ಸಖತ್ ಸದ್ದು ಮಾಡುತ್ತಿದೆ “ಪಿಲಿಪಂಜ” ತುಳು ಚಿತ್ರ ಟೀಸರ್

Date:

  • ಸಖತ್ ಸದ್ದು ಮಾಡುತ್ತಿದೆ “ಪಿಲಿಪಂಜ” ತುಳು ಚಿತ್ರ ಟೀಸರ್
  • ಭರತ್ ಶೆಟ್ಟಿ ನಿರ್ದೇಶನದ, ಪಿಲಿಪಂಜ ಟೀಸರ್ ಬಿಡುಗಡೆಯಾಗಿದ್ದು ಸಖತ್ ಸಂಚಲನ ಸೃಷ್ಟಿಸುತ್ತಿದೆ.
  • ಸಿನಿಮಾದ ರೋಚಕತೆ, ಭೀಕರತೆಯನ್ನೂ ಸೂಕ್ಷ್ಮವಾಗಿ ಬಿಚ್ಚಿಡತ್ತೆ ಟೀಸರ್

ತುಳು ಚಿತ್ರರಂಗದಲ್ಲಿ ಈಗೀಗ ಹೊಸ ಹೊಸ ಭಿನ್ನ ಎಳೆಯ ಸಿನಿಮಾಗಳ ಸಂಚಲನ ಶುರುವಾಗಿದೆ. ನೋಡುಗನನ್ನು ಕಳೆದುಹಾಕುವ ಪಕ್ಕಾ ಪ್ರಾದೇಶಿಕ ಸೊಗಡಿನ ಔತಣ ಉಣಬಡಿಸುವ ಇಂತಹ ಚಿತ್ರಗಳ ಸಾಲಿಗೆ ಈಗೊಂದು ಹೊಸ ಎಂಟ್ರಿ “ಪಿಲಿಪಂಜ” Pilipanja. ಭರತ್ ಶೆಟ್ಟಿ Bharath Shetty ನಿರ್ದೇಶನದ, ಎಸ್. ಬಿ. ಗ್ರೂಪ್ S.B. Groups ಅರ್ಪಿಸುವ, ಶಿಯಾನ ಪ್ರೊಡಕ್ಶನ್ ಹೌಸ್ Shiyan Production House ಪ್ರತೀಕ್ ಯು ಪೂಜಾರಿ ಕಾವೂರು ಇವರ ನಿರ್ಮಾಣದ ಪಿಲಿಪಂಜ ಟೀಸರ್ ಬಿಡುಗಡೆಯಾಗಿದ್ದು ಸಖತ್ ಸಂಚಲನ ಸೃಷ್ಟಿಸುತ್ತಿದೆ.

ಅಬ್ಬರಿಸಿದ “ಪಿಲಿಪಂಜ”

ಕತ್ತಲು ಬೆಳಕಿನ ಹಿತವಾದ ಸಂಯೋಜನೆಯಲ್ಲಿ “ಚಂದ ಮಾಮ , ಅಮವಾಸ್ಯೆ ಎಂದೆಲ್ಲಾ ಆರಂಭವಾಗುವ ಈ ಟೀಸರ್ ನ ದೃಶ್ಯದಲ್ಲಿ ತುಳುನಾಡಿನ ಮಣ್ಣಿನ ಲಾಲಿತ್ಯವಿದೆ, ಕಾಡಿಸುವ ಹೊಸತನವಿದೆ. ಸಿನಿಮಾದ ಒಂದಷ್ಟು ರೋಚಕತೆ, ಭೀಕರತೆಯನ್ನೂ ಸೂಕ್ಷ್ಮವಾಗಿ ಬಿಚ್ಚಿಡುವ ಕೆಲಸ ಟೀಸರ್ ಮಾಡುತ್ತಿದೆ. ಹಾಗಾಗಿ ಸಿನಿಮಾದಲ್ಲಿ ಒಂದಷ್ಟು ಕೊಲೆ ಹಾರರ್ ಅಂಶಗಳೂ ಇದೆ ಎನ್ನುವ ಕುತೂಹಲ ಹಲವರಲ್ಲಿ ಎದ್ದಿದೆ. ಸೂಕ್ಷ್ಮವಾಗಿ ಗಮನಿಸಿದರೆ ಒಂದು ಗಟ್ಟಿ ಹಿನ್ನೆಲೆಯ ಕತೆಯೊಂದನ್ನು ಸಿನಿಮಾ ತಂಡ ಆರಿಸಿಕೊಂಡಿದೆ ಎನ್ನುವುದು ಟೀಸರ್ ನ ಒಂದೊಂದು ದೃಶ್ಯವನ್ನು ನೋಡಿದಾಗಲೇ ಮನದಟ್ಟಾಗುತ್ತದೆ.

