- ಕುತೂಹಲ ಮೂಡಿಸ್ತಿದೆ “ಅಜ್ಞಾತವಾಸಿ” ಟ್ರೇಲರ್; ಏ.11 ಕ್ಕೆ ತೆರೆಗೆ ಬರಲಿದೆ ಚಿತ್ರ
- ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ ಈ ಸಿನಿಮಾ ಏಪ್ರಿಲ್ 11ರಂದು ರಿಲೀಸ್ ಆಗಲಿದೆ.
- ಸದ್ದು ಮಾಡ್ತಿದೆ ಹೇಮಂತ್ ಎಂ. ರಾವ್ ನಿರ್ಮಾಣದ ಈ ಸಿನಿಮಾ.
ಸ್ಯಾಂಡಲ್ ವುಡ್ ನ ಭರವಸೆಯ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ Janardhan Chikkanna ಆಕ್ಷನ್ ಕಟ್ ಹೇಳಿರುವ “ಅಜ್ಞಾತವಾಸಿ” Ajnathavasi ಸಿನಿಮಾ ಇದೇ ಏಪ್ರಿಲ್ 11 ಕ್ಕೆ ಬಿಡುಗಡೆಯಾಗಲಿದ್ದು, ಇತ್ತೀಚೆಗಷ್ಟೇ ಟ್ರೇಲರ್ ಹೊರಬಂದಿದೆ. ಟ್ರೇಲರ್ ಕುತೂಹಲಕಾರಿಯಾಗಿದ್ದು, 2 ನಿಮಿಷಗಳ ಕಾಲ ಉಸಿರು ಬಿಗಿಹಿಡಿದು ನೋಡುವಂತೆ ಮಾಡುತ್ತದೆ. ಹೇಮಂತ್ ಎಂ ರಾವ್ Hemanth M Rao ನಿರ್ಮಾಣದ ಈ ಚಿತ್ರದಲ್ಲಿ, ರಂಗಾಯಣ ರಘು, Ranghayana Raghu ಪವನಾ ಗೌಡ, ಸಿದ್ದು ಮೂಲಿಮನೆ, ಶರತ್ ಲೋಹಿತಾಶ್ವ, ರವಿಶಂಕರ್ ಗೌಡ ಮುಂತಾದವರು ನಟಿಸಿದ್ದಾರೆ.
ಮರ್ಡರ್ ಮಿಸ್ಟರಿ ಕಹಾನಿ “ಅಜ್ಞಾತವಾಸಿ”
ಇದು ಮಲೆನಾಡಿನ ಸಣ್ಣ ಹಳ್ಳಿಯೊಂದರಲ್ಲಿ ನಡೆಯುವ ಕಾಲ್ಪನಿಕ ಕಥೆಯಾಗಿದ್ದು, “ಆ ಹಳ್ಳಿಯಲ್ಲಿ ಪೊಲೀಸ್ ಠಾಣೆ ಸ್ಥಾಪನೆಯಾಗಿ 25 ವರ್ಷ ಆಗಿರುತ್ತದೆ. ಯಾವುದೇ ಸಣ್ಣ ಕೇಸ್ ಸಹ ಅಲ್ಲಿ ದಾಖಲಾಗಿರುವುದಿಲ್ಲ. 1997ರಲ್ಲಿ ಮರ್ಡರ್ ಕೇಸ್ ದಾಖಲಾಗುತ್ತದೆ. ಅನುಭವ ಇಲ್ಲದ ಪೊಲೀಸ್ ಅಲ್ಲಿಗೆ ಬಂದು ಈ ಕೇಸ್ ಬಗೆಹರಿಸುತ್ತಾನೆ“ ಇದೇ ಚಿತ್ರದ ಮುಖ್ಯ ಕಥಾವಸ್ತು ಎಂದಿದ್ದಾರೆ ನಿರ್ದೇಶಕರು. ಜನರ ಮೇಲೆ ಭರವಸೆ ಇಟ್ಟು ನಿರ್ಮಿಸಿರುವ ಚಿತ್ರ ಇದು ಎಂದಿದ್ದಾರೆ ನಿರ್ಮಾಪಕರು. ಏಪ್ರಿಲ್ 11 ರಂದು ತೆರೆಗೆ ಬರುತ್ತಿರುವ ಈ ಚಿತ್ರವನ್ನು ಸಿನಿಪ್ರೇಕ್ಷಕರು ಹೇಗೆ ಸ್ವಾಗತಿಸುತ್ತಾರೆ ಕಾದು ನೋಡಬೇಕಿದೆ.