- ಕೋಸ್ಟಲ್ ವುಡ್ ನಿಂದ ಸ್ಯಾಂಡಲ್ ವುಡ್ ಗೆ “ಪೃಥ್ವಿ ಅಂಬರ್” ಮಿಂಚಿನ ಪಯಣ
- ನಾಗರಾಜ್ ಆಗಿದ್ದವ್ರು “ಪೃಥ್ವಿ ಅಂಬರ್” ಆದ ಕಥೆ ಇಲ್ಲಿದೆ
- ರೇಡಿಯೋ ಜಾಕಿಯಾಗಿ ಪಯಣ ಆರಂಭಿಸಿ ನಾಯಕ ನಟನಾದ್ರು “ಪೃಥ್ವಿ”
ತುಳುನಾಡು, ಕರಾವಳಿ, ಉಡುಪಿ ಜಿಲ್ಲೆಯ ಸಣ್ಣ ಊರೊಂದರ ಯುವಕ ನಾನು ಚಿತ್ರರಂಗಕ್ಕೆ ಬರುತ್ತೇನೆ, ನಾಯಕ ನಟನಾಗಿ ಬೆಳೆಯುತ್ತೇನೆ ಎಂಬ ಕನಸೂ ಕಂಡಿರದ ನಾಗರಾಜ್ ಅಲಿಯಾಸ್ “ಪೃಥ್ವಿ ಅಂಬರ್” Pruthvi Ambaar ಸಿನಿಜರ್ನಿ ಇಲ್ಲಿದೆ. ಅಪ್ಪನೇ ನನ್ನ ಮೊದಲ ಹೀರೋ Hero ಅನ್ನುವ ಪೃಥ್ವಿ, ಸಮಾಜ ಸೇವೆ ಮಾಡುತ್ತಿದ್ದ ಅವರ ಅಪ್ಪನೇ ಅವರಿಗೆ ಮೊದಲ ರೋಲ್ ಮಾಡೆಲ್ Role Model ಅಂತೆ. ನೃತ್ಯಗಾರರಾಗಿದ್ದ ಇವರು, ಕೋರಿಯೋಗ್ರಫಿ ಫೀಲ್ಡ್ Choreography field ನಲ್ಲಿ ಬೆಳೀಬೇಕು ಅನ್ನೋ ಕನಸು ಕಂಡಿದ್ರಂತೆ. ಆದರೆ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ನಾಯಕನಾಗಿ ಮಿಂಚ್ತಿದ್ದಾರೆ.
ಡ್ಯಾನ್ಸ್ ನಿಂದ ಸಿನಿಮಾ ನಟನೆಯವರೆಗೆ
ಸಣ್ಣ ವಯಸ್ಸಿನಿಂದಲೂ ಡ್ಯಾನ್ಸ್ ನಲ್ಲಿ ಆಸಕ್ತಿ ಇದ್ದ ಪೃಥ್ವಿ ಅವರಿಗೆ ಜಿಲ್ಲೆ, ರಾಜ್ಯ ಹಾಗೇ ರಾಷ್ಟ್ರಮಟ್ಟದ ಡ್ಯಾನ್ಸ್ ಕಾಂಪಿಟೇಷನ್ Dance Competition ಗಳಲ್ಲಿ ಗೆಲ್ಲಬೇಕು, ಡ್ಯಾನ್ಸ್ ಕೋರಿಯೋಗ್ರಫಿ ಮಾಡ್ಬೇಕು ಅನ್ನೋದೇ ದೊಡ್ಡ ಕನಸಾಗಿತ್ತಂತೆ. ಹೀಗೇ ಡ್ಯಾನ್ಸ್ ಕಾಂಪಿಟೇಷನ್, ರಿಯಾಲಿಟಿ ಷೋ Reality Show ಗಳಲ್ಲಿ ಭಾಗವಹಿಸ್ತಿದ್ರಂತೆ. ಅನಂತರ ರೇಡಿಯೋ ಜಾಕಿಯಾಗಿಯೂ ತನ್ನ ವೃತ್ತಿ ಜೀವನ ನಡೆಸಿದ್ದ ಇವ್ರಿಗೆ, ತುಳು ಚಿತ್ರರಂಗದಲ್ಲಿ ನಟನೆಗೆ ಅವಕಾಶ ಸಿಕ್ತು. ಕೋಸ್ಟಲ್ ವುಡ್ ನ ಹಲವು ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿ ಅನಂತರ ಸ್ಯಾಂಡಲ್ ವುಡ್ ಗೂ ಕಾಲಿರಿಸಿದ್ರು, “ದಿಯಾ” Dia ಚಿತ್ರದಲ್ಲಿ ಇವರ ನಟನೆಗೆ ಜನ ಫುಲ್ ಫಿದಾ ಆಗೋದ್ರು. ಈಗ ಇವರ ನಟನೆಯ ಸಾಲು ಸಾಲು ಸಿನಿಮಾಗಳು ತೆರೆಗೆ ಬರುತ್ತಿವೆ. ಅದರೊಂದಿಗೆ ತುಳು ಸಿನಿಮಾವೊಂದಕ್ಕೆ ಡೈರೆಕ್ಟರ್ ಕ್ಯಾಪ್ ಕೂಡಾ ತೊಡಲು ಹೊರಟಿದ್ದಾರೆ ಎನ್ನುವ ಸುದ್ದಿ ಇದೆ.
