- ರಮ್ಯಾ- ವಿನಯ್ ರಾಜಕುಮಾರ್ ಒಟ್ಟಾಗಿ ಕಾಣಿಸಿಕೊಂಡ ವಿಡಿಯೋ ವೈರಲ್ : ಏನಿದು ವಿಷಯ?
- ರಮ್ಯಾ ಮತ್ತು ವಿನಯ್ ಒಂದಾಗಿ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದೆ
- ಮ್ಯಾಗಝೀನ್ ಒಂದರ ಫೋಟೋ ಶಾಟ್ ಗಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ Ramya ಕೆಲವು ಕಾಲದಿಂದ ಚಿತ್ರರಂಗದಿಂದ ದೂರ ಉಳಿದ ನಟಿ. ಸಿನಿಮಾದ ಬದಲು ರಾಜಕೀಯ ಮತ್ತು ಆಗಾಗ ಸಣ್ಣ ಪುಟ್ಟ ವಿವಾದಗಳ ಮೂಲಕವೇ ಸುದ್ದಿಯಲ್ಲಿದ್ದವರು. ಆದರೆ ಈಗ ದೊಡ್ಮನೆ ಹುಡುಗ ನಟ ವಿನಯ್ ರಾಜ್ ಕುಮಾರ್ Vinay Raj Kumar ಅವರ ಜೊತೆಗೆ ರಮ್ಯಾ ಕಾಣಿಸಿಕೊಂಡ ವಿಡಿಯೋ ಒಂದು ಈಗ ವೈರಲ್ ಆಗಿದ್ದು ಚಿತ್ರರಂಗದಲ್ಲಿ ಈ ವಿಡಿಯೋದ ಕುರಿತು ಗಾಸಿಪ್ ಶುರುವಾಗಿದೆ. ಆದರೆ ಈ ಗಾಸಿಪ್ ಬೇರೆ ಯಾವುದರ ಕುರಿತೂ ಅಲ್ಲ. ರಮ್ಯಾ ಮತ್ತು ವಿನಯ್ ಒಂದಾಗಿ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದೆ ಎಂದು ಹಬ್ಬಿರುವ ಗಾಸಿಪ್ ಇದು. ಆದರೆ ಇಬ್ಬರೂ ಒಟ್ಟಿಗೇ ಕಾಣಿಸಿಕೊಂಡಿದ್ದು ಯಾವುದೇ ಚಿತ್ರಕ್ಕಾಗಿ ಅಲ್ಲ, ಬದಲಾಗಿ ಮ್ಯಾಗಝೀನ್ ಒಂದರ ಫೋಟೋ ಶಾಟ್ ಗಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಅಭಿಮಾನಿಗಳು ಸುದ್ದಿಗಾಗಿ ಕಾಯಬೇಕಿದೆ
ಈ ಫೊಟೋನಲ್ಲಿ ಮೋಹಕ ತಾರೆ ರಮ್ಯಾ ಅವರ ಅಂದ ನೋಡಿ ಪ್ರೇಕ್ಷಕರು ಥ್ರಿಲ್ಲ್ ಆಗಿದ್ದಾರೆ. ಹಾಗೆ ನೋಡಿದರೆ ರಮ್ಯಾಗೆ ವಿನಯ್ ಒಡನಾಟ ಹೊಸತೇನಲ್ಲ, ವಿನಯ್ ಬಾಲ್ಯದ ದಿನಗಳಿಂದಲೂ ರಮ್ಯಾಗೆ ವಿನಯ್ ಒಡನಾಟವಿದೆ. ಸದ್ಯ ರಿಲೀಸ್ ಆಗಿರೋ ವಿನಯ್ ಅಭಿನಯದ ಚಿತ್ರಗಳನ್ನೂ ರಮ್ಯಾ ತುಂಬಾ ಸಲ ಮೆಚ್ಚಿಕೊಂಡಿದ್ದರು. ಮುಂದೆ ಸಾಧ್ಯವಾದರೆ ವಿನಯ್ ಜೊತೆ ನಟಿಸುವೆ ಎಂದೂ ಹೇಳಿದ್ದರು. ಹಾಗಾಗಿ ಈ ಫೋಟೋ ಶೂಟ್ ನೆಪದಲ್ಲಿ ಇಬ್ಬರೂ ಹೊಸ ಚಿತ್ರದಲ್ಲೇನಾದರೂ ನಟಿಸುವ ಸಾಧ್ಯತೆಗಳ ಬಗ್ಗೆ ಚರ್ಚೆ ಮಾಡಿದ್ದಾರಾ ಎನ್ನುವ ಗುಲ್ಲು ಕೂಡ ಹಬ್ಬಿದೆ. ಫ್ಯೂಚರ್ ನಲ್ಲಿ ರಮ್ಯಾ ಮತ್ತು ವಿನಯ್ ರಾಜಕುಮಾರ್ ಒಂದೇ ಸಿನಿಮಾದಲ್ಲಿ ನಟಿಸುವ ಸುದ್ದಿ ಬಂದರೂ ಅಚ್ಚರಿಯಿಲ್ಲ.ಯಾವುದಕ್ಕೂ ಅವರ ಅಭಿಮಾನಿಗಳು ಅಂತಹ ಸುದ್ದಿಗಾಗಿ ಕಾಯಬೇಕಿದೆ