- ನೈಜ ಕಥೆ ಆಧಾರಿತ ರೋಚಕ ಸಿನಿಮಾ “ಜಾಕಿ 42”
- ನಿರ್ದೇಶಕ ಗುರುತೇಜ್ ಶೆಟ್ಟಿ ಹಾಗೂ ನಟ ಕಿರಣ್ ರಾಜ್ ಜೋಡಿಯ ಚಿತ್ರ “ಜಾಕಿ 45”
- ಕುದುರೆ ರೇಸ್ ಹಾಗೂ ಬೆಟ್ಟಿಂಗ್ ಪ್ರಪಂಚದ ನೈಜ ಚಿತ್ರಣ ಬಿಚ್ಚಿಡುವ ಪ್ರಯತ್ನ
ಗೋಲ್ಡನ್ ಗೇಟ್ ಸ್ಟುಡಿಯೋಸ್ನ Golden Gate Studios ಬ್ಯಾನರ್ ನಲ್ಲಿ ಭಾರತಿ ಸತ್ಯನಾರಾಯಣ್ Bharathi Sathyanarayan ನಿರ್ಮಾಣ ಮಾಡುತ್ತಿರುವ ಪೂರ್ಣ ಪ್ರಮಾಣದ ಕಮರ್ಷಿಯಲ್ ಚಿತ್ರ “ಜಾಕಿ 42”. Jocky 42 ಈ ಹಿಂದೆ ರಾನಿ ಚಿತ್ರದಲ್ಲಿ ಜೊತೆಗೂಡಿ ಮಿಂಚಿದ್ದ ನಿರ್ದೇಶಕ ಗುರುತೇಜ್ ಶೆಟ್ಟಿ Guruthej Shetty ಮತ್ತು ನಟ ಕಿರಣ್ ರಾಜ್ Kiran Raj ಜೋಡಿಯ ಪ್ರಯತ್ನವೇ ಈ ಚಿತ್ರ. ಬೆಂಗಳೂರು, ಮೈಸೂರು ಮತ್ತು ವಿದೇಶಗಳಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದ್ದು, ಇತ್ತೀಚೆಗೆ ಟೈಟಲ್ ಮತ್ತು ಪೋಸ್ಟರ್ ಬಿಡುಗಡೆಯಾಗಿದ್ದು, ಎಲ್ಲರ ಮನಸೆಳೆಯುತ್ತಿದೆ.
ರೇಸ್ ಪ್ರಪಂಚದ ರೋಚಕ ಕಥೆ
ಕುದುರೆ ರೇಸ್ ಫೀಲ್ಡ್ ಗೆ ಬರುವ ಒಬ್ಬ ಸಾಮಾನ್ಯ ಹುಡುಗ, ಅಲ್ಲಿ ಎದುರಿಸುವ ಸವಾಲುಗಳು, ಅಲ್ಲಿ ರಾಜಕೀಯಗಳು ಹಾಗೂ ಅದನ್ನು ಮೆಟ್ಟಿ ನಿಂತು ಆತ ಗೆಲ್ಲುವ ಬಗೆ ಮುಂತಾದ ಸಂಗತಿಗಳನ್ನು ಒಳಗೊಂಡ ರೋಚಕ, ಕುತೂಹಲಕಾರಿ ಕಥಾ ಹಂದರ ಹೊಂದಿದೆ “ಜಾಕಿ 45”. “ಇದು ಕಮರ್ಷಿಯಲ್ ಚಿತ್ರವಾಗಿದ್ದು, ಕುದುರೆ ರೇಸ್ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ. ಇದರಲ್ಲಿ ಲವ್, ಫ್ಯಾಮಿಲಿ ಸೆಂಟಿಮೆಂಟ್, ಹಾಸ್ಯ ಎಲ್ಲವೂ ಇವೆ. ಮುಖ್ಯವಾಗಿ ಈವರೆಗೆ ಅತಿ ಕಡಿಮೆ ತೋರಿಸಲಾಗಿರುವ ಕುದುರೆ ರೇಸ್ ಪ್ರಪಂಚದ ಸಂಪೂರ್ಣ ಚಿತ್ರಣ ಈ ಚಿತ್ರದಲ್ಲಿ ಕಾಣಬಹುದು” ಎಂದು ಹೇಳಿದ್ದಾರೆ ನಿರ್ದೇಶಕ ಗುರುತೇಜ್.
ಹಲವು ಸಮಯಗಳ ರಿಸರ್ಚ್ ಬಳಿಕ ಇದೀಗ ಸ್ಕ್ರಿಪ್ಟ್ ಕೊನೆಯ ಹಂತದಲ್ಲಿದ್ದು, ಮೇ 15 ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ‘ಬ್ಲಿಂಕ್’ ಸಿನಿಮಾ ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ಹಾಗೂ ‘ಕನ್ನಡತಿ’ ಸೇರಿದಂತೆ ಹಲವು ಧಾರಾವಾಹಿಗಳಿಗೆ ಸಾಹಿತ್ಯ, ಸಂಭಾಷಣೆ, ಚಿತ್ರಕಥೆ ಬರಹಗಾರರಾಗಿ ಕೆಲಸ ಮಾಡಿರುವ ವಿಕಾಸ್ ನೇಗಿಲೋಣಿ ಹಾಗೂ ಸಶಕ್ತ ಬರಹಗಾರರ ತಂಡ ಕೆಲಸ ಮಾಡುತ್ತಿದೆ. ರಾಘವೇಂದ್ರ ಬಿ ಕೋಲಾರ ಛಾಯಾಗ್ರಹಣವನ್ನು ನಿಭಾಯಿಸುತ್ತಿದ್ದು, ಸತೀಶ್ ಕಲಾ ನಿರ್ದೇಶನ ಮತ್ತು ಆರ್.ಬಿ. ಉಮೇಶ್ ಸಂಕಲನ ಚಿತ್ರಕ್ಕಿರಲಿದೆ.