- ಫೆ. 21ಕ್ಕೆ ಶ್ರೇಯಸ್, ಪ್ರಿಯಾ ಪ್ರಕಾಶ್ ವಾರಿಯರ್ ನಟಿಸಿರುವ ‘ವಿಷ್ಣುಪ್ರಿಯಾ’ ತೆರೆಗೆ
- ಶ್ರೇಯಸ್ ಕೆ ಮಂಜು ಹಾಗೂ ಪ್ರಿಯಾ ವಾರಿಯರ್ ಅಭಿನಯದ ಕನ್ನಡ ಚಿತ್ರ “ವಿಷ್ಣುಪ್ರಿಯಾ”
- 90 ರ ದಶಕದ ಪ್ರೇಮಕತೆಯ ಕಥಾಹಂದರ ಹೊಂದಿದೆ ಈ ಚಿತ್ರ
ಚಿತ್ರರಂಗಕ್ಕೆ ಕಾಲಿಟ್ಟು ನಟಿಸಿದ್ದ ಮೊದಲ ಚಿತ್ರದಲ್ಲೇ ಕಣ್ಸನ್ನೆ ಬೆಡಗಿ ಎಂದೇ ಫೇಮಸ್ ಆಗಿದ್ದ ಪ್ರಿಯಾ ವಾರಿಯರ್ Priya Varrier ಅವರು ʼವಿಷ್ಣು ಪ್ರಿಯಾʼ Vishnupriya ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಕನ್ನಡದ ಖ್ಯಾತ ನಿರ್ಮಾಪಕ ಕೆ. ಮಂಜು K Manju ಅವರ ಪುತ್ರ ಪಡ್ಡೆಹುಲಿ ಖ್ಯಾತಿಯ ಶ್ರೇಯಸ್ ಮಂಜು Shreyas Manju ನಾಯಕನಾಗಿರುವ ಈ ಸಿನಿಮಾದಲ್ಲಿ ಪ್ರಿಯಾ ನಾಯಕಿ. ಈ ಸಿನಿಮಾದ ಚಿತ್ರೀಕರಣ ಮುಗಿದಿದ್ದು ಫೆ. 21 ಕ್ಕೆ ತೆರೆಯ ಮೇಲೆ ಬರಲಿದೆ.

90 ರ ದಶಕದ ಪ್ರೇಮಕಥೆ
ತೊಂಬತ್ತರ ದಶಕದಲ್ಲಿ ನಡೆಯುವ ಪ್ರೇಮಕಥೆಯನ್ನು ಹೊಂದಿರುವ ಚಿತ್ರಕ್ಕೆ ವಿ.ಕೆ.ಪ್ರಕಾಶ್ ಚಿತ್ರಕಥೆ, ನಿರ್ದೇಶನವಿದೆ. ಚಿತ್ರದ ಎರಡು ಹಾಡುಗಳು ಹೊರಬಂದಿದ್ದು, ‘ಏಳು ಗಿರಿಗಳ ಏಳು ಕಡಲಿನ ಆಚೆ’ ಹಾಡನ್ನು ಶ್ರೀಮುರಳಿ ಬಿಡುಗಡೆ ಮಾಡಿದ್ದಾರೆ. ಹಾಡಿಗೆ ಗೋಪಿಸುಂದರ್ ಸಂಗೀತ ಸಂಯೋಜಿಸಿದ್ದು, ಹರೀಶ್ ಶಿವರಾಮಕೃಷ್ಣನ್ ಧ್ವನಿ, ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ. ʼಸುಮ್ಮನೆ..ಸುಮ್ಮನೆ..ʼ ಎಂಬ ಸಾಹಿತ್ಯದ ಹಾಡನ್ನ ಪ್ರಿಯಾ ವಾರಿಯರ್ ಮತ್ತು ಅಕ್ಬರ್ ಖಾನ್ ಹಾಡಿದ್ದಾರೆ.
ಸಿನಿಮಾ ಹೆಸರಿನ ಹಿಂದೂ ಕತೆಯಿದೆ
ಕೆ.ಮಂಜು ಅವರಿಗೆ ನಟ ವಿಷ್ಣುವರ್ಧನ್ ಎಂದರೆ ತುಂಬ ಇಷ್ಟ. ಹಿಂದೆ ಅವರ ಸಿನಿಮಾಗಳನ್ನೂ ನಿರ್ಮಾಣ ಮಾಡಿದ್ದರು. ಇದೀಗ ಮಗನಿಗಾಗಿ ವಿಷ್ಣುಪ್ರಿಯಾ ಎಂಬ ಹೆಸರಲ್ಲಿ ಸಿನಿಮಾ ಮಾಡಿದ್ದಾರೆ. ಶ್ರೇಯಸ್ ಅವರು ವಿಷ್ಣು ಪಾತ್ರದಲ್ಲಿ ಅಭಿನಯ ಮಾಡಿದ್ದು, ಪ್ರಿಯಾ ವಾರಿಯರ್ ಅವರು ಪ್ರಿಯಾ ಆಗಿಯೇ ನಟಿಸಿದ್ದಾರೆ. ಸಿನಿಮಾಕ್ಕೆ ರವಿ ಶ್ರೀವತ್ಸ ಅವರು ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ವಿನೋದ್ ಭಾರತಿ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ ಇದೆ. ಅಚ್ಯುತ್ ಕುಮಾರ್, ಸುಚೇಂದ್ರ ಪ್ರಸಾದ್ ಸಿನಿಮಾದಲ್ಲಿ ನಟಿಸಿದ್ದಾರೆ.