ಸರಕಾರಿ ಶಾಲೆಗಳ ವಾಸ್ತವಿಕ ಕತೆ ಹೇಳುವ “ಗುರಿ”: ನವಿರೇಳಿಸುವ ಹಾಡು, ಟೀಸರ್ ಬಿಡುಗಡೆ

Date:

  • ಸರಕಾರಿ ಶಾಲೆಗಳ ವಾಸ್ತವಿಕ ಕತೆ ಹೇಳುವ “ಗುರಿ”: ನವಿರೇಳಿಸುವ ಹಾಡು, ಟೀಸರ್ ಬಿಡುಗಡೆ
  • ವಿಷ್ಣುದುರ್ಗಾ ಪ್ರೊಡಕ್ಷನ್ ಅಡಿಯಲ್ಲಿ ರಾಧಿಕಾ ಎಸ್ ಆರ್ ಮತ್ತು ಚಿತ್ರಲೇಖಾ ಎಸ್ ನಿರ್ಮಾಣದ ಚಿತ್ರ
  • ಸೆಲ್ವಂ ಎಂ. ನಿರ್ದೇಶನದ ಚಿತ್ರ, ವಾಸ್ತವದ ಹತ್ತಾರು ಸಂಗತಿಗಳತ್ತ ಗಮನಸೆಳೆಯುಲ್ಲಿ ಯಶಸ್ವಿಯಾಗಿದೆ.

ಕೆಲವೊಂದು ಹಳೆ ಸಿನಿಮಾದ ಹೆಸರುಗಳು ಕಾಲ ಎಷ್ಟೇ ಮುಂದುವರಿದರೂ ಕಾಡುತ್ತದೆ. ಅಂತದ್ದೊಂದು ಟೈಟಲ್ “ಗುರಿ” Guri. ಎಂಬತ್ತರ ದಶಕದಲ್ಲಿ ನಟ ಸಾರ್ವಭೌಮ ಡಾ. ರಾಜಕುಮಾರ್ ಅಭಿನಯಿಸಿದ ಸೂಪರ್ ಹಿಟ್ ಚಿತ್ರವಿದು. ಟೈಟಲ್ ನಿಂದಲೂ ಫೇಮಸ್ ಆಗಿದ್ದ ಈ ಚಿತ್ರದ ಟೈಟಲ್ ಈಗ ಮತ್ತೆ ಸದ್ದು ಮಾಡುತ್ತಿದೆ. ಹೌದು “ಗುರಿ”ಎನ್ನುವ ಟೈಟಲ್ ನ್ನೇ ಬಳಸಿಕೊಂಡು ಹೊಸ ಸಿನಿಮಾವೊಂದು ಸಿದ್ದಗೊಂಡಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಈ ಚಿತ್ರದ ಟೀಸರ್ ಹಾಗೂ ಎರಡು ಹಾಡುಗಳು ಬಿಡುಗಡೆಗೊಂಡಿತು.

ಸರ್ಕಾರಿ ಶಾಲೆಗಳ ಕಥೆ ಹಿಡಿದಿಟ್ಟಿದೆ ಚಿತ್ರ

ಸೆಲ್ವಂ ಎಂ. Selvam M ನಿರ್ದೇಶಿಸಿರುವ “ಗುರಿ” ಚಿತ್ರ, ವಾಸ್ತವದ ಹತ್ತಾರು ಸಂಗತಿಗಳತ್ತ ಗಮನಸೆಳೆಯುಲ್ಲಿ ಯಶಸ್ವಿಯಾಗಿದೆ ಅಂತೆ. ಪ್ರಸ್ತುತ ಸರಕಾರಿ ಶಾಲೆಗಳು ಮುಚ್ಚುತ್ತಿರುವುದನ್ನು ಇದರಿಂದ ಮಕ್ಕಳ ಮೇಲಾಗುತ್ತಿರುವ ಅನಾಹುತವನ್ನು ಈ ಚಿತ್ರದ ಕತೆ ಹಿಡಿದಿಟ್ಟಿದೆ. ಜೊತೆಗೆ ಶಾಲೆ, ಶಿಕ್ಷಕ, ವಿದ್ಯಾರ್ಥಿಗಳ ಸಂಬಂಧವನ್ನು ಈ ಚಿತ್ರ ನಿರೂಪಿಸಲಿದೆ. ಇಬ್ಬರು ಬುದ್ದಿವಂತ ವಿದ್ಯಾರ್ಥಿಗಳು ಈ ಚಿತ್ರದ ಹೈಲೈಟ್ ಎನ್ನುತ್ತಾರೆ ನಿರ್ದೇಶಕರು. ನಿರ್ದೇಶಕರೇ ಇಲ್ಲಿ ಕತೆ ಚಿತ್ರಕಥೆ ಹಾಗೂ ಛಾಯಾಗ್ರಹಣನ್ನು ನಿರ್ವಹಿಸಿದ್ದಾರೆ. ಮಹಾನದಿ ಜೀಬಿತ್, ಟಿ.ಎಸ್.ನಾಗಾಭರಣ, ಅವಿನಾಶ್, ಅಚ್ಯುತ್ ಕುಮಾರ್, ಜಯಶ್ರೀ, ಉಗ್ರಂಮಂಜು, ಸಂದೀಪ್ ಮಲಾನಿ, ಮನೋಹರ್, ಪವನ್ ಕುಮಾರ್, ಚಂದ್ರಪ್ರಭಾ ಮೊದಲಾದವರು ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.

