ಈ ವರ್ಷ ಬಿಡುಗಡೆಯಾಗಿ ವಿಭಿನ್ನ ಕಂಟೆಂಟ್ ಗಳಿಂದ ಸದ್ದು ಮಾಡಿದ ಚಿತ್ರಗಳಿವು – Kannada Movies released in 2025

Date:

  • ಈ ವರ್ಷ ಬಿಡುಗಡೆಯಾಗಿ ವಿಭಿನ್ನ ಕಂಟೆಂಟ್ ಗಳಿಂದ ಸದ್ದು ಮಾಡಿದ ಚಿತ್ರಗಳಿವು
  • Kannada Movies released in 2025
  • ಪ್ರೇಕ್ಷಕರನ್ನು ಕಾಡಿಸುವ ವಿಭಿನ್ನ ಕತೆಯುಳ್ಳ ಸಿನಿಮಾಗಳು
  • ಹೊಸ ಪ್ರತಿಭೆಗಳ ಕ್ರಿಯಾಶೀಲ ಪ್ರಯತ್ನವಿದು

ಏಳುಮಲೆ Elumale:

ಪುನೀತ್ ರಂಗಸ್ವಾಮಿ Puneeth Rangaswami ನಿರ್ದೇಶನದ ಈ ಚಿತ್ರ ಪ್ರೀತಿ ಮತ್ತು ಥ್ರಿಲ್ಲರ್ ಕಥಾಹಂದರ ಚಿತ್ರವಾಗಿತ್ತು. ಕರ್ನಾಟಕ-ತಮಿಳುನಾಡು ಗಡಿಯಲ್ಲಿ ನಡೆಯುವ ಕತೆ ಇಲ್ಲಿದ್ದು ಚಿತ್ರವೂ ಕತೆಯಿಂದಲೇ ಪ್ರೇಕ್ಷಕರ ಗಮನ ಸೆಳೆದಿತ್ತು.

ಮಿಥ್ಯ: Mithya

Sumanth Bhat ಸುಮಂತ್ ಭಟ್ ನಿರ್ದೇಶನದ ಈ ಚಿತ್ರ 11 ವರ್ಷದ ಹುಡುಗನೊಬ್ಬನ ಬದುಕಿನ ಕತೆ. ನಟ ರಕ್ಷಿತ್ ಶೆಟ್ಟಿ Rakshith Shetty ಅವರ ಪರಂವಾ ಸ್ಟುಡಿಯೋಸ್ ಅಡಿ ಈ ಚಿತ್ರ ಮೂಡಿ ಬಂದಿದ್ದು ವಿಷಯಾಧಾರಿತ ಕತೆ ಒಳಗೊಂಡಿತ್ತು.

ದಸ್ಕತ್: Daskath

ತುಳುನಾಡಿನ ಗ್ರಾಮೀಣ ಬದುಕು, ಸಂಘರ್ಷಗಳನ್ನು ತೆರೆಯ‌ ಮೇಲೆ ತಂದ ದಸ್ಕತ್ ಚಿತ್ರ ತುಳು ಮತ್ತು ಕನ್ನಡದಲ್ಲೂ ರಿಲೀಸ್ ಆಗಿ ಸದ್ದು ಮಾಡಿತ್ತು. ಅನೀಶ್ ಪೂಜಾರಿ Anish Poojary ಈ ಸಿನಿಮಾದ ಡೈರೆಕ್ಟರ್.

ವೀರಚಂದ್ರಹಾಸ: Veera Chandrahasa

ಯಕ್ಷಗಾನ ಪ್ರಸಂಗವನ್ನು ಪ್ರಪಥಮ ಬಾರಿಗೆ ಬೆಳ್ಳಿತೆರೆಗೆ ತಂದ ಈ ಸಿನಿಮಾದ ನಿರ್ದೇಶಕ ರವಿ ಬಸ್ರೂರು Ravi Basroor .ಖ್ಯಾತ ಯಕ್ಷಗಾನ ಕಲಾವಿದರೇ ಈ ಚಿತ್ರದಲ್ಲಿ ನಟಿಸಿ ಸಾಂಸ್ಕೃತಿಕ ಲೋಕದ ಗಮನ ಸೆಳೆದಿದ್ದರು.

ಪದ್ಮಗಂಧಿ: Padmagandhi

ಕಮಲದ ಹೂವು, ದಳಗಳು, ಬೀಜಗಳು, ದಂಟು ಇತ್ಯಾದಿಗಳನ್ನು ಕೇಂದ್ರವಾಗಿಟ್ಟುಕೊಂಡು ಹೆಣೆದ ಚಿತ್ರವಿದು. ಸುಚೇಂದ್ರ ಪ್ರಸಾದ್ Suchendra Prasad ಈ ಚಿತ್ರದ ನಿರ್ದೇಶಕ.ಒಂದು ವಿಷಯಾದಾರಿತ ಚಿತ್ರವಾಗಿ ಪದ್ಮಗಂಧಿ ಗಮನ ಸೆಳೆದಿತ್ತು.

ಎಲ್ಟು-ಮುತ್ತಾ: Eltu Mutta

ಇಬ್ಬರು ಸ್ನೇಹಿತ ನಡುವೆ ನಡೆಯುವ ಕತೆ ಇದಾಗಿದ್ದು,ಆಸಕ್ತಿಕರ ಸಿನಿಮಾ ಇದಾಗಿದೆ. ರಾ ಸೂರ್ಯ Ra Surya ಚಿತ್ರದ ನಿರ್ದೇಶಕರು. ಕೊಡಗಿನ ಚಿತ್ರಣ ಈ‌ ಚಿತ್ರದಲ್ಲಿ‌ ಗಮನ ಸೆಳೆಯುವಂತಿದೆ.

ಭಾವ ತೀರ ಯಾನ: Bhava Theera Yana

ಮಯೂರ ಅಂಬೇಕಲ್ಲು Mayur Ambekallu ಮತ್ತು ತೇಜಸ್‌ ಕಿರಣ್‌ Thejas Kiran ನಿರ್ದೇಶಿಸಿದ ಈ ಚಿತ್ರ, ಯುವಜನತೆಯ ಭಾವನೆ, ಪ್ರೀತಿ, ಹಾಡು, ಎಲ್ಲವೂ ಇಲ್ಲಿದೆ. ಭಾವಪ್ರಧಾನ ಚಿತ್ರ ಇದಾಗಿದ್ದು ಹೊಸ ಪ್ರತಿಭೆಗಳ ಪ್ರಯತ್ನವಾಗಿದೆ.

ತಿಮ್ಮನ ಮೊಟ್ಟೆಗಳು: Thimmana Mottegalu

ಮಲೆನಾಡಿನ ಸುಂದರ ಕತೆಯಿರುವ ಈ ಚಿತ್ರವನ್ನು ನಿರ್ದೇಶಿಸಿದ್ದು ರಕ್ಷಿತ್ ತೀರ್ಥಹಳ್ಳಿ. Rakshith Thirthahalli ಪ್ರಕೃತಿ, ಸಂಘರ್ಷ, ಸಂಬಂಧ ಎಲ್ಲವೂ ಇಲ್ಲಿದೆ. ಈ ಚಿತ್ರದ ಬಹಳಷ್ಟು ಸಿನಿಮೋತ್ಸವಗಳಲ್ಲೂ ಮೆಚ್ಚುಗೆ ಪಡೆದಿತ್ತು.

ಅಜ್ಞಾತವಾಸಿ:

Ajnathavasi ನಿಗೂಢ ಕಥಾ ಹಂದರವುಳ್ಳ ಚಿತ್ರ ಇದಾಗಿತ್ತು. ತನ್ನ ವಿಶಿಷ್ಟ ರೋಚಕತೆಯಿಂದ ಪ್ರೇಕ್ಷಕರನ್ನು ಕಾಡಿಸಿದ ಈ ಚಿತ್ರದಲ್ಲಿ ನಟ ರಂಗಾಯಣ ರಘು ಪಾತ್ರ ಪ್ರಮುಖವಾಗಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಸಂಕ್ರಾಂತಿ ಹಬ್ಬದ ಸಡಗರಕ್ಕೆ ಈ ಸಿನಿಮಾ ಹಾಡುಗಳನ್ನು ಟ್ಯೂನ್ ಮಾಡ್ಕೊಳ್ಳಿ

ಸಂಕ್ರಾಂತಿ ಹಬ್ಬದ ಸಡಗರಕ್ಕೆ ಈ ಸಿನಿಮಾ ಹಾಡುಗಳನ್ನು ಟ್ಯೂನ್ ಮಾಡ್ಕೊಳ್ಳಿ ಹಿಗ್ಗಿ ನಲಿದಾಡಿಸುವ...

ಆಸ್ಕರ್ ವೇದಿಕೆಗೆ ಬಂತು ‘ಮಹಾವತಾರ್ ನರಸಿಂಹ’ ಹಾಗೂ ‘ಕಾಂತಾರ: ಅಧ್ಯಾಯ 1’

ಆಸ್ಕರ್ ವೇದಿಕೆಗೆ ಬಂತು ‘ಮಹಾವತಾರ್ ನರಸಿಂಹ’ ಹಾಗೂ ‘ಕಾಂತಾರ: ಅಧ್ಯಾಯ 1’ ಭಾರತೀಯ...

ಓಟಿಟಿಯಲ್ಲಿ ರಿಲೀಸಾಗಿದೆ ಕನ್ನಡದ ಈ ಸಿನಿಮಾಗಳು

ಓಟಿಟಿಯಲ್ಲಿ ರಿಲೀಸಾಗಿದೆ ಕನ್ನಡದ ಈ ಸಿನಿಮಾಗಳು ಹೊಸ ವರ್ಷಕ್ಕೆ ಮನರಂಜನೆಯ ಸವಿಯೂಟ ಓಟಿಟಿಯಲ್ಲಿ...

New Year Kannada Party Songs List – ಹೊಸವರ್ಷ, ಕ್ರಿಸ್ ಮಸ್ ಪಾರ್ಟಿಗಳಿಗೆ ಈ ಹಾಡುಗಳು ಜೊತೆಯಾದ್ರೆ ಫೀಲೇ ಬೇರೆ

ಹೊಸವರ್ಷ, ಕ್ರಿಸ್ ಮಸ್ ಪಾರ್ಟಿಗಳಿಗೆ ಈ ಹಾಡುಗಳು ಜೊತೆಯಾದ್ರೆ ಫೀಲೇ ಬೇರೆKannada...