ಭೋಜರಾಜ್ ವಾಮಂಜೂರು, ರವಿ ರಾಮಕುಂಜ, ರಮೇಶ್ ರೈ ಕುಕ್ಕುವಳ್ಳಿ, ಸುಂದರ ರೈ ಮಂದಾರ, ಶಿವಪ್ರಕಾಶ್ ಪೂಂಜ, ಪ್ರತೀಕ್ ಪೂಜಾರಿ, ಪ್ರವೀಣ್ ಕೊಡಕ್ಕಲ್, ರಂಜನ್ ಬೋಳೂರು, ರಕ್ಷಣ್ ಮಾಡೂರು, ಪ್ರಕಾಶ ಶೆಟ್ಟಿ, ವಿಜಯ ಲಹರಿ ಮೊದಲಾದವರು ಪಿಲಿಪಂಜಕ್ಕೆ ಬಣ್ಣ ಹಚ್ಚಿದ್ದಾರಂತೆ. ಉದಯ್ ಬಳ್ಳಾಲ್ ಛಾಯಾಗ್ರಹಣವಿದೆ. ಅಂತೂ ಈ ಪಿಲಿಪಂಜ ಟೀಸರ್ ಸಿನಿ ಪ್ರಿಯರಲ್ಲಿ ಕುತೂಹಲ ಹುಟ್ಟಿಸಿರುವುದು ಮಾತ್ರ ಸತ್ಯ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img

Popular

You Might Also Like
Related

ಏಪ್ರಿಲ್ 18 ಕ್ಕೆ ತೆರೆಯ ಮೇಲೆ ಮೊಳಗಲಿದೆ “ವೀರ ಚಂದ್ರಹಾಸ” ನ ಅಟ್ಟಹಾಸ

ಏಪ್ರಿಲ್ 18 ಕ್ಕೆ ತೆರೆಯ ಮೇಲೆ ಮೊಳಗಲಿದೆ “ವೀರ ಚಂದ್ರಹಾಸ" ನ...

ಸಿನಿಪ್ರಿಯರ ಮುಂದೆ ತೆರೆದುಕೊಳ್ಳಲಿದೆ “ನಿಮ್ದೇ ಕಥೆ”

ಸಿನಿಪ್ರಿಯರ ಮುಂದೆ ತೆರೆದುಕೊಳ್ಳಲಿದೆ “ನಿಮ್ದೇ ಕಥೆ” ಅಭಿಲಾಷ್ ದಳಪತಿ ಮತ್ತು ರಾಷಿಕಾ ಶೆಟ್ಟಿ...

“ಪೆನ್ ಡ್ರೈವ್” ಗೆ ಸಿಕ್ತು ಯು/ಎ ಪ್ರಮಾಣಪತ್ರ

“ಪೆನ್ ಡ್ರೈವ್” ಗೆ ಸಿಕ್ತು ಯು/ಎ ಪ್ರಮಾಣಪತ್ರ ಶೀರ್ಷಿಕೆಯಿಂದಲೇ ಕುತೂಹಲವನ್ನು ಹುಟ್ಟುಹಾಕಿದೆ ಸೆಬಾಸ್ಟಿಯನ್...

ಬಹುತೇಕ ಚಿತ್ರೀಕರಣ ಮುಗಿಸಿದ “ಬ್ರ್ಯಾಟ್” ಚಿತ್ರತಂಡ

ಬಹುತೇಕ ಚಿತ್ರೀಕರಣ ಮುಗಿಸಿದ “ಬ್ರ್ಯಾಟ್” ಚಿತ್ರತಂಡ ಕೌಸಲ್ಯಾ ಸುಪ್ರಜಾ ರಾಮ ಖ್ಯಾತಿಯ ಶಶಾಂಕ್...