- ಒಲವ ತಾರೆಯಾರಾಗಿ ಮಿಂಚಿದ ರಾಮ್ ಲತೀಶ್, ಬಿಂದು; ರಿತ್ವಿಕ್ ಮುರಳೀಧರ್ ಆಲ್ಬಮ್ ಸಾಂಗ್ “ನನ್ನೊಲವ ತಾರೆ” ರಿಲೀಸ್
- ರಿತ್ವಿಕ್ ಮುರಳೀಧರ್ ಅವರ ನಿರ್ದೇಶನ, ಸಂಗೀತ ಸಂಯೋಜನೆ
- ಶ್ರೀ ಗಣೇಶ್ ಪರಶುರಾಮ್ ಅವರ ಸಾಹಿತ್ಯವಿದೆ
ಸಂಗೀತ ನಿರ್ದೇಶಕ ರಿತ್ವಿಕ್ ಮುರಳೀಧರ್ ಅವರೇ ಸಂಗೀತ ಸಂಯೋಜಿಸಿ, ಧ್ವನಿ ನೀಡಿರುವ “ನನ್ನೊಲವ ತಾರೆ” ಆಲ್ಬಮ್ ಸಾಂಗ್ ರಿತ್ವಿಕ್ ಮುರಳೀಧರ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಆಗಿದೆ. ಶ್ರೀ ಗಣೇಶ್ ಪರಶುರಾಮ್ ಅವರ ಸಾಹಿತ್ಯವಿರುವ ಈ ಒಲವಿನ ಗೀತೆ ಪ್ರೇಕ್ಷಕರ ಹೃದಯ ಗೆಲ್ಲುವಂತಿದೆ.

ಒಲವಿಂದ ಗೆಲ್ಲುವ ‘ನನ್ನೊಲವ ತಾರೆ’
ದೊಡ್ಡ ಮನೆಯ ಡೈನಿಂಗ್ ಟೇಬಲ್ ಮೇಲಿನ ಡೈಲಾಗ್ ಗಳಿಂದ ಆರಂಭವಾಗುವ ಈ ಆಲ್ಬಮ್ ಸಾಂಗ್ ನ ದೃಶ್ಯ ಮೊದಲಿಗೆ ನೋಡುಗರಿಗೆ ಇದು ವಿರಹ ಗೀತೆಯಾಗುತ್ತದೆಯೇನೋ ಎಂಬ ಫೀಲ್ ಮೂಡಿಸುತ್ತದೆ. ಆದರೆ ಕೊನೆಗೆ ಸಿಗುವ ಟ್ವಿಸ್ಟ್ ಎಲ್ಲರ ಮನಸ್ಸಿಗೂ ಮುದ ನೀಡುವಂತಿದೆ. ಹಾಡಿನ ಸಾಹಿತ್ಯ, ಸಂಗೀತ ಮತ್ತೆ ಮತ್ತೆ ಕೇಳುವಂತಿದೆ. ನಾಯಕ, ನಾಯಕಿಯರಾಗಿ ರಾಮ್ ಲತೀಶ್ ಮತ್ತು ಬಿಂದು ತಮ್ಮ ಮುದ್ದಾದ ಅಭಿನಯದ ಮೂಲಕ ಸಾಂಗ್ ಹಿಟ್ ಆಗುವಂತೆ ಮಾಡಿದಾರೆ. ಪ್ರೇಮಿಗಳು ಒಂದಾದರೆ ಎಲ್ಲರಿಗೂ ಖುಷಿಯೇ. ಇಡೀ ಸಾಂಗ್ ಕೊನೆಯವರೆಗೂ ಕುತೂಹಲ ಉಳಿಸಿಕೊಂಡು ಕ್ಲೈಮಾಕ್ಸ್ ಏನಾಗುತ್ತದೆಂದು ಕಾಯುವಂತೆ ಚಿತ್ರೀಕರಿಸಿದ್ದಾರೆ.
ಈ ಆಲ್ಬಮ್ ಸಾಂಗ್ ನ್ನು ತ್ರಿಶೂಲ್ ಎಂಡೀವರ್ ಫಿಲ್ಮ್ ಸಂಸ್ಥೆ ನಿರ್ಮಾಣ ಮಾಡಿದ್ದು, ಸುಧಾರಾಣಿ, ಹರ್ಷ ಚರಣ್, ಭರತ್ ಸಹ ನಿರ್ಮಾಪಕರಾಗಿದ್ದಾರೆ. ಉದಯ್ ಲೀಲಾ ಅವರ ಛಾಯಾಗ್ರಹಣ ಹಾಗೂ ವಿಜೇತ್ ಚಂದ್ರ ಅವರ ಸಂಕಲನವಿದೆ.