ನಾಗರಾಜ್ to ಪೃಥ್ವಿ ಅಂಬರ್ ಪಯಣ
ಇವರ ಮೊದಲನೇ ಹೆಸರು ನಾಗರಾಜ್ ಆಗಿತ್ತಂತೆ. ಮೊದಲ ಸಿನಿಮಾದ ನಟನೆಯ ನಂತರ ಹೆಸರು ಬದಲಿಸಿಕೊಳ್ಳಬೇಕೆಂಬ ಯೋಚನೆಯಿಂದ ಮೂರ್ನಾಲ್ಕು ಹೆಸರುಗಳನ್ನು ಪ್ರಯೋಗ ಮಾಡಿ ನೋಡಿ ಕೊನೆಯದಾಗಿ ಪೃಥ್ವಿ ಅಂಬರ್ ಆದ್ರಂತೆ.
ದಶಕಗಳಿಗೂ ಹೆಚ್ಚಿನ ಲವ್ ಲೈಫ್ ಹೀಗಿತ್ತು
ಪೃಥ್ವಿ ಇದೀಗ ಒಂದು ಮುದ್ದಾದ ಹೆಣ್ಣು ಮಗುವಿನ ತಂದೆ. ಜೀವನ ಸಂಗಾತಿ ಪಾರುಲ್ ಮತ್ತು ಪೃಥ್ವಿ ಅವರ ಪ್ರೀತಿ ಮದುವೆಗೂ ಮೊದಲು ಹನ್ನೆರಡು ವರ್ಷಗಳಿಂದ ಇತ್ತಂತೆ. ಡ್ಯಾನ್ಸ್ ರಿಯಾಲಿಟಿ ಷೋ ಒಂದರಲ್ಲಿ ಸ್ಪರ್ಧಿಗಳಾಗಿದ್ದ ಇವರಿಬ್ರೂ ಜೀವನ ಪಯಣದಲ್ಲಿ ಒಂದೇ ದೋಣಿಯ ಪಯಣಿಗರು. ಇಬ್ಬರೂ ಬೇರೆ ಬೇರೆ ಊರುಗಳಲ್ಲಿ ಇದ್ದುದರಿಂದ ಇವರದ್ದು ಲಾಂಗ್ ಡಿಸ್ಟಾನ್ಸ್ ರಿಲೇಷನ್ಶಿಪ್ ಆದ್ರೂ ಕೂಡಾ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಸಮಸ್ಯೆಗಳನ್ನು ನಿಭಾಯಿಸಿಕೊಂಡು ಅನಂತರ ಮನೆಯವರನ್ನು ಒಪ್ಪಿಸಿ ಮದುವೆಯಾಗಿ, ಈಗ ಸುಖವಾಗಿ ಸಂಸಾರ ನಡೆಸ್ತಾ ಇದ್ದಾರೆ. ಇವರಿಬ್ಬರ ಪ್ರೀತಿಯ ಮಗಳು ಚಾರ್ವಿ.