- ಪ್ಯಾಟೆ ಹುಡ್ಗಿರಿಗೆ ಹಳ್ಳಿ ಲೈಫ್ ಪರಿಚಯ ಮಾಡಿಸಲು ಬರ್ತಿದೆ “ಪ್ಯಾಟೆ ಹುಡುಗೀರ್ ಹಳ್ಳಿ ಲೈಫು”
- ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ “ಪ್ಯಾಟೆ ಹುಡುಗೀರ್ ಹಳ್ಳಿ ಲೈಫು”
- ಈ ಶೋ ನ ಆಡಿಶನ್ ಜುಲೈ 19ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ.
ಹಳ್ಳಿ ಬದುಕಿನ ನೋವು ನಲಿವುಗಳನ್ನು ತೆರೆಯ ಮೇಲೆ ತರುವ ಉದ್ದೇಶದಿಂದ ಕಿರುತೆರೆಯಲ್ಲಿ ಹೊಸತೊಂದು ರಿಯಾಲಿಟಿ ಶೋ Reality Show ಬರುತ್ತಿದೆ. ಝೀ ಕನ್ನಡ Zee Kannada ವಾಹಿನಿಯಲ್ಲಿ ಪ್ರಸಾರವಾಗಲಿರುವ ಈ ಶೋ ನ ಹೆಸರು “ಪ್ಯಾಟೆ ಹುಡುಗೀರ್ ಹಳ್ಳಿ ಲೈಫು” Pyate Hudugeer Halli Life ಎಂದು ಹೇಳಲಾಗುತ್ತಿದೆ. ಹೌದು ಈ ಕುರಿತು ಜೀ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದ್ದು, ಈ ಪ್ರೋಮೋದಲ್ಲಿ ಹಳ್ಳಿ ಜೀವನ ನಡೆಸಲು ಸಿದ್ದವಾಗಿರೋ ಪ್ಯಾಟೆ ಹುಡುಗಿಯರಿಗೆ ಭಾಗವಹಿಸಿಲು ಆಹ್ವಾನ ನೀಡಲಾಗಿದೆ. ಈಗಾಗಲೇ ಆಡಿಶನ್ ನಡೆಸಲು ಸಿದ್ದತೆ ಕೂಡ ವಾಹಿನಿ ನಡೆಸಿದ್ದು ಇದು ಕಿರುತೆರೆಯ ಅತ್ಯಂತ ದೊಡ್ಡ ರಿಯಾಲಿಟಿ ಶೋ ಎಂದು ವಾಹಿನಿ ಹೇಳಿಕೊಂಡಿದೆ.
ಆಡಿಶನ್ ಎಲ್ಲಿ? ಏನು ಷರತ್ತು?
ಈ ಶೋ ನ ಆಡಿಶನ್ ಜುಲೈ 19ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ Kantirava studio ನಡೆಯಲಿದೆ. ಆಡಿಷನ್ನಲ್ಲಿ ಭಾಗವಹಿಸುವವರ ವಯಸ್ಸು 18 ರಿಂದ 28 ವರ್ಷ ಆಗಿರಬೇಕು ಮತ್ತು ಅರ್ಜಿ ಸಲ್ಲಿಸುವವರು ನಗರದಲ್ಲೇ ಹುಟ್ಟಿ ಬೆಳೆದು, ಅವರ ಜೀನಶೈಲಿ ತುಂಬಾ ಮಾಡರ್ನ್ ಆಗಿರಬೇಕು. ಆಡಿಶನ್ ಸಮಯದಲ್ಲಿ ಆಧಾರ್ ಕಾರ್ಡ್ ಹಾಗೂ ಪಾಸ್ಪೋರ್ಟ್ ಸೈಜ್ ಫೋಟೋ ಮರೆಯದೇ ತರಬೇಕು ಎಂದು ವಾಹಿನಿ ತಿಳಿಸಿದೆ. ಈ ಶೋ ಅನ್ನು ನಟ ಅಕುಲ್ ಬಾಲಾಜಿ Akul Balaji ನಡೆಸಿಕೊಡಲಿದ್ದು ಶೋನ ಶೀರ್ಷಿಕೆ ಅಂತಿಮವಾಗಿಲ್ಲ ಎಂದೂ ಹೇಳಲಾಗುತ್ತಿದೆ. ವಾಹಿನಿ ತಿಳಿಸಿದಂತೆ ಶೋ ಅತೀ ಶೀಘ್ರದಲ್ಲಿ ಆರಂಭವಾಗಲಿದೆ. ಏನೇ ಆಗ್ಲಿ ಕಿರುತೆರೆಯಲ್ಲಿ ಹೊಸ ರಿಯಾಲಿಟಿ ಶೋ ನ ನಿರೀಕ್ಷೆಯಲ್ಲಿದ್ದವರಿಗೆ ಇದೊಂದು ಗುಡ್ ನ್ಯೂಸ್ ಮಾತ್ರ ಹೌದು.