- ಕಾಂತಾರ 1 ರ ನಾಯಕಿ ಇವರೇ ಅಂತಿದ್ದಾರೆ ಫ್ಯಾನ್ಸ್ : ಇನ್ನೂ ಏನೇನಿದೆ ಗುಸು ಗುಸು?
- ಆದರೆ ಕಾಂತಾರ 1 ನಲ್ಲಿ ಹೀರೋಯಿನ್ ಪಾತ್ರವೇ ಇಲ್ಲ ಎಂಬ ಸುದ್ದಿಯೂ ಇದೆ
- ರಿಷಬ್ ಶೆಟ್ಟಿ ಅವರನ್ನು ಹೊರತುಪಡಿಸಿ ಯಾರೆಲ್ಲಾ ನಟಿಸಿದ್ದಾರೆ ಎಂದು ಚಿತ್ರತಂಡ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ
“ಕಾಂತಾರ ಚಾಪ್ಟರ್ 1” Kanthara Chapter 1 ಚಿತ್ರತಂಡ ಈಗಾಗಲೇ ಶೂಟಿಂಗ್ ಮುಗಿಸಿದ್ದು ಪ್ರೊಡಕ್ಶನ್ ಹಂತದ ಕೆಲಸಗಳು ಪ್ರಗತಿಯಲ್ಲಿರುವ ಸುದ್ದಿ ನಿಮಗೆಲ್ಲಾ ಗೊತ್ತೇ ಇದೆ. ಆದರೆ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ Rishabh Shetty ಅವರನ್ನು ಹೊರತು ಪಡಿಸಿ ಬೇರೆ ಯಾರೆಲ್ಲಾ ನಟಿಸಿದ್ದಾರೆ ಎನ್ನುವ ಗುಟ್ಟನ್ನು ಚಿತ್ರತಂಡ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ.ಇಷ್ಟು ಸಿಕ್ರೆಟ್ ಇಟ್ಟಿರುವ ಕಾರಣ ಚಿತ್ರದ ಕುರಿತು ಇನ್ನಷ್ಟು ನಿರೀಕ್ಷೆ ಮೂಡಿಸಿ ಜಾಸ್ತಿ ಜನ ಚಿತ್ರ ನೋಡುವಂತಾಗಲಿ ಎನ್ನುವುದೇ ಆಗಿದೆ. ಆದರೆ ಇತ್ತೀಚೆಗೆ ಚಿತ್ರತಂಡ ರಿಲೀಸ್ ಮಾಡಿದಂತಹ ಮೇಕಿಂಗ್ ವಿಡಿಯೋದಲ್ಲಿ ತೋರಿಸಲಾಗಿರುವ ಡ್ರೋಣ್ ಶಾಟ್ ಒಂದರಲ್ಲಿ ನಟಿ ರುಕ್ಮಿಣಿ ವಸಂತ್ Rukmini vasanth ಮಸುಕಾಗಿ ಕಾಣಿಸಿದ್ದು ಅವರೇ ಕಾಂತಾರ 1 ರ ಹೀರೋಯಿನ್ ಆಗಿರಬಹುದು ಎನ್ನುವ ಗುಲ್ಲು ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿದೆ. ಫ್ಯಾನ್ಸ್ ಚರ್ಚೆಗೆ ಒಂದು ವಸ್ತುವಾಗಿದೆ. ಆದರೆ ಕಾಂತಾರ 1 ನಲ್ಲಿ ಹೀರೋಯಿನ್ ಪಾತ್ರವೇ ಇಲ್ಲ ಎನ್ನುತ್ತಿದೆ ಇನ್ನೊಂದು ಗುಸುಗುಸು. ಇದು ಕಾಂತಾರ ಸಿನಿಮಾದ ನಾಯಕ ಶಿವುನ ಪೂರ್ವ ಕತೆ ಎನ್ನಲಾಗುತ್ತಿದೆ ಹಾಗಾಗಿ ಹೀರೋಯಿನ್ ಇಲ್ಲಿಲ್ಲ ಎನ್ನುವ ಸುದ್ದಿ ಕೂಡ ಹಬ್ಬಿದೆ.
ಇನ್ನುಳಿದಂತೆ ಕರಾವಳಿಯ ಹಾಸ್ಯ ನಟ ರಾಕೇಶ್ ಪೂಜಾರಿ Rakesh Poojari, ಮಲಯಾಳಂ ನಟ ಜಯರಾಂ ಚಿತ್ರದಲ್ಲಿ ನಟಿಸಿದ್ದಾರೆ ಎನ್ನುವ ವದಂತಿ ಕೂಡ ಇದೆ. ಆದ್ರೆ ಯಾವುದು ಅಧಿಕೃತವಾಗಿಲ್ಲ. ಕರಾವಳಿ ರಂಗಭೂಮಿಯ ನಟ ನಟಿಯರು ಕಾಂತಾರ ಚಾಪ್ಟರ್ 1 ರಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಅದೇನೇ ಆಗಲಿ ಕಾಂತಾರ ಚಾಪ್ಟರ್ 1 ಚಿತ್ರತಂಡ ಎಲ್ಲಿಯೂ ಕಲಾವಿದರ ಕುರಿತು ಸುಳಿವು ಬಿಟ್ಟುಕೊಡದೇ ಇದ್ದದ್ದರಿಂದ ಪ್ರೇಕ್ಷಕನಲ್ಲಿ ಚಿತ್ರದ ಕುರಿತು ಕುತೂಹಲ ಕೊಂಚ ಹೆಚ್ಚೇ ಆಗಿದೆ, ಇದು ಈ ಚಿತ್ರದ ಯಶಸ್ವಿಗೆ ಪ್ಲಸ್ ಪಾಯಿಂಟ್ ಕೂಡ ಆಗಬಹುದು.