್ ಮಗನ ಪಾತ್ರದಲ್ಲಿ ನಟ ನಿರೂಪ್ ಭಂಡಾರಿ Niroopa Bhandary ನಟಿಸಿರುವ ಚಿತ್ರ “ಸನ್ ಆಫ್ ಸತ್ಯ ಹರಿಶ್ಚಂದ್ರ” ಸಚಿನ್ ವಾಲಿ ನಿರ್ದೇಶನದ ಈ ಚಿತ್ರ, ಅಂಕಿತ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಅಂಕಿತ್ ಸೋನಿಗಾರ ನಿರ್ಮಾಣ ಮಾಡುತ್ತಿದ್ದಾರೆ. ಬೃಂದಾ ಆಚಾರ್ಯ, ಅಂಕಿತಾ ಅಮರ್, ಸ್ವಾತಿ ಗುರುದತ್ ತಾರಾಗಣದಲ್ಲಿದ್ದಾರೆ. ಸತ್ಯ ಮತ್ತು ಸುಳ್ಳಿನ ಮಧ್ಯ ನಡೆಯುವ ಸಂಘರ್ಷದ ಕಥಾ ಹಂದರ ಹೊಂದಿರುವ ಸತ್ಯ ಸನ್ ಆಫ್ ಹರಿಶ್ಚಂದ್ರ ಸಿನಿಮಾದಲ್ಲಿ ಹಾಸ್ಯ ವೂ ಪ್ರಧಾನವಾಗಿದೆ. ಪ್ರಶಾಂತ್ ಮುಲಗೆ ಸಹ ನಿರ್ಮಾಪಕರಾಗಿದ್ದಾರೆ. ಈ ಚಿತ್ರಕ್ಕೆ ಸಂದೀಪ್ ವಲ್ಲೂರಿ ಛಾಯಾಗ್ರಹಣ, ಸಚಿನ್ ಬಸ್ರೂರು ಸಂಗೀತ, ಉಜ್ವಲ್ ಚಂದ್ರ ಸಂಕಲನ, ಜೋ಼ಹ ಕಬೀರ್ ವಸ್ತ್ರ ವಿನ್ಯಾಸ ಹಾಗೂ ಉಲ್ಲಾಸ್ ಹೈದೂರ್ ಕಲಾ ನಿರ್ದೇಶನವಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಜೂನ್ 20 ರಂದು ರಾಯಲ್ ಆಗಿ ತೆರೆಗಪ್ಪಳಿಸಲಿದೆ “ಕುಬೇರ”

ಜೂನ್ 20 ರಂದು ರಾಯಲ್ ಆಗಿ ತೆರೆಗಪ್ಪಳಿಸಲಿದೆ “ಕುಬೇರ” ದುಡ್ಡೇ ದೊಡ್ಡಪ್ಪ, ನ್ಯಾಯ...

ಸಖತ್ ಟ್ರೆಂಡಿಂಗ್ ನಲ್ಲಿದೆ “ಎಲ್ಟು ಮುತ್ತಾ” ಟೀಸರ್

ಸಖತ್ ಟ್ರೆಂಡಿಂಗ್ ನಲ್ಲಿದೆ “ಎಲ್ಟು ಮುತ್ತಾ” ಟೀಸರ್ ಕೊಡಗಿನ ಸ್ವಾದವಿರುವ ವಿಭಿನ್ನ ಚಿತ್ರವಿದು ರಾ.ಸೂರ್ಯ...

ಪ್ರೇಮದ ಕಡಲಲ್ಲಿ “ದೂರ ತೀರ ಯಾನ” : ಕಿವಿ ತಂಪಾಗಿಸ್ತಿದೆ ಶೀರ್ಷಿಕೆ ಗೀತೆ

ಪ್ರೇಮದ ಕಡಲಲ್ಲಿ “ದೂರ ತೀರ ಯಾನ” : ಕಿವಿ ತಂಪಾಗಿಸ್ತಿದೆ ಶೀರ್ಷಿಕೆ...

ಡಿಫರೆಂಟ್ ಆಗಿ ಗಮನ ಸೆಳೀತಿದೆ “ಬ್ರ್ಯಾಟ್” ಟೀಸರ್

ಡಿಫರೆಂಟ್ ಆಗಿ ಗಮನ ಸೆಳೀತಿದೆ “ಬ್ರ್ಯಾಟ್” ಟೀಸರ್ ಡಾರ್ಲಿಂಗ್ ಕೃಷ್ಣ ಹುಟ್ಟಿದ ದಿನಕ್ಕೆ...