- ನೀವೂ ಬಿಗ್ ಬಾಸ್ ಮನೆಯೊಳಗೆ ಹೋಗಬೇಕಾದ್ರೆ ಹೀಗೆ ಮಾಡಿ
- ಈ ಬಾರಿಯ ಬಿಗ್ ಬಾಸ್ ಮನೆಗೆ ಗೆ ಜನಸಾಮಾನ್ಯರಿಗೂ ಎಂಟ್ರಿ ಇದೆ.
- ಕಲರ್ಸ್‌ಕನ್ನಡ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ.
ಇದೇ ಸೆ. 28 ರಿಂದ ಆರಂಭವಾಗಲಿರುವ ಕಲರ್ಸ್ ಕನ್ನಡ Colors Kannada ವಾಹಿನಿಯ ಫೇಮಸ್ ರಿಯಾಲಿಟಿ ಷೋ ಬಿಗ್ ಬಾಸ್ Bigboss ನ 12 ನೇ ಸೀಸನ್ ಗೆ ಕ್ಷಣಗಣನೆ ಪ್ರಾರಂಭವಾಗಿದೆ. ಶೋ ಅನ್ನು ಈ ಬಾರಿ ಕಿಚ್ಚ ಸುದೀಪ್ Kiccha Sudeep ಅವರೇ ಹೋಸ್ಟ್ ಮಾಡಲಿರುವುದು ಎಲ್ಲರಿಗೂ ತಿಳಿದಿದೆ. ಆದರೆ ಯಾವೆಲ್ಲಾ ಕಂಟೆಸ್ಟೆಂಟ್ ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಅನ್ನೋ ವಿಷ್ಯ ಮಾತ್ರ ಇನ್ನೂ ಸಸ್ಪೆನ್ಸ ಆಗೇ ಉಳಿದಿದೆ. ಇದ್ರ ಮಧ್ಯೆ ಈಗ ಇನ್ನೊಂದು ಕುತೂಹಕಾರಿ ಮಾಹಿತಿಯನ್ನು ಕಲರ್ಸ್ ಕನ್ನಡ ಅಧಿಕೃತವಾಗಿ ತಿಳಿಸಿದೆ.
ಸ್ಪರ್ಧಿಯಾಗಿ ಅಲ್ಲ, ಅತಿಥಿಯಾಗಿ ಜನಸಾಮಾನ್ಯರಿಗೆ ಎಂಟ್ರಿ
ಇತ್ತೀಚೆಗಷ್ಟೆ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ದಿನ ಬಿಗ್ ಬಾಸ್ ಕನ್ನಡ ಸೀಸನ್ 12ರ ಮೊದಲ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿತು. ಈಗ ಬಿಡುಗಡೆಯಾಗಿರುವ ವೀಡಿಯೋದಲ್ಲಿ “ಪ್ರೀತಿಯ ಕನ್ನಡಿಗರಿಗೆ ಒಂದು ಅತಿದೊಡ್ಡ ಅವಕಾಶ. ಸೋಮವಾರದಿಂದ ಶುಕ್ರವಾರ ಸಂಜೆ 6ರಿಂದ ರಾತ್ರಿ 10:30ರ ತನಕ ಕಲರ್ಸ್ ಕನ್ನಡ ಸೀರಿಯಲ್ಸ್ ನೋಡಿ. ಪ್ರತೀ ಸೀರಿಯಲ್‌ನಲ್ಲಿಯೂ ಕೇಳುವ ಎಲ್ಲಾ ಪ್ರಶ್ನೆಗಳಿಗೂ ಜಿಯೋ ಹಾಟ್‌ಸ್ಟಾರ್ ನಲ್ಲಿ ಸರಿಯಾಗಿ ಉತ್ತರಿಸಿ. ಲಕ್ಕಿ ವಿನ್ನರ್ಸ್‌ಗೆ ಬಿಗ್ ಬಾಸ್ ಮನೆಗೆ ಅತಿಥಿಗಳಾಗಿ ಹೋಗುವ ಸೂಪರ್ ಡೂಪರ್ ಚಾನ್ಸ್” ಎಂದು ವಿಡಿಯೋದಲ್ಲಿ ಹೇಳಲಾಗಿದೆ.