- ಉಪೇಂದ್ರ ಅಭಿಮಾನಿಗಳಿಗೆ ಗುಡ್ ನ್ಯೂಸ್: ಒಂದೇ ದಿನ ಉಪೇಂದ್ರ ನಟನೆಯ ಎರಡು ಚಿತ್ರಗಳು ರಿಲೀಸ್
- ಈ ಎರಡೂ ಸಿನಿಮಾಗಳು ಬಹುತಾರಾಗಣದ ಸಿನಿಮಾಗಳಾಗಿವೆ
- ಒಂದು “45” ಚಿತ್ರವಾದರೆ ಇನ್ನೊಂದು ಚಿತ್ರ “ಕೂಲಿ”
ಸ್ಯಾಂಡಲ್ ವುಡ್ Sandalwood ನಲ್ಲಿ ಈ ಹಿಂದೆ ಉಪೇಂದ್ರ Upendra ಅಭಿನಯದ “ಕಬ್ಜ” Kabja ಮತ್ತು “ಯುಐ” UI ಚಿತ್ರಗಳು ಒಳ್ಳೆ ಗಳಿಕೆ ಮಾಡಿತ್ತು. ಆದರೆ ಇದಾದ ಬಳಿಕ ಉಪೇಂದ್ರ ಕಾಣೆಯಾಗಿದ್ರು. ಸಾಮಾನ್ಯವಾಗಿ ಸಿನಿಮಾಗಳನ್ನು ತುಂಬಾ ಟೈಂ ತಗೊಂಡು ಯೋಚಿಸಿ ಮಾಡುವ ಉಪೇಂದ್ರ, ಇತ್ತೀಚೆಗೆ ಯಾವ ಮೂವಿಗಳಲ್ಲೂ ಕಾಣಿಸಿಕೊಂಡಿರಲಿಲ್ಲ, ಆದರೆ ಈಗ ಉಪೇಂದ್ರ ಅಭಿನಯದ ಎರಡು ಸಿನಿಮಾಗಳೂ ಕೂಡ ಒಂದೇ ದಿನ ರಿಲೀಸ್ ಆಗುತ್ತಿದೆ. ಹೌದು ಈ ಎರಡೂ ಸಿನಿಮಾಗಳು ಬಹುತಾರಾಗಣದ ಸಿನಿಮಾಗಳಾಗಿವೆ. ಒಂದು “45” Fourtyfive ಚಿತ್ರವಾದರೆ ಇನ್ನೊಂದು ಚಿತ್ರ “ಕೂಲಿ” Kooli. ಈ ಎರಡೂ ಸಿನಿಮಾಗಳು ಆಗಸ್ಟ್ 15 August 15 ರಂದು ಬಿಡುಗಡೆಯಾಗಲಿವೆ.
ಇವರೊಂದಿಗೆ ಸ್ಕ್ರೀನ್ ಹಂಚಿಕೊಂಡಿದ್ದಾರೆ ಉಪೇಂದ್ರ
“45” ಸಿನಿಮಾದಲ್ಲಿ ಉಪೇಂದ್ರ ಅವರು ಶಿವರಾಜ್ ಕುಮಾರ್ Shivaraj Kumar, ರಾಜ್ ಬಿ ಶೆಟ್ಟಿ Raj B Shetty ಜೊತೆ ನಟಿಸಿದ್ದು “ಕೂಲಿ” ಸಿನಿಮಾದಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ Rajanikanth, ಅಕ್ಕಿನೇನಿ ನಾಗಾರ್ಜುನ Akkineni Nagarjuna ಮತ್ತು ಬಾಲಿವುಡ್ ಸ್ಟಾರ್ ನಟ ಅಮಿರ್ ಖಾನ್ Ameer Khan ಜೊತೆಗೆ ತೆರೆಯಲ್ಲಿ ಮಿಂಚಲಿದ್ದಾರೆ. ಎರಡೂ ಸಿನಿಮಾಗಳು ಕೂಡ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿವೆ.
‘45’ ಸಿನಿಮಾ ಅರ್ಜುನ್ ಜನ್ಯ Arjun Janya ನಿರ್ದೇಶನ ಮಾಡಿದ್ದು, ಚಿತ್ರೀಕರಣ ಮುಗಿದಿದೆ. ಕೂಲಿ ಸಿನಿಮಾವನ್ನು ಲೋಕೇಶ್ ಕನಕರಾಜ್ Lokesh Kanakaraj ಅವರು ನಿರ್ದೇಶನ ಮಾಡಿದ್ದು ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಶನ್ ಹಂತದ ಕೆಲಸಗಳು ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಸಿನಿಮಾದ ಪ್ರಚಾರ ಕಾರ್ಯಗಳು ಶುರುವಾಗಲಿದೆ.