- “ಕಾಂತಾರ ಚಾಪ್ಟರ್ 1” ರ ಬೆಡಗಿ “ರುಕ್ಮಿಣಿ ವಸಂತ್” ಜೀವನದ ಇಂಟೆರೆಸ್ಟಿಂಗ್ ಕಥೆ ಇಲ್ಲಿದೆ…
- Rukmini vasanth life story in kannada
- ಯಶ್ ನನ್ನ ಮೊದಲನೇ ಕ್ರಷ್ ಅಂತಾರೆ ರುಕ್ಮಿಣಿ ವಸಂತ್
- ಕಾಂತಾರದ ಯುವರಾಣಿ “ಕನಕವತಿ”ಗೆ ಇನ್ನಷ್ಟೇ ಪ್ರಪೋಸಲ್ಸ್ ಬರ್ಬೇಕಂತೆ.
Rukmini vasanth life story in kannada
2019 ಜನವರಿಯಲ್ಲಿ ತೆರೆಗೆ ಬಂದ “ಬೀರಬಲ್” Beerbal ಸಿನಿಮಾ ಮೂಲಕ ಬೆಳ್ಳಿಪರದೆಗೆ ಕಾಲಿರಿಸಿದ ಬೆಡಗಿ ರುಕ್ಮಿಣಿ ವಸಂತ್ Rukmini Vasanth. “ಸಪ್ತ ಸಾಗರದಾಚೆ ಎಲ್ಲೋ” Saptha Sagaradache Ello ಮೂಲಕ ಸಿಕ್ಸರ್ ಹೊಡೆದು ಎಲ್ಲರ ಗಮನ ಸೆಳೆದ ರುಕ್ಮಿಣಿ ಅವ್ರು ಈಗ “ಕಾಂತಾರ ಚಾಪ್ಟರ್ 1” Kanthara Chapter 1 ನಲ್ಲಿ ಮಹಾರಾಣಿಯಾಗಿ ಮಿಂಚ್ತಿದಾರೆ. ನಾನು ಬೆಂಗಳೂರಿನವಳು ಅಂತ ಹೆಮ್ಮೆಯಿಂದ ಹೇಳ್ಕೊಳ್ಳೋ ಇವ್ರ ಜೀವನ ಹೇಗಿತ್ತು ನೋಡೋಣ.
ಬಾಲ್ಯದಲ್ಲೇ ನಾಟಕಗಳಲ್ಲಿ ಆಸಕ್ತಿ
ಓದಿನಲ್ಲಿ ಅಷ್ಟೇನೂ ಆಸಕ್ತಿ ಇಲ್ದೇ ಇದ್ರೂ ಪಿಯುಸಿವರೆಗೆ ಶಿಕ್ಷಣ ಮುಗಿಸಿ UK ಯಲ್ಲಿ ಫೇಮಸ್ School of drama ದಲ್ಲಿ ಶಿಕ್ಷಣ ಮುಂದುವರಿಸ್ತಾರೆ. ಶಾಲಾ ದಿನಗಳಲ್ಲಿ ಪ್ರಾಣಿಗಳ ಮೇಲಿದ್ದ ಪ್ರೀತಿಯಿಂದ ವೆಟರ್ನರಿ ಡಾಕ್ಟರ್ ಆಗ್ಬೇಕು ಅನ್ನೋ ಕನಸು ಕಂಡಿದ್ದ ಇವ್ರಿಗೆ ನಿಧಾನಕ್ಕೆ ತನ್ನ ಆಸಕ್ತಿ ನಾಟಕ, ಆಕ್ಟಿಂಗ್ ಕ್ಷೇತ್ರದಲ್ಲಿದೆ ಅನ್ನೋದನ್ನ ಅರ್ಥ ಮಾಡ್ಕೊಂಡಿದ್ರಂತೆ. ನೃತ್ಯ, ಕಲಾಪ್ರಕಾರದ ಹಿನ್ನೆಲೆಯಿರುವ ಕುಟುಂಬದಿಂದ ಬಂದ ಇವರಿಗೆ ಸ್ಟೇಜ್ ಪರ್ಫಾರ್ಮನ್ಸ್ ಹೊಸತೇನೂ ಆಗಿರ್ಲಿಲ್ಲ. ನಟನೆಯ ಬಗ್ಗೆ ದೊಡ್ಡ ಆಸಕ್ತಿಯನ್ನು ಹೊಂದಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ರು ರುಕ್ಮಿಣಿ ವಸಂತ್.
ಅಪ್ಪ, ಅಮ್ಮನ ಫುಲ್ ಸಪೋರ್ಟ್
ತಂದೆ ಆರ್ಮಿಯಲ್ಲಿ ಕೆಲಸದಲ್ಲಿದ್ದಿದ್ರಿಂದ ವರ್ಷಕ್ಕೊಮ್ಮೆ ಒಂದೊಂದು ಕಡೆಗೆ ಟ್ರಾನ್ಸ್ಫರ್ ಆಗ್ತಿತ್ತು. ಆ ಸಮಯದಲ್ಲೆಲ್ಲಾ ಹೊಸ ಊರು, ಹೊಸ ಮನೆ, ಹೊಸ ಫ್ರೆಂಡ್ಸ್, ಹೊಸ ವಾತಾವರಣ ಇದೆಲ್ಲದಕ್ಕೂ ಅಡ್ಜಸ್ಟ್ ಆಗ್ಬೇಕಿತ್ತು. ಅದ್ರೂ ಇದು ತುಂಬಾನೇ ಖುಷಿ ಕೊಡ್ತಿತ್ತು ಅಂತ ಹೇಳೋ ರುಕ್ಮಿಣಿ ಅವ್ರಿಗೆ ಜೀವನದ ಏರುಪೇರುಗಳಲ್ಲಿ, ಪ್ರತಿಯೊಂದು ಹಂತದಲ್ಲೂ ಅಮ್ಮ ನನ್ನ ಹಿಂದೆ ಇದ್ದಾರೆ. ಕುಟುಂಬದ ಸಪೋರ್ಟ್ ತುಂಬಾನೇ ಇದೆ ಅಂತ ಹೆಮ್ಮೆ ಪಡ್ತಾರೆ.
ಜರ್ನಲಿಂಗ್ ದೊಡ್ಡ ಬ್ಯಾಕ್ ಬೋನ್
ಪ್ರತಿಯೊಂದು ಸಿನಿಮಾಕ್ಕೂ ಒಂದು ಬುಕ್ ಇಟ್ಕೊಂಡು, ಪ್ರತಿದಿನವೂ ಬರೆಯುತ್ತೇನೆ. ನಿರ್ದೇಶಕರು ಕೊಡೋ ಸೂಚನೆಗಳನ್ನು ಗಮನವಿಟ್ಟು ಕೇಳಿ ಅದ್ನ ಬರ್ಕೊಂಡು, ಅದನ್ನ ಹೇಗೆ ಕಾರ್ಯರೂಪಕ್ಕೆ ತರ್ಬೋದು ಅನ್ನೋದ್ರ ಕಡೆ ಕೆಲಸ ಮಾಡ್ತೀನಿ. ಸಮಯವಿದ್ದಾಗ ಅಥವಾ ಓದ್ಬೇಕು ಅನ್ನಿಸ್ದಾಗ ಅದನ್ನ ತೆಗೆದು ಓದ್ತೀನಿ ಅಂತಾರೆ ರುಕ್ಮಿಣಿ. ಈ ಬರವಣಿಗೆಯ ಅಭ್ಯಾಸವೇ ನನಗೆ ಅರ್ಧ ಗಂಟೆಗಳ ಮೊದಲು ಸ್ಕ್ರಿಪ್ಟ್ ಸಿಕ್ರೂ ಕೂಡಾ ಎಫೆಕ್ಟಿವ್ ಆಗಿ ಅದ್ನ ಆಕ್ಟಿಂಗ್ ಮಾಡ್ಲಿಕ್ಕೆ ಸುಲಭ ಆಗತ್ತೆ ಅಂತಾರೆ.
ನನ್ ಲೈಫ್ ನಲ್ಲಿ ಲಕ್ ಅಂತೂ ತುಂಬಾ ಇದೆ. “ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾದ ಸಂದರ್ಭದಲ್ಲಿ ಇದಂತೂ ತುಂಬಾ ಫ್ರೂವ್ ಆಯ್ತು ಅಂತಾರೆ ರುಕ್ಮಿಣಿ. ಅದರ ಜೊತೆ ನಾನು ಮಾಡೋ ಹೋಮ್ ವರ್ಕ್, ಕೆಲಸಗಳೂ ನನ್ನ ಸಕ್ಸಸ್ ಗೆ ಸಹಾಯ ಆಗ್ತಿದೆ. ಆಮೇಲೆ ಗಣೇಶ್ ಅವ್ರ ಫಿಲಾಸಫಿ “ಈ ಸಮಯ ಎಂದಿಗೂ ಶಾಶ್ವತವಲ್ಲ” ಅನ್ನೋದನ್ನೇ ತಲೇಲಿ ಇಟ್ಕೊಂಡು ನಾನು ಕೆಲಸ ಮಾಡ್ತೀನಿ ಅನ್ನೋ ರುಕ್ಮಿಣಿ ಅವರಿಗೆ “ಕಾಂತಾರ ಚಾಪ್ಟರ್ 1” ಲೈಫ್ ನಲ್ಲಿ ದೊಡ್ಡ ಗೆಲುವು ಅನ್ನೋ ಅಭಿಪ್ರಾಯಪಡ್ತಾರೆ.


