ತೆರೆಗೆ ಬರಲು ತಯಾರಾಗಿದೆ ಭಾವನಾತ್ಮಕ ಸಿನಿಮಾ “ನಾನು ಮತ್ತು ಗುಂಡ 2″

Date:

  • ತೆರೆಗೆ ಬರಲು ತಯಾರಾಗಿದೆ ಭಾವನಾತ್ಮಕ ಸಿನಿಮಾ “ನಾನು ಮತ್ತು ಗುಂಡ 2″
  • ರಘು ಹಾಸನ್ ಆಕ್ಷನ್ ಕಟ್ ಹೇಳಿರುವ ಸಿನಿಮಾ
  • ರಾಕೇಶ್ ಅಡಿಗ, ರಚನಾ ಇಂದರ್ ನಾಯಕತ್ವದ ಭಾವನಾತ್ಮಕ ಸಿನಿಮಾ ಇದಾಗಿದೆ.

ಎರಡೂವರೆ ವರ್ಷಗಳ ಹಿಂದೆ ‘ನಾನು ಮತ್ತು ಗುಂಡ’ ಸಿನಿಮಾ‌ ನಿರ್ದೇಶನ‌ ಮಾಡಿದ್ದ ರಘು ಹಾಸನ್ Raghu Hasan ಅವರೇ ಆಕ್ಷನ್ ಕಟ್ ಹೇಳಿರುವ ಆ ಸಿನಿಮಾದ ಮುಂದುವರೆದ ಭಾಗ “ನಾನು ಮತ್ತು ಗುಂಡ 2″ Nanu mattu Gunda 2 ತೆರೆಗೆ ಬರಲು ಸಿದ್ಧವಾಗಿದೆ. ಪೋಯೆಮ್ ಪಿಕ್ಚರ್ಸ್ Poem Pictures ಬ್ಯಾನರ್ ಅಡಿಯಲ್ಲಿ‌ ನಿರ್ಮಾಣ ಆಗಿರೋ ಸಿನಿಮಾಕ್ಕೆ ರಾಕೇಶ್ ಅಡಿಗ Rakesh Adiga ಹಾಗೂ ರಚನಾ ಇಂದರ್ Rachana Inder ನಾಯಕತ್ವ ಇದೆ. ಭಾವನಾತ್ಮಕ ನೆಲೆಗಟ್ಟನ್ನು ಹೊಂದಿರುವ ಸಿನಿಮಾದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದು, ಶೈಲಜಾ ಕಿರಗಂದೂರು ಬಿಡುಗಡೆಗೊಳಿಸಿ ಶುಭಹಾರೈಸಿದ್ದಾರೆ.

ನಾಯಿ ಮತ್ತು ಮಾಲಿಕನ‌ ಅವಿನಾಭಾವ ಸಂಬಂಧದ ಕಥೆ

ಸೋಷಿಯಲ್ ಕನ್ಸರ್ನ್ ಜೊತೆಗೆ ಡಿವೈನ್ ಕಂಟೆಂಟ್ ಹೊಂದಿರುವ ಈ ಚಿತ್ರದ ಮುಖ್ಯ ಕಥಾವಸ್ತು ನಾಯಿ ಮತ್ತದರ ಮಾಲಿಕನ ಅವಿನಾಭಾವ ಸಂಬಂಧ. ಚಿತ್ರದಲ್ಲಿ ಆರು ಹಾಡುಗಳಿದ್ದು ಆರ್.ಪಿ.ಪಟ್ನಾಯಕ್ ಸಂಗೀತ ಸಂಯೋಜನೆ ಇದೆ. ತನ್ವಿಕ್ ಛಾಯಾಗ್ರಹಣ, ರುತ್ವಿಕ್ ಮುರಳೀಧರ್ ಹಿನ್ನೆಲೆ ಸಂಗೀತ, ಕೆ.ಎಂ.ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ತಾರಾಗಣದಲ್ಲಿ ರಾಕೇಶ್ ಅಡಿಗ, ರಚನಾ ಇಂದರ್ ಜೊತೆಯಲ್ಲಿ ಜಿ.ಜಿ. ಮಹಂತೇಶ್, ಶಿವರಾಜ್ ಕೆ.ಆರ್.ಪೇಟೆ, ಬಾಲನಟ ಜೀವನ್ ನಟನೆಯಿದೆ. ಕನ್ನಡ ಮಾತ್ರವಲ್ಲದೇ ಒಟ್ಟು ಐದು ಭಾಷೆಗಳಲ್ಲಿ ಚಿತ್ರ ಮೇ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ ಲಿಸ್ಟ್

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ...

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ ಕನ್ನಡ ಚಿತ್ರಗಳು – These new Kannada movies are available on OTT

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ...

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ – The Remarkable Journey of “Toxic”

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ ಸಾಮಾನ್ಯ...

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ – How to submit your short film to a film festival

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ...