- “ಕೃಷ್ಣಂ ಪ್ರಣಯ ಸಖಿ” ಜೋಡಿಯ ಹೊಸ ಸಿನಿಮಾ ಅನೌನ್ಸ್: ವಿಭಿನ್ನ ಕಥಾ ಹಂದರವಿರೋ ರೊಮ್ಯಾಂಟಿಕ್ ಚಿತ್ರ
- ಗೋಲ್ಡನ್ ಸ್ಟಾರ್ ಗಣೇಶ್ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
- ಆಕ್ಷನ್ ಕಟ್ ಹೇಳಲಿದ್ದಾರೆ ಶ್ರೀನಿವಾಸ ರಾಜು
ಗೋಲ್ಡನ್ ಸ್ಟಾರ್ ಗಣೇಶ್ Golden Star Ganesh ನಟನೆಯ “ಕೃಷ್ಣಂ ಪ್ರಣಯ ಸಖಿ” Krishnam Pranaya Sakhi ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಸೂಪರ್ ಹಿಟ್ ಸಿನಿಮಾ ಆಗಿ ಮಿಂಚಿತ್ತು ರೊಮ್ಯಾಂಟಿಕ್ ಕಥಾ ಹಂದರವಿದ್ದ ಈ ಸಿನಿಮಾ ನಿರೂಪಣೆ ಮತ್ತು ಅದ್ಧೂರಿತನದಿಂದ ಗಮನಸೆಳೆದಿತ್ತು. ಇದೀಗ “ಕೃಷ್ಣಂ ಪ್ರಣಯ ಸಖಿ” ಜೋಡಿಯ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ರೆಡಿಯಾಗುತ್ತಿದೆ.
ಪ್ರಾರಂಭವಾಗಿದೆ ಚಿತ್ರೀಕರಣ
ಸಮೃದ್ಧಿ ಮಂಜುನಾಥ್ Samruddhi Manjunath ನಿರ್ಮಿಸಿದ ಮತ್ತು ವಿರಾಟ್ ಸಾಯಿ ಕ್ರಿಯೇಷನ್ಸ್ Virat Sayi Creations ಪ್ರಸ್ತುತಪಡಿಸಿದ ಕೆವಿಸಿ ಪ್ರೊಡಕ್ಷನ್ಸ್ KVC Productions ಬೆಂಬಲಿತ ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಕ್ಷನ್ ಕಟ್ ಹೇಳಲಿದ್ದಾರೆ ಶ್ರೀನಿವಾಸ ರಾಜು. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ದೇವಿಕಾ ಭಟ್ Devika Bhat ಅವರು ಈಗಾಗಲೇ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. 2ನೇ ನಾಯಕಿಯ ಹುಡುಕಾಟ ನಡೆಯುತ್ತಿದೆ. ಈ ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ. ಮೈಸೂರು ಹಾಗೂ ಸುತ್ತಮುತ್ತಲಿನಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಇದೊಂದು ರೊಮ್ಯಾಂಟಿಕ್ ಫ್ಯಾಮಿಲಿ ಕಥೆಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.
ಛಾಯಾಗ್ರಾಹಕರಾಗಿ ವೆಂಕಟ್ ಪ್ರಸಾದ್ , ಹಾಯ್ ನಾನ ಮತ್ತು ಹೃದಯಂ ಚಿತ್ರ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜಿಸಲಿದ್ದಾರೆ. ವಿಜಯ್ ಈಶ್ವರ್ ಮತ್ತು ಕ್ರಾಂತಿ ಕುಮಾರ್ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಚಿತ್ರತಂಡವು ಕೇರಳ, ಉತ್ತರ ಭಾರತ, ಭೂತಾನ್ ಮತ್ತು ಪ್ಯಾರಿಸ್‌ನ ಸುಂದರವಾದ ಸ್ಥಳಗಳಲ್ಲಿ ಮುಂದಿನ ದಿನಗಳಲ್ಲಿ ಶೂಟಿಂಗ್ ನಡೆಸಲಿದೆ. ಚಿತ್ರದ ಇನ್ನುಳಿದ ಪಾತ್ರ ವರ್ಗ ಮತ್ತು ರಿಲೀಸ್ ದಿನಾಂಕದ ಕುರಿತು ಯಾವುದೇ ವಿವರಗಳನ್ನು ಚಿತ್ರತಂಡ ನೀಡಿಲ್ಲ.