- ಚಲನಚಿತ್ರವಾಗಿ ತೆರೆಗೆ ಬರ್ತಿದೆ “ಸ್ಕೂಲ್ ರಾಮಾಯಣ”
- ಗ್ರಾಮೀಣ ಸೊಗಡಿನ ಹೊಸಪ್ರತಿಭೆಗಳ ಚಿತ್ರ “ಸ್ಕೂಲ್ ರಾಮಾಯಣ”
- ಯುವ ನಿರ್ದೇಶಕ ವೇದ್ ಮತ್ತು ಸಂತೋಷ್ ಆರ್ಯ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ.
ಚಹನಶ್ರೀ ಸಿನಿಮಾಸ್ Chahanashree Cinemas ಬ್ಯಾನರ್ ಅಡಿಯಲ್ಲಿ ಲೀಲಾವತಿ ಎನ್. ಹಸನಘಟ್ಟ, ಹರೀಶ್ ಕೆ. ಎಸ್, ಯೋಗೇಶ್ ಎನ್.ಟಿ.ಬಿ ಬಂಡವಾಳ ಹೂಡಿ ನಿರ್ಮಿಸಿರುವ ಚಿತ್ರ “ಸ್ಕೂಲ್ ರಾಮಾಯಣ” School Ramayana ಜೂನ್ 6 ರಂದು ತೆರೆಗೇರಲಿದೆ. ಯುವ ನಿರ್ದೇಶಕ ವೇದ್ Ved ಮತ್ತು ಸಂತೋಷ್ ಆರ್ಯ Santhosh Arya ಜಂಟಿಯಾಗಿ ಆಕ್ಷನ್ ಕಟ್ ಹೇಳಿರೋ ಈ ಸಿನಿಮಾ ಗ್ರಾಮೀಣ ಸೊಗಡಿನ ಮಕ್ಕಳ ಚಿತ್ರ. ದೀಕ್ಷಿತ್ ಗೌಡ, ಸುಪ್ರೀತಾ ರಾಜ್, ಅಪೂರ್ವಾ, ಮೂಗು ಸುರೇಶ್, ಅಂಜನಪ್ಪ, ಕಿರಣ್ ಆರ್ಯ ಮೊದಲಾದವರು ಚಿತ್ರದ ಮುಖ್ಯಭೂಮಿಕೆಯಲ್ಲಿ ಮಿಂಚಿದ್ದಾರೆ.
ಹಳ್ಳಿಯ ಸರ್ಕಾರಿ ಶಾಲೆಯೊಂದರ ಕಥೆ
ಹಳ್ಳಿಯೊಂದರ ಸರ್ಕಾರಿ ಶಾಲೆ ಮತ್ತು ಅಲ್ಲಿನ ಮಕ್ಕಳ ತುಂಟಾಟಗಳ ಸುತ್ತ ಸುತ್ತುತ್ತದೆ ಚಿತ್ರ. ಸರ್ಕಾರ ನೀಡುವ ಮೂಲಭೂತ ಸೌಕರ್ಯಗಳನ್ನು ಬಳಕೆ ಮಾಡಿಕೊಳ್ಳಲು ಮತ್ತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಲು ಸರ್ಕಾರಿ ಶಾಲೆಗಳು ಏಕೆ ವಿಫಲವಾಗುತ್ತಿವೆ ಎಂಬ ವಿಷಯಗಳನ್ನು ಈ ಚಿತ್ರದಲ್ಲಿ ಚರ್ಚಿಸಲಾಗಿದೆ. ಇದರ ಜೊತೆಗೊಂದು ಪ್ರೇಮಕಥೆಯಿದ್ದು, ಪ್ರೇಕ್ಷಕರಿಗೆ ಚಿತ್ರ ಮಾಹಿತಿ ಜೊತೆಗೆ ಮನರಂಜನೆ ಕೂಡ ನೀಡಲಿದೆ ಎಂದು ಚಿತ್ರತಂಡದ ಅಭಿಪ್ರಾಯ.
ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜಿಸಿದ್ದು, ಅಜಯ್ ವಾರಿಯರ್, ಮೆಹಬೂಬ್ ಸಾಬ್, ದೇವರಾಜ್ ಕುಂಬಾರ್, ಸಹನಾ ಮೊದಲಾದವರು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಟೈಟಲ್ ಹಾಗೂ ಟ್ರೈಲರ್ ಗಳಿಂದ ಸಿನಿ ಪ್ರೇಮಿಗಳ ಮನಸೆಳೆಯುತ್ತಿದೆ ಚಿತ್ರ. ಎಷ್ಟರ ಮಟ್ಟಿಗೆ ಚಿತ್ರತಂಡದ ಉದ್ದೇಶ ಸಫಲಾಗಲಿದೆ, ತಲುಪಬೇಕಾದವರಿಗೆ ಪರಿಣಾಮಕಾರಿಯಾಗಿ ತಲುಪಲಿದೆ ಎಂದು ಕಾದು ನೋಡಬೇಕಿದೆ.