- ಕಾರ್ ರೇಸ್ ಕ್ಷೇತ್ರಕ್ಕೆ ಧುಮುಕಿದ್ರು ಕಿಚ್ಚ ಸುದೀಪ್: ಬಂತು “ಕಿಚ್ಚಾಸ್ ಕಿಂಗ್ಸ್”
- ನಟ ಕಿಚ್ಚ ಸುದೀಪ್ ಇದೀಗ ಸಿನಿಮಾದಾಚೆ ಯೋಚಿಸಿ ಸುದ್ದಿಯಲ್ಲಿದ್ದಾರೆ.
- ಸುದೀಪ್ ಇಂಡಿಯನ್ ಕಾರ್ ರೇಸ್ ಬೆಂಗಳೂರು ತಂಡವನ್ನು ಖರೀದಿಸಿ “ಕಿಚ್ಚಾಸ್ ಕಿಂಗ್ಸ್” ಎನ್ನುವ ಹೆಸರಿಡಲಾಗಿದೆ.
ನಟ ಕಿಚ್ಚ ಸುದೀಪ್ ಇದೀಗ ಸಿನಿಮಾದಾಚೆ ಯೋಚಿಸಿ ಸುದ್ದಿಯಲ್ಲಿದ್ದಾರೆ. ಇದು ಅವರ ಸಿನಿಮಾ ಅನೌನ್ಸ್ ಮೆಂಟ್ ಅಲ್ಲ, ಇದು ಅವರು ಖರೀದಿಸಿದ ಹೊಸ ಕಾರ್ ರೇಸ್ ತಂಡದ ಅನೌನ್ಸ್ ಮೆಂಟ್.
ಹೌದು ನಟ ಸುದೀಪ್ ಇಂಡಿಯನ್ ಕಾರ್ ರೇಸ್ ಬೆಂಗಳೂರು ತಂಡವನ್ನು ಖರೀದಿಸಿದ್ದಾರೆ. ಅವರ ಮಾಲೀಕತ್ವದ ಆ ತಂಡಕ್ಕೆ ಕಿಚ್ಚಾಸ್ ಕಿಂಗ್ಸ್ ಎನ್ನುವ ಹೆಸರಿಡಲಾಗಿದೆ.
ಆಗಸ್ಟ್ ತಿಂಗಳಲ್ಲಿ ಈ ರೇಸ್ ಟೂರ್ನಮೆಂಟ್ ಆರಂಭವಾಗಲಿದ್ದು ಬೆಂಗಳೂರು ಕಡೆಯಿಂದ ಸುದೀಪ್ ಮಾಲಿಕರಾಗಿರುವ ಕಿಚ್ಚಾಸ್ ಕಿಂಗ್ಸ್ ತಂಡ ಮಿಂಚಲಿದೆ. ಉಳಿದಂತೆ ಈ ರೇಸ್ ನಲ್ಲಿ ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಚೆನ್ನೈ, ಗೋವಾ ಫ್ರಾಂಚೈಸಿಯ ತಂಡಗಳೂ ಮಿಂಚಲಿವೆ. ಎಲ್ಲವೂ ಕಾರ್ ರೇಸ್ ಕ್ಷೇತ್ರದ ಶಕ್ತಿಶಾಲಿ ತಂಡಗಳು ಎಂದು ಹೇಳಲಾಗುತ್ತಿದೆ. ಇದೊಂದು ಸೆಲೆಬ್ರಿಟಿಗಳ ಸಮ್ಮಿಲನದ ದೊಡ್ಡ ರೇಸ್ ಆಗಲಿದ್ದು ಭಾರತದ ಸಿನಿಮಾ ಮತ್ತು ಕ್ರೀಡಾತಾರೆಯರೂ ಈ ರೇಸ್ ನಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಈಗಾಗಲೇ ಸುದೀಪ್ ಅವರ ತಂಡದ ಲೋಗೋ ಬಿಡುಗಡೆಯಾಗಿದೆ. ಸುದೀಪ್ ಅವರು ಸ್ವತಃ ಕಾರು ಮತ್ತು ಕಾರ್ ಕೇಸ್ ನ ಕುರಿತು ಪ್ರೀತಿ ಹೊಂದಿದ್ದು ಆ ಕಾರಣಕ್ಕಾಗಿಯೇ ಕಾರ್ ರೇಸ್ ತಂಡಕ್ಕೆ ಮಾಲಿಕರಾಗಿದ್ದಾರೆ. ಅವರ ಈ ಹೊಸ ಅವತಾರ ಅವರ ಅಭಿಮಾನಿಗಳಿಗೆ ಗೂಡ್ ನ್ಯೂಸ್ ಆಗಿದ್ದಂತೂ ಸತ್ಯ.