- “ಕಾಂತಾರ ಚಾಪ್ಟರ್ 1” ನ ನಾಯಕಿಯ ಫಸ್ಟ್ ಲುಕ್ ರಿಲೀಸ್ : ಇವರೇ ನೋಡಿ ಕಾಂತಾರದ ಆ “ಮಹಾರಾಣಿ”
- ಫಸ್ಟ್ ಲುಕ್ ನಲ್ಲಿ ನಾಯಕಿ ರುಕ್ಮಿಣಿ ವಸಂತ್ ಮಿಂಚಿದ್ದಾರೆ.
- ಇನ್ನಷ್ಟು ಅಪ್ಡೇಟ್ ಗಳನ್ನು ಹೊಂಬಾಳೆ ಫಿಲಂಸ್ ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ಅಂತೂ ಇಂತೂ ಭಾರೀ ಕುತೂಹಲ ಕೆರಳಿಸಿದ್ದ “ಕಾಂತಾರ ಚಾಪ್ಟರ್ 1” Kanthara Chapter 1 ಚಿತ್ರದ ನಾಯಕಿ Movie Heroine ಯಾರು? ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿಯೇ ಬಿಟ್ಟಿದೆ. ಈ ಕುರಿತು ಅಧೀಕೃತವಾಗಿ ಚಿತ್ರ ನಿರ್ಮಾಣ ಸಂಸ್ಥೆ ಅಚ್ಚರಿಯ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಹೌದು, “ಕಾಂತಾರ ಚಾಪ್ಟರ್ 1” ನ ಫಸ್ಟ್ ಲುಕ್ ನಲ್ಲಿ ನಾಯಕಿ ರುಕ್ಮಿಣಿ ವಸಂತ್ Rukmini Vasanth ಮಿಂಚಿದ್ದಾರೆ. ಇವರೇ ಕಾಂತಾರ ಚಾಪ್ಟರ್ 1 ನ ನಾಯಕಿ.
ನಿಜವಾಯ್ತು ಗಾಳಿಸುದ್ದಿ
ವರಮಹಾಲಕ್ಷ್ಮಿ ಹಬ್ಬದ ದಿನವೇ ಚಿತ್ರದ ನಾಯಕಿ ರುಕ್ಮಿಣಿ ವಸಂತ್ ನಿರ್ವಹಿಸಿರೋ ಪಾತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ Hombale Films ತನ್ನ ಅಧಿಕೃತ ಪೇಜ್ ನಲ್ಲಿ ಫಸ್ಟ್ ಲುಕ್ ಪೋಸ್ಟರ್ ನ್ನು ಶೇರ್ ಮಾಡಿಕೊಂಡಿದೆ. ಕೆಲವು ಸಮಯದ ಹಿಂದೆ ರುಕ್ಮಿಣಿ ವಸಂತ್ ಅವರೇ “ಕಾಂತಾರ ಚಾಪ್ಟರ್ 1” ಚಿತ್ರಕ್ಕೆ ನಾಯಕಿ ಎನ್ನುವ ಗುಸು ಗುಸು ಸುದ್ದಿ ಇತ್ತು. ಆ ಗಾಳಿ ಸುದ್ದಿ ಈಗ ನಿಜವಾಗಿದೆ.
ಮಹಾರಾಣಿಯ ಪಾತ್ರದಲ್ಲಿ…
“ಕಾಂತಾರ ಚಾಪ್ಟರ್ 1” ಚಿತ್ರದಲ್ಲಿ ರುಕ್ಮಿಣಿ ವಸಂತ್, ಮಹಾರಾಣಿಯ ಪಾತ್ರವನ್ನು ನಿರ್ವಹಿಸಿದ್ದು ಇದೀಗ ಬಿಡುಗಡೆ ಮಾಡಿರುವ ಫಸ್ಟ್ ಲುಕ್ ನಲ್ಲಿ ಮಹಾರಾಣಿಯ ರೂಪದಲ್ಲಿಯೇ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದಾರೆ. ಕನಕವತಿ ಹೆಸರಿನ ಪಾತ್ರವನ್ನು ರುಕ್ಮಿಣಿ ವಸಂತ್ ನಿರ್ವಹಿಸಿದ್ದು ಕನಕವತಿ ಹೆಸರನ್ನೂ ಕೂಡ ಪೋಸ್ಟರ್ ನಲ್ಲಿ ಹಂಚಿಕೊಳ್ಳಲಾಗಿದೆ. “ನಮ್ಮ ಚಿತ್ರದ ಕನಕವತಿಯನ್ನ ನಿಮ್ಮ ಮುಂದೆ ಪರಿಚಯಿಸುತ್ತಿದ್ದೇವೆ” ಅಂತಲೇ ಹೊಂಬಾಳೆ ಸಂಸ್ಥೆ ಫಸ್ಟ್ ಲುಕ್ ರಿಲೀಸ್ ಮಾಡಿದೆ. ಮುಂದಿನ ಕೆಲವು ದಿನಗಳಲ್ಲಿ “ಕಾಂತಾರ ಚಾಪ್ಟರ್ 1” ಬಗ್ಗೆ ಇನ್ನಷ್ಟು ಅಪ್ಡೇಟ್ ಗಳನ್ನು ಹೊಂಬಾಳೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ.