- ವಿಶಿಷ್ಟ ಕಥಾಹಂದರದ “ಗ್ರೀನ್” ಶೀಘ್ರದಲ್ಲೇ ತೆರೆಯ ಮೇಲೆ
- ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಸದ್ದುಮಾಡಿರುವ ಸಿನಿಮಾ “ಗ್ರೀನ್”
- ಬಿ.ಎನ್.ಸ್ವಾಮಿ ನಿರ್ಮಾಣದ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ ರಾಜ್ ವಿಜಯ್
ಸೈಕಲಾಜಿಕಲ್ ಥ್ರಿಲ್ಲರ್ ಕಥಾನಕವುಳ್ಳ, ಈಗಾಗಲೇ ರಾಷ್ಟ್ರೀಯ ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಸದ್ದು ಮಾಡಿರುವ “ಗ್ರೀನ್” Green ಚಿತ್ರ ಸದ್ಯದಲ್ಲಿಯೇ ತೆರೆಗಪ್ಪಳಿಸಲಿದೆ. ಈ ಚಿತ್ರವನ್ನು ಬಿ.ಎನ್.ಸ್ವಾಮಿ B.N. Swamy ನಿರ್ಮಿಸಿದ್ದು ತನ್ನೊಳಗಿರುವ ರಕ್ಕಸನಿಂದ ಹೊರಬರುವ ಪ್ರಯತ್ನವನ್ನು ಈ ಚಿತ್ರಕಥೆ ಹೊಂದಿದೆ ಎನ್ನುವ ಸಣ್ಣ ಎಳೆಯನ್ನು ನಿರ್ದೇಶಕ ರಾಜ್ ವಿಜಯ್ Raj Vijay ಅವರು ಈಗಾಗಲೇ ಮಾಧ್ಯಮದ ಮುಂದೆ ಬಿಟ್ಟುಕೊಟ್ಟಿದ್ದಾರೆ.
ಚಿತ್ರದ ಪ್ರಮುಖದ ಪಾತ್ರದಲ್ಲಿ ಖ್ಯಾತ ನಟ ಗೋಪಾಲ ದೇಶಪಾಂಡೆ Gopala Deshapande ನಟಿಸಿದ್ದು, ಬಾಲಾಜಿ ಮನೋಹರ್ Balaji Manohar ಕೂಡ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಉಳಿದಂತೆ ವಿಶ್ವನಾಥ ಮಾಂಡಲಿಕ, ಆರ್ ಜೆ ವಿಕ್ಕಿ, ಶಿವಮಂಜು, ಡಿಂಪಿಪದ್ಮಾ, ಮುರುಡಯ್ಯ, ರಾಮಚಂದ್ರ, ಗಿರೀಶ್ ಚಿತ್ರದ ಪ್ರಮುಖ ಪಾತ್ರವನ್ನು ನಿಭಾಯಿಸಿದ್ದಾರೆ. ಚಿತ್ರ ಯಾವಾಗ ತೆರೆ ಮೇಲೆ ಕಾಣಿಸಲಿದೆ ಎನ್ನುವ ಹಿಂಟ್ ನೀಡಿಲ್ಲವಾದರೂ ಸದ್ಯದಲ್ಲೇ ತೆರೆಯ ಮೇಲೆ ಮಿಂಚುವ ಸುಳಿವನ್ನು ಚಿತ್ರತಂಡ ನೀಡಿದೆ.