- ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ”
- ಅಕ್ಟೋಬರ್ 31 ಕ್ಕೆ ಬಹುನಿರೀಕ್ಷಿತ ಚಿತ್ರ “ಮಾರುತ” ರಿಲೀಸ್
- ಅದ್ದೂರಿ ತಾರಾಗಣವಿರುವ ಆಕ್ಷನ್ ಥ್ರಿಲ್ಲರ್ ಕಥಾನಕ
ಆಕ್ಷನ್ ಥ್ರಿಲ್ಲರ್ ಕಥಾಹಂದರವಿರುವ, ಖ್ಯಾತ ನಿರ್ದೇಶಕ ಎಸ್ ನಾರಾಯಣ್ S Narayan ನಿರ್ದೇಶನದ “ಮಾರುತ” Marutha ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು ಅಕ್ಟೋಬರ್ 31ರಂದು ಚಿತ್ರ ಅದ್ದೂರಿ ಎಂಟ್ರಿ ಕೊಡಲಿದೆ. ದುನಿಯಾ ವಿಜಯ್ Duniya Vijay ಹಾಗೂ ಶ್ರೇಯಸ್ ಮಂಜು Shreyas Manju ಪ್ರಮುಖ ಪಾತ್ರದಲ್ಲಿ ನಟಿಸಿರುವ, ಕೆ.ಮಂಜು – ರಮೇಶ್ ಯಾದವ್, ಈಶಾ ಪ್ರೊಡಕ್ಷನ್ಸ್ Isha Productions ಲಾಂಛನದಲ್ಲಿ ನಿರ್ಮಿಸಿರುವ “ಮಾರುತ”, ಈ ವರ್ಷದ ಬಹು ನಿರೀಕ್ಷಿತ ಆಕ್ಷನ್ ಚಿತ್ರವಾಗಿದೆ. ಕೆಲವೊಂದು ವಿಶೇಷ ಅಂಶಗಳಿರುವ ಈ ಚಿತ್ರ, ಆ ಸಿಕ್ರೇಟ್ ಗಳನ್ನು ಬಿಟ್ಟುಕೊಡದೇ ಪ್ರೇಕ್ಷಕರ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಚಿತ್ರದಲ್ಲಿ ತಾರಾಬೃಂದಾ Tharabrinda ನಾಯಕಿಯಾಗಿ ನಟಿಸಿದ್ದಾರೆ.
ಸೌಂಡ್ ಮಾಡಿದ ಟೀಸರ್ ಮತ್ತು ಸಾಂಗ್
ಈಗಾಗಲೇ ಚಿತ್ರದ ಹಾಡುಗಳು ಹಾಗೂ ಟೀಸರ್ ಸದ್ದು ಮಾಡಿದೆ. ನಿರ್ದೇಶನದ ಜೊತೆಗೆ ಸಂಗೀತ ಸಂಯೋಜನೆಯನ್ನು ಕೂಡ ಎಸ್ ನಾರಾಯಣ್ ಅವರೇ ಮಾಡಿದ್ದಾರೆ. ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ವಿನೋದ್ ಹಾಗೂ ಅರ್ಜುನ್ ಸಾಹಸ ನಿರ್ದೇಶನ ಮತ್ತು ಮೋಹನ್ ಕುಮಾರ್, ಸಂತು ಅವರ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ದುನಿಯಾ ವಿಜಯ್ ಮಾತ್ರವಲ್ಲ, ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಚಿತ್ರದ ವಿಶೇಷ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ತಾರಾಗಣದಲ್ಲಿ ಸಾಧುಕೋಕಿಲ, ನಿಶ್ವಿಕಾ ನಾಯ್ಡು, ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಮಂಜು ಪಾವಗಡ , ಚಿತ್ರಾ ಶೆಣೈ, ಸುಜಯ್ ಶಾಸ್ತ್ರಿ ಮುಂತಾದ ಹಿರಿಯ ಮತ್ತು ಕಿರಿಯ ಕಲಾವಿದರ ದಂಡೇ ಇದೆ.