ವಿಷ್ಣುದುರ್ಗಾ ಪ್ರೊಡಕ್ಷನ್ Vishnudurga Production ಅಡಿಯಲ್ಲಿ ಈ ಸಿನಿಮಾವನ್ನು ರಾಧಿಕಾ ಎಸ್ ಆರ್ ಮತ್ತು ಚಿತ್ರಲೇಖಾ ಎಸ್ ನಿರ್ಮಿಸಿದ್ದು ಪಳನಿ ಡಿ ಸೇನಾಪತಿ ಸಂಗೀಜೀವಿತ್ ಭೂಷಣ್ ಸಂಗೀತದ ಮಾಧುರ್ಯವಿದೆ. ಕೆ.ಎಂ ಪ್ರಕಾಶ್ ಅವರ ಸಂಕಲನ, ವಿ ಮನೋಹರ್ –ಮಧುಸೂಧನ್ ಸಾಹಿತ್ಯವಿದೆ. ನೃತ್ಯದಲ್ಲಿ ಅರವಿಂದ್, ಸಾಹಸದಲ್ಲಿ ಮಂಜು ಅವರ ಕೈಚಳಕವಿದೆ. ಈಗಾಗಲೇ ಸಿನಿಮಾ ತಂಡ ಬೆಂಗಳೂರು. ಕೋಲಾರ ಭಾಗದಲ್ಲಿ ಚಿತ್ರೀಕರಣ ಮುಗಿಸಿದ್ದು, ಚಿತ್ರತಂಡ ಬಿಡುಗಡೆಯ ದಿನಾಂಕಕ್ಕಾಗಿ ಎದುರು ನೋಡುತ್ತಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವಾರ ಓಟಿಟಿಗೆ ಎಂಟ್ರಿ ಕೊಡುತ್ತಿದೆ ಎರಡು ಬಹುನಿರೀಕ್ಷಿತ ಸಿನಿಮಾಗಳು – Two of the Most Awaited Movies are Finally Entering OTT This Week

• ಮಳೆಗಾಲದಲ್ಲಿ ಮನೆಯಲ್ಲಿಯೇ ಬಿಂದಾಸ್ ಮನರಂಜನೆ• ಒಂದು ಆಕ್ಷನ್ ಇನ್ನೊಂದು ಅಪರೂಪದ...

ಓಟಿಟಿಯಲ್ಲಿ ಸದ್ದು ಮಾಡ್ತಿವೆ ಈ ಸೂಪರ್ ಹಿಟ್ ಚಿತ್ರಗಳು

ಜೂನ್ ಮಳೆಯೊಂದಿಗೆ ಆನಂದಿಸಬಹುದಾದ ಇಂಟರೆಸ್ಟಿಂಗ್ ಸಿನಿಮಾಗಳು ಆಕ್ಷನ್, ಕಾಮಿಡಿ, ಸಖತ್ ಥ್ರಿಲ್ಲರ್ ಮೂವಿಗಳದ್ದೇ...

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್ ರಂಗಭೂಮಿಯಿಂದ ಕಲಾಯಾತ್ರೆ ಆರಂಭಿಸಿ...

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ ಯುವ ಸಂಗೀತ ನಿರ್ದೇಶಕನ...