- ಸಿನಿಪ್ರಿಯರ ಮುಂದೆ ತೆರೆದುಕೊಳ್ಳಲಿದೆ “ನಿಮ್ದೇ ಕಥೆ”
- ಅಭಿಲಾಷ್ ದಳಪತಿ ಮತ್ತು ರಾಷಿಕಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
- ಹಾಸ್ಯಮಯ, ಭಾವನಾತ್ಮಕ ಹಾಗೂ ಸಸ್ಪೆನ್ಸ್ ಮೂವೀ “ನಿಮ್ದೆ ಕಥೆ”
ಶ್ರೀನಿವಾಸ್ ರೆಡ್ಡಿ Shrinivas Reddy ಮತ್ತು ಅರವಿಂದ್ ಯುಎಸ್ Aravind U S ನಿರ್ಮಿಸಿರುವ ರಾಘವೇಂದ್ರ ರಾಜ್ Raghavendra Raj ಆಕ್ಷನ್ ಕಟ್ ಹೇಳಿರುವ “ನಿಮ್ದೇ ಕಥೆ” Nimde Kathe ಸಿನಿಮಾದಲ್ಲಿ ಲವ್ ಮಾಕ್ಟೇಲ್ ಖ್ಯಾತಿಯ ಅಭಿಲಾಷ್ ದಳಪತಿ Abhishek Dalapathi ಮತ್ತು ಮನದ ಕಡಲು ಚಿತ್ರದ ರಾಷಿಕಾ ಶೆಟ್ಟಿ Rashika Shetty ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮುಖ್ಯಭೂಮಿಕೆಯಲ್ಲಿ ಘಟಾನುಘಟಿಗಳಾದ ಸಿಹಿ ಕಹಿ ಚಂದ್ರು Sihikahi Chandru, ಕಾಮಿಡಿ ಕಿಲಾಡಿಗಳುಖ್ಯಾತಿಯ ಮನೋಹರ್ ಗೌಡ, ಕೆವಿ ಮಂಜಯ್ಯ ಮತ್ತು ಜ್ಯೋತಿ ಮಾರೂರ್ ಮುಂತಾದವರು ನಟಿಸಿದ್ದಾರೆ.
ಹಾಸ್ಯಮಯ, ಭಾವನಾತ್ಮಕ ಹಾಗೂ ಸ್ವಲ್ಪ ಸಸ್ಪೆನ್ಸ್ ಹೊಂದಿರುವ ಈ ಚಿತ್ರ ವೀಕ್ಷಕರಿಗೆ ಮನರಂಜನೆಯ ರಸದೌತಣ ನೀಡುತ್ತದೆ ಎಂದಿದ್ದಾರೆ ನಿರ್ದೇಶಕರು. ಬೆಂಗಳೂರು ಮತ್ತು ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಪ್ರವೀಣ್ ನಿಕೇತನ್ ಅವರ ಸಂಗೀತ ಸಂಯೋಜನೆ, ಪ್ರಶಾಂತ್ ಸಾಗರ್ ಅವರ ಛಾಯಾಗ್ರಹಣ ಮತ್ತು ಸುನಿಲ್ ಎಸ್ ಅವರ ಸಂಕಲನವಿದ್ದು, ಏಪ್ರಿಲ್ 4 ಕ್ಕೆ ಸಿನಿಪ್ರೇಕ್ಷಕರೆದುರು ತೆರೆದುಕೊಳ್ಳಲಿದೆ ನಿಮ್ದೇ ಕಥೆ.