ಕುತೂಹಲ ಮೂಡಿಸ್ತಿದೆ “ಅಜ್ಞಾತವಾಸಿ” ಟ್ರೇಲರ್; ಏ.11 ಕ್ಕೆ ತೆರೆಗೆ ಬರಲಿದೆ ಚಿತ್ರ

Date:

  • ಕುತೂಹಲ ಮೂಡಿಸ್ತಿದೆ “ಅಜ್ಞಾತವಾಸಿ” ಟ್ರೇಲರ್; ಏ.11 ಕ್ಕೆ ತೆರೆಗೆ ಬರಲಿದೆ ಚಿತ್ರ
  • ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ ಈ ಸಿನಿಮಾ ಏಪ್ರಿಲ್ 11ರಂದು ರಿಲೀಸ್ ಆಗಲಿದೆ.
  • ಸದ್ದು ಮಾಡ್ತಿದೆ ಹೇಮಂತ್ ಎಂ. ರಾವ್ ನಿರ್ಮಾಣದ ಈ ಸಿನಿಮಾ.

ಸ್ಯಾಂಡಲ್ ವುಡ್ ನ ಭರವಸೆಯ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ Janardhan Chikkanna ಆಕ್ಷನ್ ಕಟ್ ಹೇಳಿರುವ “ಅಜ್ಞಾತವಾಸಿ” Ajnathavasi ಸಿನಿಮಾ ಇದೇ ಏಪ್ರಿಲ್ 11 ಕ್ಕೆ ಬಿಡುಗಡೆಯಾಗಲಿದ್ದು, ಇತ್ತೀಚೆಗಷ್ಟೇ ಟ್ರೇಲರ್ ಹೊರಬಂದಿದೆ. ಟ್ರೇಲರ್ ಕುತೂಹಲಕಾರಿಯಾಗಿದ್ದು, 2 ನಿಮಿಷಗಳ ಕಾಲ ಉಸಿರು ಬಿಗಿಹಿಡಿದು ನೋಡುವಂತೆ ಮಾಡುತ್ತದೆ. ಹೇಮಂತ್ ಎಂ ರಾವ್ Hemanth M Rao ನಿರ್ಮಾಣದ ಈ ಚಿತ್ರದಲ್ಲಿ, ರಂಗಾಯಣ ರಘು, Ranghayana Raghu ಪವನಾ ಗೌಡ, ಸಿದ್ದು ಮೂಲಿಮನೆ, ಶರತ್ ಲೋಹಿತಾಶ್ವ, ರವಿಶಂಕರ್ ಗೌಡ ಮುಂತಾದವರು ನಟಿಸಿದ್ದಾರೆ.

ಮರ್ಡರ್ ಮಿಸ್ಟರಿ ಕಹಾನಿ “ಅಜ್ಞಾತವಾಸಿ”

ಇದು ಮಲೆನಾಡಿನ ಸಣ್ಣ ಹಳ್ಳಿಯೊಂದರಲ್ಲಿ ನಡೆಯುವ ಕಾಲ್ಪನಿಕ ಕಥೆಯಾಗಿದ್ದು, “ಆ ಹಳ್ಳಿಯಲ್ಲಿ ಪೊಲೀಸ್ ಠಾಣೆ ಸ್ಥಾಪನೆಯಾಗಿ 25 ವರ್ಷ ಆಗಿರುತ್ತದೆ. ಯಾವುದೇ ಸಣ್ಣ ಕೇಸ್ ಸಹ ಅಲ್ಲಿ ದಾಖಲಾಗಿರುವುದಿಲ್ಲ. 1997ರಲ್ಲಿ ಮರ್ಡರ್ ಕೇಸ್ ದಾಖಲಾಗುತ್ತದೆ. ಅನುಭವ ಇಲ್ಲದ ಪೊಲೀಸ್ ಅಲ್ಲಿಗೆ ಬಂದು ಈ ಕೇಸ್ ಬಗೆಹರಿಸುತ್ತಾನೆ“ ಇದೇ ಚಿತ್ರದ ಮುಖ್ಯ ಕಥಾವಸ್ತು ಎಂದಿದ್ದಾರೆ ನಿರ್ದೇಶಕರು. ಜನರ ಮೇಲೆ ಭರವಸೆ ಇಟ್ಟು ನಿರ್ಮಿಸಿರುವ ಚಿತ್ರ ಇದು ಎಂದಿದ್ದಾರೆ ನಿರ್ಮಾಪಕರು. ಏಪ್ರಿಲ್ 11 ರಂದು ತೆರೆಗೆ ಬರುತ್ತಿರುವ ಈ ಚಿತ್ರವನ್ನು ಸಿನಿಪ್ರೇಕ್ಷಕರು ಹೇಗೆ ಸ್ವಾಗತಿಸುತ್ತಾರೆ ಕಾದು ನೋಡಬೇಕಿದೆ.

Agnyathavasi – Official Trailer

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವಾರ ಓಟಿಟಿಗೆ ಎಂಟ್ರಿ ಕೊಡುತ್ತಿದೆ ಎರಡು ಬಹುನಿರೀಕ್ಷಿತ ಸಿನಿಮಾಗಳು – Two of the Most Awaited Movies are Finally Entering OTT This Week

• ಮಳೆಗಾಲದಲ್ಲಿ ಮನೆಯಲ್ಲಿಯೇ ಬಿಂದಾಸ್ ಮನರಂಜನೆ• ಒಂದು ಆಕ್ಷನ್ ಇನ್ನೊಂದು ಅಪರೂಪದ...

ಓಟಿಟಿಯಲ್ಲಿ ಸದ್ದು ಮಾಡ್ತಿವೆ ಈ ಸೂಪರ್ ಹಿಟ್ ಚಿತ್ರಗಳು

ಜೂನ್ ಮಳೆಯೊಂದಿಗೆ ಆನಂದಿಸಬಹುದಾದ ಇಂಟರೆಸ್ಟಿಂಗ್ ಸಿನಿಮಾಗಳು ಆಕ್ಷನ್, ಕಾಮಿಡಿ, ಸಖತ್ ಥ್ರಿಲ್ಲರ್ ಮೂವಿಗಳದ್ದೇ...

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್ ರಂಗಭೂಮಿಯಿಂದ ಕಲಾಯಾತ್ರೆ ಆರಂಭಿಸಿ...

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ ಯುವ ಸಂಗೀತ ನಿರ್ದೇಶಕನ...